ಧರ್ಮಸ್ಥಳ ಪ್ರಕರಣ: ಅಸ್ಥಿಪಂಜರ ಸಿಕ್ಕರೂ ಸಾವಿಗೆ ಕಾರಣ ಪತ್ತೆ ಅಸಾಧ್ಯ? ತಜ್ಞರ ಅಭಿಪ್ರಾಯವೇನು?

ಲಭ್ಯವಾದ ಆಸ್ಥಿಪಂಜರ ಪರೀಕ್ಷೆಗೊಳಪಡಿಸಿದರೂ ಸಾವಿಯ ಬಗೆಯನ್ನು ಪತ್ತೆ ಹಚ್ಚುವುದು ಕಷ್ಟಕರವಾಗಿದೆ. ಕೇವಲ ಆಸ್ಥಿ ಪಂಜರವು ಗಂಡೋ-ಹೆಣ್ಣೋ ಎಂಬುದನ್ನು ಮಾತ್ರ ಪತ್ತೆ ಹಚ್ಚಲು ಸಾಧ್ಯ.;

Update: 2025-08-16 02:54 GMT

ಧರ್ಮಸ್ಥಳದಲ್ಲಿ ಹೂತಿಟ್ಟಿರುವ ಶವಗಳ ಪ್ರಕರಣದ ತನಿಖೆಯನ್ನು ಎಸ್‌ಐಟಿ ಅಧಿಕಾರಿಗಳು ಮುಂದುವರಿಸಿದ್ದಾರೆ.  ಮಾಹಿತಿದಾರ ಸುಮಾರು 30 ಸ್ಥಳಗಳ ಮಾಹಿತಿ ನೀಡಿದ್ದು, 17 ೭ ಕಡೆ ಎಸ್‌ಐಟಿ ತಂಡ ತಪಾಸಣೆ ನಡೆಸಿದೆ.

ಆರನೇ ಸಮಾಧಿ ಸ್ಥಳದಲ್ಲಿ ಮಾನವನ ಅಸ್ಥಿ ಪಂಜರ ಪತ್ತೆಯಾಗಿರುವುದು ಕುತೂಹಲ ಮೂಡಿಸಿದೆ. ಆದರೆ, ಲಭ್ಯವಾದ ಆಸ್ಥಿಪಂಜರ ಮತ್ತಿತರ ಸುಮಾರು 122 ಸ್ಯಾಂಪಲ್​​​ಗಳು ವಿಧಿವಿಜ್ಞಾನ ಪರೀಕ್ಷೆಗೆ ಕಳುಹಿಸಲಾಗಿದೆ. ಪರೀಕ್ಷೆಗೊಳಪಡಿಸಿದರೂ ಸಾವಿಯ ಬಗೆಯನ್ನು ಪತ್ತೆ ಹಚ್ಚುವುದು ಕಷ್ಟಕರವಾಗಿದೆ. ಕೇವಲ ಆಸ್ಥಿ ಪಂಜರವು ಗಂಡೋ-ಹೆಣ್ಣೋ ಎಂಬುದನ್ನು ಮಾತ್ರ ಪತ್ತೆ ಹಚ್ಚಲು ಸಾಧ್ಯ. ಇದರಿಂದ ಮೃತ ಕುಟುಂಬಗಳಿಗೆ ನ್ಯಾಯ ಸಿಗಲಿದೆಯೇ? ಎಂಬುದು ಯಕ್ಷ ಪ್ರಶ್ನೆ ಮೂಡಿದೆ. 

