ಗ್ರೇಟರ್‌ ಬೆಂಗಳೂರು| ಆಯುಕ್ತರು, ಜಂಟಿ ಆಯುಕ್ತರ ನೇಮಕ ಮಾಡಿ ಸರ್ಕಾರ ಆದೇಶ

ಬೆಂಗಳೂರು ಕೇಂದ್ರ ಪಾಲಿಕೆ ಆಯುಕ್ತರಾಗಿ ಹಿರಿಯ ಐಎಎಸ್‌ ಅಧಿಕಾರಿ ರಾಜೇಂದ್ರ ಚೋಳನ್‌, ಹೆಚ್ಚುವರಿ ಆಯುಕ್ತರಾಗಿ(ಅಭಿವೃದ್ಧಿ) ರಾಹುಲ್‌ ಶರಣಪ್ಪ ಸಂಕನೂರು, ಪೂರ್ವ ಪಾಲಿಕೆ ಆಯುಕ್ತರಾಗಿ ರಮೇಶ್‌ ಡಿ.ಎಸ್‌ ಅವರನ್ನು ನೇಮಕ ಮಾಡಲಾಗಿದೆ.;

Update: 2025-09-02 11:44 GMT
ಬಿಬಿಎಂಪಿ ಕೇಂದ್ರ ಕಚೇರಿ

ಬೆಂಗಳೂರಿನ ಆಡಳಿತದಲ್ಲಿ ಮಹತ್ವದ ಬದಲಾವಣೆಯಾಗಿದ್ದು, ಮಂಗಳವಾರದಿಂದ ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ಕಾರ್ಯಾರಂಭ ಮಾಡಲಿದೆ. ರಾಜ್ಯ ಸರ್ಕಾರವು ಬಿಬಿಎಂಪಿ ಆಡಳಿತ ವ್ಯಾಪ್ತಿಯನ್ನು ಐದು ಪ್ರತ್ಯೇಕ ನಗರ ಪಾಲಿಕೆಗಳಿಗೆ ಹಂಚಿಕೆ ಮಾಡಿದ್ದು, ಇದೀಗ ಐಎಎಸ್‌ ಅಧಿಕಾರಿಗಳನ್ನು ನೇಮಕ ಮಾಡಿ ಆದೇಶ ಹೊರಡಿಸಿದೆ.

ಬೆಂಗಳೂರು ಕೇಂದ್ರ ಪಾಲಿಕೆ ಆಯುಕ್ತರಾಗಿ ಹಿರಿಯ ಐಎಎಸ್‌ ಅಧಿಕಾರಿ ರಾಜೇಂದ್ರ ಚೋಳನ್‌, ಹೆಚ್ಚುವರಿ ಆಯುಕ್ತರಾಗಿ(ಅಭಿವೃದ್ಧಿ) ರಾಹುಲ್‌ ಶರಣಪ್ಪ ಸಂಕನೂರು, ಪೂರ್ವ ಪಾಲಿಕೆ ಆಯುಕ್ತರಾಗಿ ರಮೇಶ್‌ ಡಿ.ಎಸ್‌, ಹೆಚ್ಚುವರಿ ಆಯುಕ್ತರಾಗಿ(ಅಭಿವೃದ್ಧಿ) ಲೋಕಂಡೆ ಸ್ನೇಹಲ್‌ ಸುಧಾಕರ್‌, ಉತ್ತರ ಪಾಲಿಕೆ ಆಯುಕ್ತರಾಗಿ ಪೊಮ್ಮಲ ಸುನೀಲ್‌ ಕುಮಾರ್‌, ಹೆಚ್ಚುವರಿ ಆಯುಕ್ತರಾಗಿ(ಅಭಿವೃದ್ಧಿ) ಲತಾ ಆರ್, ದಕ್ಷಿಣ ಪಾಲಿಕೆ ಆಯುಕ್ತರಾಗಿ ರಮೇಶ್‌ ಕೆ.ಎನ್‌, ಹೆಚ್ಚುವರಿ ಆಯುಕ್ತರಾಗಿ(ಅಭಿವೃದ್ಧಿ) ಪಾಂಡ್ವೆ ರಾಹುಲ್‌ ತುಕಾರಾಮ್‌, ಪಶ್ಚಿಮ ಪಾಲಿಕೆ ಆಯುಕ್ತರಾಗಿ ರಾಜೇಂದ್ರ ಕೆ.ವಿ, ಹೆಚ್ಚುವರಿ ಆಯುಕ್ತರಾಗಿ(ಅಭಿವೃದ್ಧಿ) ದಿಗ್ವಿಜಯ್‌ ಬೋಡ್ಕೆ ಅವರನ್ನು ನೇಮಕ ಮಾಡಿ ಆದೇಶಿಸಿದೆ.

