Gas Leak Tragedy| ಗ್ಯಾಸ್‌ ಸೋರಿಕೆ: ಹೊತ್ತಿ ಉರಿದ ಮನೆ, ಇಬ್ಬರು ಸಜೀವದಹನ, ನಾಲ್ವರ ಸ್ಥಿತಿ ಚಿಂತಾಜನಕ

ಗುರುವಾರ ಬೆಳಗ್ಗೆ ಕೆಲಸಕ್ಕೆ ತೆರಳುವಾಗ ನಾಗರಾಜ್ ದೇವರ ಮುಂದೆ ದೀಪ ಹಚ್ಚಿದ್ದರು. ಈ ವೇಳೆ ಖಾಲಿಯಾಗಿದ್ದ ಸಿಲಿಂಡರ್ ಬದಲಾಯಿಸಲು ಮಗ ಅಭಿಷೇಕ್ ಮುಂದಾಗಿದ್ದ. ಅಜಾಗರೂಕತೆಯಿಂದ ಸಿಲಿಂಡರ್ ಹೊಂದಿಸುತ್ತಿದ್ದ ವೇಳೆ ಗ್ಯಾಸ್ ಸೋರಿಕೆ ಆಗಿ ದೀಪದ ಬೆಂಕಿ ತಗುಲಿದೆ.;

Update: 2025-05-01 07:30 GMT

ಸಾಂದರ್ಭಿಕ ಚಿತ್ರ 

ಅಡುಗೆ ಮನೆಯ ಗ್ಯಾಸ್ ಸೋರಿಕೆಯಾಗಿ ಮನೆ ಹೊತ್ತಿ ಉರಿದ ಪರಿಣಾಮ ಇಬ್ಬರು ಸಜೀವದಹನಗೊಂಡು ನಾಲ್ವರ ಸ್ಥಿತಿ ಗಂಭೀರವಾಗಿರುವ ಘಟನೆ ಬೆಂಗಳೂರು ಉತ್ತರ ತಾಲೂಕಿನ ಅಡಕಮಾರನಹಳ್ಳಿಯಲ್ಲಿ ನಡೆದಿದೆ. ನಾಗರಾಜ್ (50) ಮತ್ತು ಶ್ರೀನಿವಾಸ್ (50) ಮೃತ ದುರ್ದೈವಿಗಳು. ಅಭಿಷೇಕ್, ಶಿವಶಂಕರ್, ಲಕ್ಷ್ಮೀದೇವಿ ಮತ್ತು ಬಸವ ಎಂಬುವವರ ಸ್ಥಿತಿ ಚಿಂತಾಜನಕವಾಗಿದೆ. 

ಗಂಗಯ್ಯ ಎಂಬುವವರಿಗೆ ಸೇರಿದ ಬಾಡಿಗೆ ಮನೆಯಲ್ಲಿ ಬಳ್ಳಾರಿಯ ನಾಗರಾಜ್​,  ಪತ್ನಿ ಲಕ್ಷ್ಮಿ ದೇವಿ (35), ಮಕ್ಕಳಾದ ಬಸನಗೌಡ (19) ಅಭಿಷೇಕ್ ಗೌಡ (18) ವಾಸವಿದ್ದರು. ಗುರುವಾರ ಬೆಳಗ್ಗೆ ಕೆಲಸಕ್ಕೆ ತೆರಳುವಾಗ ನಾಗರಾಜ್ ದೇವರಿಗೆ ದೀಪ ಹಚ್ಚಿದ್ದರು. ಈ ವೇಳೆ ಖಾಲಿಯಾಗಿದ್ದ ಸಿಲಿಂಡರ್ ಬದಲಾಯಿಸಲು ಮಗ ಅಭಿಷೇಕ್ ಮುಂದಾಗಿದ್ದ. ಅಜಾಗರೂಕತೆಯಿಂದ ಸಿಲಿಂಡರ್ ಹೊಂದಿಸುತ್ತಿದ್ದ ವೇಳೆ ಗ್ಯಾಸ್ ಸೋರಿಕೆ ಆಗಿ ದೀಪದ ಬೆಂಕಿ ತಗುಲಿದೆ. ಬೆಂಕಿಯ ತೀವ್ರತೆಗೆ ನಾಗರಾಜ್ ಹಾಗೂ ಶ್ರೀನಿವಾಸ್ ಮೃತಪಟ್ಟಿದ್ದಾರೆ.

ಮನೆ ಹೊತ್ತಿ ಉರಿದಾಗ ಲಕ್ಷ್ಮಿದೇವಿ, ಬಸವನಗೌಡ, ಅಭಿಷೇಕ್​ ಒಳಗೆ ಸಿಲುಕಿದ್ದರು. ಈ ವೇಳೆ ಲಕ್ಷ್ಮಿದೇವಿ, ಬಸವನಗೌಡ ಮನೆಯಿಂದ ಓಡಿ ಬಂದಿದ್ದು, ನಾಗರಾಜ್ ಹಾಗೂ ಅಭಿಷೇಕ್​ ಅಗ್ನಿಯ ಕೆನ್ನಾಲಿಗೆಯಲ್ಲಿ ಸಿಲುಕಿಕೊಂಡಿದ್ದರು. 

ಈ ವೇಳೆ ಪಕ್ಕದ ಮನೆಯಲ್ಲಿದ್ದ ಶ್ರೀನಿವಾಸ್ ಹಾಗೂ ಮನೆ ಮಾಲೀಕ ಶಿವಶಂಕರ್ ಬೆಂಕಿ ಹಾರಿಸಲು ಮುಂದಾಗಿದ್ದರು. ಅಭಿಷೇಕ್​ನನ್ನು ಉಳಿಸಲು ಶ್ರೀನಿವಾಸ್ ಹೋಗಿದ್ದು, ಇತ್ತ ನಾಗರಾಜ್​ರನ್ನು ಉಳಿಸಲು ಹೋಗಿದ್ದ ಶಿವಶಂಕರ್​ಗೆ ಬೆಂಕಿ ತಗುಲಿದೆ. ಕೂಡಲೇ ಸ್ಥಳಿಯರು ಬೆಂಕಿ ತಗುಲಿದವರನ್ನ ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಿದ್ದಾರೆ. ಆದರೆ ನಾಗರಾಜ್ ಹಾಗೂ ಶ್ರೀನಿವಾಸ್ ಇಬ್ಬರೂ ಸ್ಥಳದಲ್ಲೇ ಮೃತಪಟ್ಟಿದ್ದಾರೆ. 

Tags:    

Similar News