ಅಪರಿಚಿತ ವ್ಯಕ್ತಿ ತೋರಿಸಿದ ಸ್ಥಳಗಳನ್ನು ಅಗೆಯಲಾಗಿದೆ. ಈವರೆಗೆ 17ಸ್ಥಳಗಳಲ್ಲಿ ಅಗೆಯಲಾಗಿದ್ದು, ಆರನೇ ಸ್ಥಳದಲ್ಲಿ ಮಾತ್ರ ಆಸ್ಥಿಪಂಜರಗಳು ಲಭ್ಯವಾಗಿವೆ. ಆಸ್ಥಿಪಂಜರವನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಇನ್ನು, ಬಾಹುಬಲಿ ಬೆಟ್ಟದಲ್ಲಿ ನೂರಾರು ಮೂಳೆಗಳು ಲಭ್ಯವಾಗಿದ್ದು, ಈ ಬಗ್ಗೆಯೂ ಹೆಚ್ಚಿನ ಮಾಹಿತಿಯನ್ನು ಪಡೆದುಕೊಳ್ಳಲಾಗುತ್ತಿದೆ. ಮಣಿಪಾಲ್‌ ಆಸ್ಪತ್ರೆಯ ವಿಧಿವಿಜ್ಞಾನ ಪ್ರಯೋಗಾಲಯದಲ್ಲಿ ಪರೀಕ್ಷೆ    ನಡೆಸಲಾಗಿದೆ. ವರದಿ ಆಧಾರದ ಮೇಲೆ ಎಸ್‌ಐಟಿ ತನಿಖೆ ಮುಂದುವರಿಸಿದೆ ಎಂದು  ಪೊಲೀಸ್‌ ಮೂಲಗಳು ಹೇಳಿವೆ. 

ಸಾಕ್ಷಿದಾರನ ಹೇಳಿಕೆ ಪ್ರಕಾರ ಮೊದಲ ಪಾಯಿಂಟ್​ನಿಂದ ಎಸ್​​ಐಟಿ ಶೋಧ ಆರಂಭಿಸಿದ ಬಳಿಕ ಒಟ್ಟು 122 ಸ್ಯಾಂಪಲ್​​​ಗಳು ಪರೀಕ್ಷೆಗೆ ಕಳುಹಿಸಲಾಗಿದೆ.  ಲಭ್ಯವಾದ ಆಸ್ಥಿಪಂಜರ ಮತ್ತಿತರ ಅವಶೇಷಗಳನ್ನು ಮೊದಲು ಮೆಡಿಸನ್‌ ತಜ್ಞರು ಪರೀಕ್ಷೆಗೊಳಪಡಿಸಿದ ಬಳಿಕ ವಿಧಿವಿಜ್ಞಾನ ತಜ್ಞರು ಪರಿಶೀಲನೆ ನಡೆಸಲಾಗುತ್ತದೆ. ಮೊದಲು ಮೆಡಿಸನ್‌ ತಜ್ಞರು ಮೊದಲು ತಲೆ ಬುರಡೆಯನ್ನು ಪರಿಶೀಲನೆ ನಡೆಸಲಿದ್ದಾರೆ. ತಲೆ ಬುರಡೆ ಮೂಲಕ ಗಂಡೋ ಅಥವಾ ಹೆಣ್ಣೋ ಎಂಬುದನ್ನು ಪತ್ತೆ ಹಚ್ಚುತ್ತಾರೆ. ಗಂಡು ಅಥವಾ ಹೆಣ್ಣೋ ಎಂಬುದನ್ನು ಪತ್ತೆ ಮಾಡಿದ ಬಳಿಕ ಆ ಆಸ್ಥಿಪಂಜರದ ವಯಸ್ಸು ಎಷ್ಟು ಎಂಬುದನ್ನು ಅಂದಾಜಿಸಲಾಗುತ್ತದೆ.  ಪತ್ತೆಯಾದ ಆಸ್ಥಿಪಂಜರವು ಗಂಡಿನದ್ದು ಎಂದು ಹೇಳಲಾಗಿದ್ದು, ಎಸ್‌ಐಟಿ ಅಧಿಕಾರಿಗಳು ಸಹ ವರದಿ ಪಡೆದುಕೊಂಡಿದ್ದಾರೆ. ಸರ್ಕಾರಕ್ಕೂ ಸಹ ಆ ಬಗ್ಗೆ ವಿಷಯ ಮುಟ್ಟಿಸಿದ್ದಾರೆ ಎಂದು ಹೇಳಲಾಗಿದೆ.