ಜಂಟಿ ಆಯುಕ್ತರ ನೇಮಕ 

ಬೆಂಗಳೂರು ಕೇಂದ್ರ ಪಾಲಿಕೆಯ ವಲಯ -1ಕ್ಕೆ ಜಂಟಿ ಆಯುಕ್ತರಾಗಿ ರಂಗನಾಥ್‌ ಕೆ. ನೇಮಕಾವಾಗಿದ್ದು ವಲಯ -2ರಲ್ಲಿ ಹೆಚ್ಚುವರಿ ಪ್ರಭಾರ ಹುದ್ದೆ, ಪೂರ್ವ ಪಾಲಿಕೆಯ ವಲಯ 1ಕ್ಕೆ ದಾಕ್ಷಾಯಿಣಿ ಪ್ರಭಾರವಾಗಿ ನೇಮಕವಾಗಿದ್ದು ವಲಯ 2ಕ್ಕೆ ಜಂಟಿ ಆಯುಕ್ತರಾಗಿದ್ದಾರೆ. ಪಶ್ಚಿಮ ಪಾಲಿಕೆಯ ವಲಯ -1ಕ್ಕೆ ಆರತಿ ಆನಂದ್‌, ವಲಯ- 2ಕ್ಕೆ ಸಂಗಪ್ಪ, ಉತ್ತರ ಪಾಲಿಕೆಯ ವಲಯ -1ಕ್ಕೆ ಮೊಹಮ್ಮದ್‌ ನಯೀಮ್‌ ಮೋಮಿನ್‌ , ವಲಯ- 2ಕ್ಕೆ ಹೆಚ್ಚುವರಿ ಪ್ರಭಾರ ಹುದ್ದೆ, ದಕ್ಷಿಣ ಪಾಲಿಕೆ ವಲಯ -1ಕ್ಕೆ ಜಂಟಿ ಆಯುಕ್ತರಾಗಿ ಮಧು ಎನ್‌.ಎನ್‌ ಹಾಗೂ ವಲಯ -2ಕ್ಕೆ ಸತೀಶ್‌ ಬಾಬು ನೇಮಕವಾಗಿದ್ದಾರೆ. 

ಉಪ ಆಯುಕ್ತರ ನೇಮಕ 

ಕೇಂದ್ರ ಪಾಲಿಕೆಯ ವಲಯ- 1ಕ್ಕೆ ರಾಜು ಕೆ. ವಲಯ -2ಕ್ಕೆ ಹೆಚ್ಚುವರಿ ಪ್ರಭಾರ ಹುದ್ದೆ, ಪೂರ್ವದ ವಲಯ -1ಕ್ಕೆ  ಶಶಿಕುಮಾರ್‌ ನೇಮಕವಾಗಿದ್ದು ವಲಯ -2ಕ್ಕೆ ಹೆಚ್ಚವರಿ ಪ್ರಭಾರ ಹುದ್ದೆ, ಪಶ್ಚಿಮ ಪಾಲಿಕೆಯ ವಲಯ -1ಕ್ಕೆ ಅಬ್ದುಲ್‌ ರಾಬ್‌ ಹಾಗೂ ವಲಯ -2ಕ್ಕೆ ಮಂಜುನಾಥ್‌ ಸ್ವಾಮಿ ಎಲ್‌, ಉತ್ತರ ಪಾಲಿಕೆಯ ವಲಯ- 1ಕ್ಕೆ ಮಮತ ಬಿ.ಕೆ. ಹಾಗೂ ವಲಯ- 2ಕ್ಕೆ ಮಂಗಳಗೌರಿ, ದಕ್ಷಿಣ ಪಾಲಿಕೆ ವಲಯ -1ಕ್ಕೆ ಗಗನ ಕೆ. ಹಾಗೂ ವಲಯ- 2ಕ್ಕೆ ಡಿ.ಕೆ. ಬಾಬು ಅವರನ್ನು ನೇಮಕ ಮಾಡಿ ನಗರಾಭಿವೃದ್ಧಿ ಇಲಾಖೆ ಅಧೀನ ಕಾರ್ಯದರ್ಶಿ ಲಕ್ಷ್ಮೀ ಸಾಗರ್‌ ಎನ್‌.ಕೆ. ಆದೇಶ ಹೊರಡಿಸಿದ್ದಾರೆ. 

Tags:    

Similar News