ಪಾಕಿಸ್ತಾನಿ ಪ್ರಜೆಗಳ ಪತ್ತೆ | ಕೇಂದ್ರ ಗುಪ್ತಚರ ವೈಫಲ್ಯ ಕಾರಣ ಎಂದ ಗೃಹ ಸಚಿವ

ಬೆಂಗಳೂರಿಗೆ ಬಂದು ಅವರು ಪಾಸ್ ಪೋರ್ಟ್ ಮಾಡಿಸಿಕೊಂಡಿದ್ದಾರೆ, ಸೆಂಟ್ರಲ್ ಏಜೆನ್ಸಿ ಎಲ್ಲೋ ಒಂದು ಕಡೆ ಫೇಲ್ ಆಗಿದೆ ಎಂದು ಆರೋಪಿಸಿದ ಅವರು ಡಾ ಜಿ ಪರಮೇಶ್ವರ್‌, ಬೆಂಗಳೂರಿನಲ್ಲಿ ಅವರು ವಾಸವಾಗಿರುವ ವಿಷಯ ತಿಳಿದ ಕೂಡಲೇ ನಮ್ಮ ಪೊಲೀಸರು ಅವರನ್ನು ಬಂಧಿಸಿದ್ದಾರೆ ಎಂದಿದ್ದಾರೆ

Update: 2024-10-05 08:30 GMT
ಡಾ.ಜಿ ಪರಮೇಶ್ವರ್‌
Click the Play button to listen to article

ಪಾಕಿಸ್ತಾನ ಪ್ರಜೆ ಸೇರಿದಂತೆ ವಿದೇಶಿಗರು ಬೆಂಗಳೂರಿಗೆ ಬಂದು ಪಾಸ್​​ಪೋರ್ಟ್​ ಮಾಡಿಕೊಳ್ಳುತ್ತಾರೆ ಅಂದ್ರೆ ಎಲ್ಲೋ ಒಂದು ಕಡೆ ಕೇಂದ್ರ ಗುಪ್ತಚರ ಇಲಾಖೆ ವಿಫಲವಾಗಿದೆ ಎಂದೇ ಅಲ್ಲವೇ? ಎಂದು ಗೃಹ ಸಚಿವ ಜಿ ಪರಮೇಶ್ವರ್ ಪ್ರಶ್ನಿಸಿದರು.

ಹುಬ್ಬಳ್ಳಿಯಲ್ಲಿ ಮಾಧ್ಯಮದೊಂದಿಗೆ  ಮಾತನಾಡಿದ ಅವರು, ಕೇಂದ್ರ ಸರ್ಕಾರದ ಹತ್ತಿರ ಅನೇಕ ಡಿಪಾರ್ಟೆಂಟ್ ಗಳಿವೆ, ಅದನ್ನು ಕೇಂದ್ರ ಸರ್ಕಾರದವರು ಗಮನದಲ್ಲಿ ಇಟ್ಟುಕೊಳ್ಳಬೇಕು ಮತ್ತು ಈ ಸಂಬಂಧ ಕಾರ್ಯಾಚರಣೆ ನಡೆಸಿ ರಾಜ್ಯಕ್ಕೆ ಮಾಹಿತಿ ನೀಡುವಂತಹ ಕೆಲಸವಾಗಬೇಕು, ಆದರೆ, ಪಾಕಿಸ್ತಾನಿ ಪ್ರಜೆಗಳ ಬಂಧನ ವಿಚಾರದಲ್ಲಿ ಈ ರೀತಿ ಆಗಿಲ್ಲ. ಬೆಂಗಳೂರಿಗೆ ಬಂದು ಅವರು ಪಾಸ್ ಪೋರ್ಟ್ ಮಾಡಿಸಿಕೊಂಡಿದ್ದಾರೆ, ಸೆಂಟ್ರಲ್ ಏಜೆನ್ಸಿ ಎಲ್ಲೋ ಒಂದು ಕಡೆ ಫೇಲ್ ಆಗಿದೆ ಎಂದು ಆರೋಪಿಸಿದ ಅವರು, ಪಾಕಿಸ್ತಾನ ಪ್ರಜೆ ಬೆಂಗಳೂರಿನಲ್ಲಿ ವಾಸವಾಗಿರುವ ವಿಷಯ ತಿಳಿದ ಕೂಡಲೇ ನಮ್ಮ ಪೊಲೀಸರು ಅವರನ್ನು ಬಂಧಿಸಿದ್ದಾರೆ. ನಮ್ಮ ಪೊಲೀಸರು ಸಮರ್ಥರಿದ್ದಾರೆ, ಉಳಿದವರನ್ನೂ ಶೀಘ್ರ ಪತ್ತೆ ಹಚ್ಚುತ್ತೇವೆ ಎಂದು ಹೇಳಿದರು.