ಸಾವಿನ ಕಾರಣ ಹೇಳಲು ಸಾಧ್ಯವಿಲ್ಲ

ಧರ್ಮಸ್ಥಳದಲ್ಲಿ 15-20  ವರ್ಷಗಳ ಹಿಂದೆ ಕಾಣೆಯಾದವರು, ಕೊಲೆಯಾದವರು, ಅತ್ಯಾಚಾರಕ್ಕೊಳಗಾಗಿ ಹತ್ಯೆಗೊಳಗಾದವರ ಶವಗಳನ್ನು ಪತ್ತೆ ಹಚ್ಚಲಾಗುತ್ತದೆ. ನೂರಾರು ಮಂದಿ ಧರ್ಮಸ್ಥಳ ಸುತ್ತಮುತ್ತ ಹೂತಿಡಲಾಗಿದೆ ಎನ್ನಲಾಗಿದೆ. 15-20 ವರ್ಷಗಳ ಹಿಂದಿನ ಶವಗಳ ಅವಶೇಷಗಳನ್ನು ವಿಧಿವಿಜ್ಞಾನ ಪ್ರಯೋಗಾಲಯದಲ್ಲಿ ಪರೀಕ್ಷೆ ನಡೆಸಲಾಗುತ್ತದೆ. ಆದರೆ, ಮೃತರ ಆಸ್ಥಿಪಂಜರವು ಗಂಡೋ ಅಥವಾ ಹೆಣ್ಣೋ ಎಂಬುದು ಮಾತ್ರ ಗೊತ್ತಾಗುತ್ತದೆ. ಆದರೆ, ಯಾವ ಬಗೆಯಲ್ಲಿ ಮೃತಪಡಲಾಗಿದೆ ಎಂಬುದರ ಬಗ್ಗೆ ತಿಳಿಯುವುದು ಕಷ್ಟಕರ ಎಂಬುದು ವಿಧಿವಿಜ್ಞಾನ ಪ್ರಯೋಗಾಲಯದ ತಜ್ಞರು ತಿಳಿಸಿದ್ದಾರೆ. 

ಈ ಬಗ್ಗೆ ದ ಫೆಡರಲ್‌ ಕರ್ನಾಟಕದ ಜತೆ ಮಾತನಾಡಿದ ಕ್ಲ್ಯೂ೪ ಎವಿಡೆನ್ಸ್‌ ಫೋರೆನ್ಸಿಕ್‌ನ ಮುಖ್ಯಸ್ಥ ಬಿ.ಎನ್‌.ಫಣಿಂದ್ರ, ಎಷ್ಟೇ ವರ್ಷಗಳ ಆಸ್ಥಿಪಂಜರವಾದರೂ ಪರೀಕ್ಷೆ ಮಾಡಬಹುದು. ಆದರೆ, ಅದು ಗಂಡೋ? ಅಥವಾ ಹೆಣ್ಣೋ? ಎಂಬುದನ್ನು ಮಾತ್ರ ಪತ್ತೆ ಮಾಡಬಹುದು. ಆದರೆ ಯಾವ ರೀತಿಯಲ್ಲಿ ಸಾವನ್ನಪ್ಪಲಾಗಿದೆ ಎಂಬುದನ್ನು ಗುರುತಿಸಲು ಸಾಧ್ಯವಿಲ್ಲ. ಒಂದು ವೇಳೆ ಮೂಳೆಗಳಿಗೆ ಬಲವಾಗಿ ಪೆಟ್ಟು ಬಿದ್ದಿದ್ದರೆ ಯಾವುದರಿಂದ ಪೆಟ್ಟು ಬಿದ್ದಿರಬಹುದು ಎಂಬುದರ ಬಗ್ಗೆ ತಿಳಿದುಕೊಳ್ಳಬಹುದು. ಆದರೆ, ಅತ್ಯಾಚಾರ ನಡೆಸಲಾಗಿದೆಯೇ ಅಥವಾ ಕೊಲೆ ಮಾಡಲಾಗಿದೆಯೇ ಎಂಬುದರ ಬಗ್ಗೆ ತಿಳಿದುಕೊಳ್ಳಲು ಕಷ್ಟಕರವಾಗಲಿದೆ ಎಂದು ಹೇಳಿದರು. 

