ಡೆಂಗ್ಯೂ ಆಯ್ತು, ಇದೀಗ ಎಚ್‌1ಎನ್‌1 ಭೀತಿ | ದಿಢೀರನೇ 7 ಪಟ್ಟು ಹೆಚ್ಚಾಯ್ತು ಸೋಂಕು; ಬೆಂಗಳೂರಿನಲ್ಲೇ ಅತಿಹೆಚ್ಚು

ಈ ವರ್ಷ ಜುಲೈ 31 ರವರೆಗೆ ರಾಜ್ಯಾದ್ಯಂತ 855 ಪ್ರಕರಣಗಳು ವರದಿಯಾಗಿದ್ದು, ಬೆಂಗಳೂರಿನಲ್ಲಿ ಬಿಬಿಎಂಪಿ ವ್ಯಾಪ್ತಿಯಲ್ಲಿ ಅತಿ ಹೆಚ್ಚು ಪ್ರಕರಣಗಳು ದಾಖಲಾಗಿವೆ. ಕಳೆದ ವರ್ಷ ಇದು ರಾಜ್ಯಾದ್ಯಂತ ಕೇವಲ 118 ಪ್ರಕರಣ ವರದಿಯಾಗಿದ್ದವು.

Update: 2024-08-30 07:34 GMT
ಹೆಚ್‌1ಎನ್‌1
Click the Play button to listen to article

ರಾಜ್ಯದಲ್ಲಿ ಎಚ್1ಎನ್1 ಪ್ರಕರಣಗಳ ಸಂಖ್ಯೆ ಈ ವರ್ಷ ಕಳೆದ ವರ್ಷಕ್ಕೆ ಹೋಲಿಸಿದರೆ ಏಳು ಪಟ್ಟು ಹೆಚ್ಚಾಗಿದೆ ಎಂದು ಆರೋಗ್ಯ ಇಲಾಖೆಯ ಅಂಕಿಅಂಶಗಳು ಹೇಳಿವೆ.

ಈ ವರ್ಷ ಜುಲೈ 31 ರವರೆಗೆ ರಾಜ್ಯಾದ್ಯಂತ 855 ಪ್ರಕರಣಗಳು ವರದಿಯಾಗಿದ್ದು, ಬೆಂಗಳೂರಿನಲ್ಲಿ ಬಿಬಿಎಂಪಿ ವ್ಯಾಪ್ತಿಯಲ್ಲಿ ಅತಿ ಹೆಚ್ಚು ಪ್ರಕರಣಗಳು ದಾಖಲಾಗಿವೆ. ಕಳೆದ ವರ್ಷ ರಾಜ್ಯಾದ್ಯಂತ ಒಟ್ಟು 118 ಪ್ರಕರಣ ವರದಿಯಾಗಿದ್ದವು.

ಈ ವೈರಸ್‌ಗೆ ರಾಜ್ಯದಲ್ಲಿ ಇಬ್ಬರು ಬಲಿಯಾಗಿದ್ದು, ಮೈಸೂರಿನಲ್ಲಿ 15 ವರ್ಷದ ಹುಡುಗ ಮತ್ತು ದೊಡ್ಡಬಳ್ಳಾಪುರದಲ್ಲಿ 48 ವರ್ಷದ ಮಹಿಳೆ H1N1 ನಿಂದ ಸಾವನ್ನಪ್ಪಿದ್ದಾರೆ. ವೈರಸ್ ಪರೀಕ್ಷೆ ಮಾಡಿಸಿ ಪಾಟಿಸಿವ್ ಬಂದ ಮೂವರು ಇತರೆ ರೋಗಗಳು ಮತ್ತು ವಯಸ್ಸಿನ ಕಾರಣದಿಂದ ಸಾವನ್ನಪ್ಪಿದ್ದಾರೆ ಎಂದು ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಆರೋಗ್ಯ ಇಲಾಖೆಯು ಎಚ್1ಎನ್1 ಬಗ್ಗೆ ಸಕ್ರಿಯ ಕಣ್ಗಾವಲು ನಡೆಸದಿದ್ದರೂ, ಹೆಚ್ಚಿನ ಸಾರ್ವಜನಿಕ ಜಾಗೃತಿ ಮತ್ತು ಹೆಚ್ಚಿದ ಲ್ಯಾಬ್ ಪರೀಕ್ಷೆಯು ವೈರಸ್ ಅನ್ನು ನಿಯಂತ್ರಣದಲ್ಲಿ ಇಟ್ಟಿದೆ. ನಾವು ಪ್ರಕರಣಗಳನ್ನು ನಿಕಟವಾಗಿ ಮೇಲ್ವಿಚಾರಣೆ ಮಾಡುತ್ತಿದ್ದೇವೆ ಎಂದು ಇಂಟಿಗ್ರೇಟೆಡ್ ಡಿಸೀಸ್ ಸರ್ವೈಲೆನ್ಸ್ ಪ್ರೋಗ್ರಾಂನ ಯೋಜನಾ ನಿರ್ದೇಶಕ ಡಾ.ಅನ್ಸಾರ್ ಅಹಮದ್ ತಿಳಿಸಿದ್ದಾರೆ.

ಬೆಂಗಳೂರಿನ ವೈದ್ಯರು ಕಳೆದ ಎರಡು ವಾರಗಳಲ್ಲಿ ಎಚ್1ಎನ್1 ಪ್ರಕರಣಗಳು ದ್ವಿಗುಣಗೊಂಡಿರುವುದನ್ನು ಗಮನಿಸಿದ್ದಾರೆ. ಜ್ವರದ ಕಾರಣ ಆಸ್ಪತ್ರೆಗಳಿಗೆ ಭೇಟಿ ನೀಡುವವರ ಸಂಖ್ಯೆ ಬೆಂಗಳೂರಿನಲ್ಲಿ ಗಣನೀಯವಾಗಿ ಹೆಚ್ಚಾಗಿದೆ.

Tags:    

Similar News