Earthquake: ವಿಜಯಪುರ ಜಿಲ್ಲೆಯಾದ್ಯಂತ ಕಂಪಿಸಿದ ಭೂಮಿ
Earthquake: ಕೋಟಾ ತಾಲೂಕಿನ ಸೋಮದೇವರಹಟ್ಟಿ, ಮಲಕನದೇರಹಟ್ಟಿ, ಹುಬನೂರ, ಟಕ್ಕಳಕಿ, ಘೋಣಸಗಿ, ಕಳ್ಳಕವಟಗಿ, ಬಾಬಾ ಪ್ರದೇಶದಲ್ಲಿ 2:14ರಿಂದ 2:15 ಸಮಯದಲ್ಲಿ ಭೂಮಿಯಿಂದ ಜೋರಾದ ಶಬ್ದವಾಗಿದೆ.;
By : The Federal
Update: 2025-04-01 11:23 GMT
ಭೂಕಂಪ
ವಿಜಯಪುರ ಜಿಲ್ಲೆಯ ತಿಕೋಟಾ ತಾಲೂಕಿನೆಲ್ಲೆಡೆ ಭೂಕಂಪನದ ಅನುಭವವಾಗಿದ್ದು, ಭೂಗರ್ಭದಿಂದ ಕೇಳಿಸಿದ ಜೋರಾದ ಸದ್ದಿಗೆ ಜನರು ಗಾಬರಿಗೊಂಡು ಮನೆಯಿಂದ ಹೊರಗೆ ಓಡಿ ಬಂದಿದ್ದಾರೆ.
ತಿಕೋಟಾ ತಾಲೂಕಿನ ಸೋಮದೇವರಹಟ್ಟಿ, ಮಲಕನದೇರಹಟ್ಟಿ, ಹುಬನೂರ, ಟಕ್ಕಳಕಿ, ಘೋಣಸಗಿ, ಕಳ್ಳಕವಟಗಿ, ಬಾಬಾ ಪ್ರದೇಶದಲ್ಲಿ 2:14ರಿಂದ 2:15 ಸಮಯದಲ್ಲಿ ಭೂಮಿಯಿಂದ ಜೋರಾದ ಶಬ್ದವಾಗಿದೆ.
ಕಳೆದ ವರ್ಷ ನಾಲ್ಕೈದು ಬಾರಿ ಭೂಮಿ ಕಂಪಿಸಿದ್ದು, ಈ ವರ್ಷ ಮೊದಲ ಭೂಕಂಪನ ಅನುಭವವಾಗಿದೆ. ಭೂಮಿ ಕಂಪಿಸಿದ್ದರಿಂದ ಜನರಲ್ಲಿ ಆತಂಕ ಸೃಷ್ಟಿಯಾಗಿದೆ.