ನಕಲಿ ಗುರುತಿನಲ್ಲಿ ನೆಲೆಸಿದ್ದ ಪಾಕಿಸ್ತಾನಿ ಪ್ರಜೆಗಳು 

ಬೆಂಗಳೂರು ಹೊರವಲಯದ ಜಿಗಣಿಯಲ್ಲಿ ಅಕ್ರಮವಾಗಿ ವಾಸವಿದ್ದ ಮೂವರು ಪಾಕಿಸ್ತಾನಿ ಪ್ರಜೆಗಳನ್ನು ಬಂಧಿಸಲಾಗಿತ್ತು. ಇದಾದ ಬಳಿಕ ಬೆಂಗಳೂರಿನ ಪೀಣ್ಯದಲ್ಲಿ ಮತ್ತೆ  ನಾಲ್ವರು ಪಾಕಿಸ್ತಾನಿ ಪ್ರಜೆಗಳನ್ನು ಪೊಲೀಸರು ಬಂಧಿಸಿದ್ದರು. ಇವರು ನಕಲಿ ಗುರುತಿನ ಚೀಟಿ ಬಳಸುತ್ತಿದ್ದರು. ಒಟ್ಟು ಅಕ್ರಮವಾಗಿ ನೆಲೆಸಿದ್ದ ಏಳು ಪಾಕ್‌ ನಿವಾಸಿಗಳನ್ನು ಪೊಲೀಸರು ಬಂಧಿಸಿ ತನಿಖೆ ನಡೆಸುತ್ತಿದ್ದಾರೆ. 

ಭಾರತೀಯ ಖಾತೆ UPI ಐಡಿ ಬಳಸುತ್ತಿದ್ದ ಆರೋಪಿಗಳು

ಪೊಲೀಸ್ ಅಧಿಕಾರಿಗಳ ಪ್ರಕಾರ, ಬುಧವಾರ ರಾತ್ರಿ ಬಂಧಿಸಲಾದ ಮೂವರು ಸದಸ್ಯರ ಕುಟುಂಬವು ಬ್ರಿಟನ್ ಮೂಲದ ಬ್ಯಾಂಕ್‌ನಿಂದ ಭಾರಿ ಮೊತ್ತವನ್ನು ಪಡೆದಿದೆ. ಶಂಕಿತರ ಬ್ಯಾಂಕ್ ಖಾತೆಗಳಿಗೆ 10,000, 40,000 ಮತ್ತು 80,000 ರೂ.ಗಳ ಹಲವಾರು ಪಾವತಿಗಳನ್ನು ಮಾಡಲಾಗಿದೆ. ಹೆಚ್ಚುವರಿಯಾಗಿ, ಬಂಧಿತ ಕುಟುಂಬವು ಅನೇಕ ವಹಿವಾಟುಗಳ ಮೂಲಕ ಹಣವನ್ನು ಸ್ವೀಕರಿಸಲು ಮುಖ್ಯವಾಗಿ ಭಾರತೀಯ ಖಾತೆಗಳಿಂದ UPI ಐಡಿಗಳನ್ನು ಹೊಂದಿತ್ತು ಎಂದು ಅವರು ತಿಳಿಸಿದ್ದಾರೆ. 

ಪೊಲೀಸರು ನೂರಾರು ಪುಟಗಳ ಬ್ಯಾಂಕ್ ಸ್ಟೇಟ್‌ಮೆಂಟ್‌ಗಳನ್ನು ಸ್ಕ್ಯಾನ್ ಮಾಡುತ್ತಿದ್ದಾರೆ ಮತ್ತು ಅವರು ಪಡೆದ ಹಣವನ್ನು ಅಂದಾಜು ಮಾಡಲು ಪ್ರಯತ್ನಿಸುತ್ತಿದ್ದಾರೆ. ಅವರು ಈ ಹಣವನ್ನು ಏನು ಮಾಡಿದ್ದಾರೆ ಎಂಬುದರ ಕುರಿತು ತನಿಖೆ ನಡೆಸುತ್ತಿದ್ದಾರೆ. ಬೆಂಗಳೂರಿನಲ್ಲಿ MFI ಕಾರ್ಯಾಚರಣೆಗಳ ಹಿಂದಿರುವ ವ್ಯಕ್ತಿಯನ್ನು ಬಂಧಿಸಲು ಮತ್ತು ಹಣದ ಜಾಡು ಹಿಡಿಯಲು ಪೊಲೀಸರು ಪ್ರಯತ್ನಿಸುತ್ತಿದ್ದಾರೆ. ಏಕೆಂದರೆ ಬಂಧಿಸಲ್ಪಟ್ಟ ಎರಡೂ ಕುಟುಂಬಗಳು ಸಂಬಳ ಮತ್ತು ವ್ಯಾಪಾರ ಆದಾಯದ ರೂಪದಲ್ಲಿ ಆರ್ಥಿಕ ಭದ್ರತೆಯನ್ನು ಹೊಂದಿದ್ದವು.

"ಇತ್ತೀಚಿನ ಪ್ರಕರಣದಲ್ಲಿ, ಪತಿ ಎಣ್ಣೆ ವ್ಯಾಪಾರವನ್ನು ನಡೆಸುತ್ತಿದ್ದರೆ,  ಹೆಂಡತಿ ಗೃಹಿಣಿಯಾಗಿದ್ದರು. ಅವರು ತಮ್ಮ ಗುರುತನ್ನು ಮರೆಮಾಚಲು ಕೆಲವು ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಬಯಸಿದ್ದರು" ಎಂದು ಅಧಿಕಾರಿ ಹೇಳಿದರು.

Tags:    

Similar News