ದಶಕಗಳ ಹಿಂದಿನ ಆಸ್ಥಿಪಂಜರದಲ್ಲಿ ಯಾವುದೇ ರೀತಿಯ ಮಾಂಸಖಂಡಗಳು ಇರುವುದಿಲ್ಲ. ಮಾಂಸಖಂಡಗಳಿದ್ದರೆ ಅದರ ಆಧಾರದ ಮೇಲೆ ಅತ್ಯಾಚಾರ ನಡೆಸಿ ಕೊಲೆ ಮಾಡಲಾಗಿದೆಯೇ? ಕೊಲೆಗೆ ಯಾವುದಾದರೂ ಆಯುಧ ಬಳಕೆ ಮಾಡಲಾಗಿದೆಯೇ ಎಂಬುದನ್ನು ಗುರುತಿಸಲು ಸಾಧ್ಯವಿಲ್ಲ. ಎಸ್‌ಐಟಿ ಅಧಿಕಾರಿಗಳು ಸಹ ಆಸ್ಥಿಪಂಜರವನ್ನು ವಿಧಿವಿಜ್ಞಾನ ಪ್ರಯೋಗಾಲಯದಲ್ಲಿ ಹೆಣ್ಣೋ ಅಥವಾ ಗಂಡಿನದ್ದೋ ಮತ್ತು ಮೃತಪಟ್ಟಾಗ ವಯಸ್ಸು ಎಷ್ಟಿರಬಹುದು ಎಂಬುದರ ಬಗ್ಗೆ ಮಾತ್ರ ಮಾಹಿತಿ ಪಡೆದುಕೊಳ್ಳಲಿದ್ದಾರೆ. ಕೊಲೆಗೆ ಕಾರಣಗಳು ಲಭ್ಯವಾಗುವುದಿಲ್ಲ. ಯಾವ ರೀತಿಯಲ್ಲಿ ತನಿಖೆ ಮುಂದುವರಿಸಲಿದ್ದಾರೋ ಗೊತ್ತಿಲ್ಲ. ಅದು ಅವರಿಗೆ ಬಿಟ್ಟ ಸಂಗತಿಯಾಗಿರುತ್ತದೆ ಎಂದರು. 

ಪೊಲೀಸ್‌ ಅಧಿಕಾರಿಗಳಿಗೆ ಯಾರಾದರೂ ತಮ್ಮವರನ್ನು ಕಳೆದುಕೊಂಡವರು ಹೋಗಿ ದೂರು ನೀಡಿದರೆ ಅದರ ಬಗ್ಗೆ ತನಿಖೆ ಕೈಗೊಳ್ಳಬಹುದು. ತಮ್ಮವರನ್ನು ಕಳೆದುಕೊಂಡವರು ನೀಡುವ ಮಾಹಿತಿ ಮೇರೆಗೆ ಮೃತರು ಇಂತಹವರು ಎಂದು ತಿಳಿದುಕೊಳ್ಳಬಹುದು. ಆಸ್ಥಿಪಂಜರದ ಜತೆಗೆ ದೇಹದ ಮಾಂಸಖಂಡಗಳು ಸಿಕ್ಕರೆ ನಿಖರವಾಗಿ ಸಾವಿಗೆ ಕಾರಣಗಳನ್ನು ತಿಳಿಸಬಹುದು. ಆದರೆ, ಧರ್ಮಸ್ಥಳ ಪ್ರಕರಣದಲ್ಲಿ ಇಂತಹ ಯಾವುದೇ ಕುರುಹುಗಳು ಸಾಧ್ಯವಿಲ್ಲ. ಯಾಕೆಂದರೆ ದಶಕಗಳೇ ಕಳೆದಿರುವ ಹಿನ್ನೆಲೆಯಲ್ಲಿ ಆಸ್ಥಿಪಂಜರಗಳನ್ನು ಮಾತ್ರ ನಿರೀಕ್ಷಿಸಬಹುದು ಎಂದು ತಿಳಿಸಿದರು. 

