ಧರ್ಮಸ್ಥಳ ಪ್ರಕರಣ : ಗನ್‌ಮ್ಯಾನ್‌ ಭದ್ರತೆ ನೀಡಲು ಎಸ್‌ಐಟಿಗೆ ಸಾಕ್ಷಿದಾರ ಮನವಿ

ದೂರುದಾರರು ಬೆಳ್ತಂಗಡಿಯ SIT ಕಚೇರಿಗೆ ಖಾಸಗಿ ಕಾರಿನಲ್ಲಿ ಬಂದಿದ್ದು, ಅವರ ಸುರಕ್ಷತೆಗಾಗಿ ಪೊಲೀಸರು ಕಾವಲು ಕಾಯುತ್ತಿದ್ದಾರೆ. ಅವರೊಂದಿಗೆ ಪೊಲೀಸ್ ವಾಹನ ಮತ್ತು ಇಬ್ಬರು ಸಿಬ್ಬಂದಿಯನ್ನು ಭದ್ರತೆಗಾಗಿ ನಿಯೋಜನೆ ಮಾಡಲಾಗಿದೆ.;

Update: 2025-08-08 09:11 GMT

ಸಾಕ್ಷಿದಾರ

ಧರ್ಮಸ್ಥಳದ ಹಲವೆಡೆ ಶವ ಹೂತಿಟ್ಟಿರುವುದಾಗಿ ಹೇಳಿರುವ ಸಾಕ್ಷಿ ದೂರುದಾರ ಇದೀಗ ಗನ್‌ಮ್ಯಾನ್‌ ಭದ್ರತೆ ಒದಗಿಸುವಂತೆ ಎಸ್‌ಐಟಿ ಅಧಿಕಾರಿಗಳಿಗೆ ಮನವಿ ಮಾಡಿದ್ದಾನೆ ಎಂದು ತಿಳಿದುಬಂದಿದೆ. 

ಬುಧವಾರ ಸಂಜೆ ಧರ್ಮಸ್ಥಳದಲ್ಲಿ ನಡೆದ ಘರ್ಷಣೆ ಬಳಿಕ ದೂರುದಾರ ಈ ಮನವಿ ಸಲ್ಲಿಸಿದ್ದಾನೆ ಎಂದು ತಿಳಿದುಬಂದಿದೆ. ಗುರುವಾರದ ವಿಚಾರಣೆ ಸಮಯದಲ್ಲಿ ದೂರುದಾರರ ಪರ ವಕೀಲರು ವಿಶೇಷ ತನಿಖಾ ತಂಡಕ್ಕೆ (SIT) ಈ ಕುರಿತು ಲಿಖಿತ ಮನವಿ ನೀಡಿದ್ದು, ಹುಡುಕಾಟ ಮುಗಿದ ನಂತರವೂ ಗನ್‌ಮ್ಯಾನ್ ಭದ್ರತೆ ಮುಂದುವರಿಸಬೇಕು ಎಂದು SIT ಎಸ್‌ಪಿ ಜಿತೇಂದ್ರ ದಯಾಮ್‌ ಅವರ ಮುಂದೆ ಒತ್ತಾಯಿಸಿದ್ದಾರೆ.

ದೂರುದಾರರು ಬೆಳ್ತಂಗಡಿಯ SIT ಕಚೇರಿಗೆ ಖಾಸಗಿ ಕಾರಿನಲ್ಲಿ ಬಂದಿದ್ದು, ಅವರ ಸುರಕ್ಷತೆಗಾಗಿ ಪೊಲೀಸರು ಕಾವಲು ಕಾಯುತ್ತಿದ್ದಾರೆ. ಅವರೊಂದಿಗೆ ಪೊಲೀಸ್ ವಾಹನ ಮತ್ತು ಇಬ್ಬರು ಸಿಬ್ಬಂದಿಯನ್ನು ಭದ್ರತೆಗಾಗಿ ನಿಯೋಜನೆ ಮಾಡಲಾಗಿದೆ. 

ಧರ್ಮಸ್ಥಳದಲ್ಲಿನ ಅಪರಾಧಗಳ ತನಿಖೆ ಮುಂದುವರಿಯುತ್ತಿರುವ ಸಂದರ್ಭದಲ್ಲಿ 6 ಮಂದಿ ಸ್ಥಳೀಯರು ಸ್ವಯಂಪ್ರೇರಿತವಾಗಿ ವಿಶೇಷ ತನಿಖಾ ತಂಡವನ್ನು (SIT) ಸಂಪರ್ಕಿಸಿರುವುದು ಸ್ವಾಗತಾರ್ಹ ಬೆಳವಣಿಗೆ ಎಂದು ಸುಜಾತ ಪರ ವಕೀಲ ಮಂಜುನಾಥ್ ಎನ್‌. ತಿಳಿಸಿದ್ದಾರೆ.

ವಿಶೇಷ ತನಿಖಾ ತಂಡ ರಚನೆಯಾದ ತಕ್ಷಣವೇ, ಕ್ರಿಮಿನಲ್ ಪ್ರೊಸೀಜರ್ ಕೋಡ್ ಅಡಿ SIT ಕಚೇರಿಯನ್ನು ಪೊಲೀಸ್ ಠಾಣೆ ಎಂದು ಘೋಷಿಸಬೇಕು ಎಂದು ಮನವಿ ಮಾಡಲಾಗಿತ್ತು. ಇದುವರೆಗೆ ಆ ಕಚೇರಿಯನ್ನು ಪೊಲೀಸ್ ಠಾಣೆಯೆಂದು ಘೋಷಿಸದಿರುವುದರಿಂದ ಅನಗತ್ಯ ತೊಂದರೆಗಳಾಗುತ್ತಿವೆ. ಇದರಿಂದಾಗಿ, ವಿಶೇಷ ತನಿಖಾ ತಂಡಕ್ಕೆ ಸಹಕಾರ ನೀಡಲು ರಚನೆಯಾದ ವ್ಯವಸ್ಥೆಯು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂದು ಮಂಜುನಾಥ್ ಎನ್. ಹೇಳಿದ್ದಾರೆ. ಜೊತೆಗೆ, ಸಹಾಯವಾಣಿಯ ಸೌಲಭ್ಯವೂ ಸಂಪೂರ್ಣವಾಗಿ ಬಳಕೆಯಾಗುತ್ತಿಲ್ಲ ಎಂದು ಅವರು ಆರೋಪಿಸಿದರು. 

Tags:    

Similar News