ತನಿಖೆಗೆ ಫಾರೆನ್ಸಿಕ್ ಸವಾಲು

ಪತ್ತೆಯಾಗಿರುವ ಅವಶೇಷಗಳು ಒಂದು ವರ್ಷಕ್ಕಿಂತಲೂ ಹಳೆಯದಾಗಿರುವುದರಿಂದ, ಅವುಗಳ ಪರೀಕ್ಷೆಯು ಸವಾಲಿನದ್ದಾಗಿದೆ. ಮಂಗಳೂರಿನ ವಿಧಿವಿಜ್ಞಾನ ಪ್ರಯೋಗಾಲಯದಲ್ಲಿ (FSL) ಈ ಹಿಂದೆ ಕಾರ್ಯನಿರ್ವಹಿಸಿದ್ದ ಡಾ. ಮಹಾಬಲೇಶ್ವರ ಭಟ್ ಅವರ ಪ್ರಕಾರ, "ಮಂಗಳೂರು ಅಥವಾ ಬೆಂಗಳೂರಿನಲ್ಲಿ ಇಷ್ಟು ಹಳೆಯ ಪಳೆಯುಳಿಕೆಗಳನ್ನು ನಿಖರವಾಗಿ ಪರೀಕ್ಷಿಸುವಂತಹ ಅತ್ಯಾಧುನಿಕ ಲ್ಯಾಬ್ ಇಲ್ಲ. ಇವುಗಳನ್ನು ಹೈದರಾಬಾದ್​ನ ಲ್ಯಾಬ್​ಗೆ ಕಳುಹಿಸಬೇಕು, ಅಲ್ಲಿ ವರದಿ ಬರಲು ಕನಿಷ್ಠ 15 ದಿನಗಳು ಬೇಕಾಗಬಹುದು," ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

30 ಸ್ಥಳಗಳ ಬಗ್ಗೆ ಮಾಹಿತಿ

ಎಸ್ಐಟಿ ತಂಡಕ್ಕೆ ದೂರು ನೀಡಿರುವ ಅಪರಿಚಿತ ವ್ಯಕ್ತಿ ಸುಮಾರು 30 ಸ್ಥಳಗಳ ಬಗ್ಗೆ ಮಾಹಿತಿ ನೀಡಿದ್ದಾನೆ. ಈವರೆಗೆ 17 ಸ್ಥಳಗಳಲ್ಲಿ ಪರಿಶೀಲನೆ ನಡೆಸಲಾಗಿದೆ. ಧರ್ಮಸ್ಥಳದ ಸುತ್ತಮುತ್ತಲಿನ ಪ್ರದೇಶದಲ್ಲಿ ಶವಗಳನ್ನು ಹೂತಿಡಲಾಗಿದೆ ಎಂದು ತಿಳಿಸಿದ್ದಾನೆ. ಈ ನಿಟ್ಟಿನಲ್ಲಿ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಧರ್ಮಸ್ಥಳದ ನಾನಾ ಸ್ಥಳಗಳಲ್ಲಿ ಶೋಧ ಕಾರ್ಯಾಚರಣೆ ಕೈಗೊಳ್ಳಲಾಗಿದೆ. ಆದರೆ, ಪೊಲೀಸರು ಎಲ್ಲಾ ಕಡೆಯೂ ಶೋಧ ನಡೆಸುವುದು ಅನುಮಾನ ಎಂದೇ ಹೇಳಲಾಗಿದೆ. ರಾಜಕಾರಣಿಗಳು ಸೇರಿದಂತೆ ಹಲವರಿಂದ ಶೋಧ ಕಾರ್ಯಕ್ಕೆ ಆಕ್ಷೇಪಗಳು ವ್ಯಕ್ತವಾಗುತ್ತಿವೆ. ಅಲ್ಲದೇ, ಇಷ್ಟು ಶೋಧ ನಡೆಸಿದ ಸ್ಥಳಗಳ ಪೈಕಿ ಕೇವಲ ಒಂದು ಕಡೆ ಮಾತ್ರ ಆಸ್ಥಿಪಂಜರ ಲಭ್ಯವಾಗಿದೆ. ಹೀಗಾಗಿ ಪೊಲೀಸರು ಸಹ ಮುಕ್ತಾಯಗೊಳಿಸು ಚಿಂತನೆ ನಡೆಸಿದ್ದಾರೆ ಎಂದು ಹೇಳಲಾಗಿದೆ. 

279 ಅನಾಥ ಶವಗಳ ಸಮಾಧಿ

ಧರ್ಮಸ್ಥಳ ಗ್ರಾಮಪಂಚಾಯಿತಿ ಮಾಹಿತಿ ಪ್ರಕಾರ ಕಳೆದ ಮೂರು ದಶಕದಲ್ಲಿ 279 ಅನಾಥ ಶವಗಳನ್ನು ಸಮಾಧಿ ಮಾಡಲಾಗಿದೆ.  ಈ ಪೈಕಿ ಒಂದು ನವಜಾತಶಿಶು ಸಹ ಇರುವುದು ಗೊತ್ತಾಗಿದೆ. 1987 ರಿಂದ 2025 ರವರೆಗೆ ಧರ್ಮಸ್ಥಳದಲ್ಲಿ ಶಿಶುವಿನ ಶವ ಸೇರಿದಂತೆ 279 ಅನಾಥ ಶವಗಳನ್ನು ಸಮಾಧಿ ಮಾಡಲಾಗಿದೆ ಎಂದು ಧರ್ಮಸ್ಥಳ ಗ್ರಾಮ ಪಂಚಾಯತ್ ಮಾಹಿತಿ ನೀಡಿದೆ.

279 ಅನಾಥ ಶವಗಳಲ್ಲಿ 219 ಶವಗಳು ಪುರುಷರದ್ದಾಗಿದ್ದು, 46 ಶವಗಳು ಮಹಿಳೆಯರದ್ದಾಗಿವೆ. ಶಿಶು ಸೇರಿದಂತೆ 14 ಶವಗಳ ಲಿಂಗವನ್ನು ಗುರುತಿಸಲು ಸಾಧ್ಯವಾಗಿಲ್ಲ ಎಂದು ಹೇಳಿದೆ. 2003-2004, 2006-2007 ಮತ್ತು 2014-2015 ರ ಅವಧಿಯಲ್ಲಿ 17 ಅನಾಥ ಶವಗಳನ್ನು ಸಮಾಧಿ ಮಾಡಲಾಗಿದೆ. ಕಳೆದ 10 ವರ್ಷಗಳಿಂದ 101 ಅನಾಥ ಶವಗಳನ್ನು ಸಮಾಧಿ ಮಾಡಲಾಗಿದೆ ಎಂದು ಧರ್ಮಸ್ಥಳ ಗ್ರಾಮ ಪಂಚಾಯತ್ ತಿಳಿಸಿದೆ. 

Tags:    

Similar News