ದರ್ಶನ್ ಪ್ರಕರಣ| ಹಿರಿಯ ನಟ ಅನಂತ್‌ನಾಗ್ ಹೇಳಿದ್ದೇನು?
ರೇಣುಕಾಸ್ವಾಮಿ ಕೊಲೆ ಪ್ರಕರಣ ಆರೋಪದಲ್ಲಿ ನಟ ದರ್ಶನ್ ಪರಪ್ಪನ ಅಗ್ರಹಾರ ಜೈಲು ಸೇರಿದ್ದಾರೆ.;
ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದರ್ಶನ್ ಪರಪ್ಪನ ಅಗ್ರಹಾರ ಜೈಲು ಸೇರಿದ್ದಾರೆ. ದರ್ಶನ್ ಜೈಲಿಗೆ ಹೋದಾಗಿನಿಂದ ಅವರ ಬಗ್ಗೆ ಸಿನಿ ತಾರೆಯರು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ. ಹಲವರು ದರ್ಶನ್ ಅವರನ್ನು ಭೇಟಿ ಮಾಡಿಯೂ ಬಂದಿದ್ದಾರೆ.
ಇದೀಗ ಈ ಪ್ರಕರಣ ಬಗ್ಗೆ ಹಿರಿಯ ನಟ ಅನಂತ್‌ನಾಗ್ ಅಚ್ಚರಿಯ ಹೇಳಿಕೆಯೊಂದನ್ನು ನೀಡಿದ್ದಾರೆ.
''ದರ್ಶನ್ ಅವರಿಗಿಂತ ಕೆಟ್ಟದಾಗಿನ ಘಟನೆಗಳು ಜಗತ್ತಿನಲ್ಲಿ ನಡೆಯುತ್ತವೆ. ಸಾವಿರಾರು ಪಟ್ಟು ಕೆಟ್ಟದಾದ ಘಟನೆಗಳು ನಡೆದಿವೆ ನಡೆಯುತ್ತಲೇ ಇವೆ. ಸಿನಿಮಾ ನಟನಿಂದ ಆದ ಘಟನೆ ಆಗಿದ್ದರಿಂದ ಹೆಚ್ಚು ಪಬ್ಲಿಸಿಟಿ ಸಿಗಬಹುದು. ಮಾದ್ಯಮದಲ್ಲಿ ಹೆಚ್ಚು ಪ್ರಸಾರ ಮಾಡುತ್ತಿರಬಹುದು. ಆದರೆ ಇದರಿಂದ ಜನರ ಮೇಲೆ ಯಾವ ಪರಿಣಾಮ ಬೀರುತ್ತದೆ? ಜಗತ್ತಿನಲ್ಲಿ ಯಾವ ಸುದ್ದಿನೇ ಇಲ್ಲ ಎಂಬಂತೆ ದಿನ ನಿತ್ಯ ಅದೇ ಘಟನೆ ತೋರಿಸುತ್ತಿದ್ದರೆ ಹೇಗೆ? ಇದರಿಂದ ಪಬ್ಲಿಸಿಟಿ ಸಿಗಬಹುದು ಅಷ್ಟೇ ಜನರ ಮೇಲೆ ಇದರ ಪರಿಣಾಮ ಏನು?'' ಎಂದು ನಟ ಅನಂತ್ ನಾಗ್ ಅಚ್ಚರಿಯ ಹೇಳಿಕೆ ನೀಡಿದ್ದಾರೆ.
''ಸಿನಿಮಾ ನಟ ಆಗಿದ್ದರಿಂದ ಹೆಚ್ಚು ಪಬ್ಲಿಸಿಟಿ ಸಿಗಬಹುದು ಬಿಟ್ಟರೆ ಜನರ ಮನಸ್ಸು ಹಾಳಾಗಿ ಹೋಗುತ್ತಿದೆ. ಈ ಸುದ್ದಿಯಿಂದ ಜನ ಪ್ರಭಾವಿತರಾಗಿ ಏನಾದ್ರೂ ಒಳ್ಳೆಯದನ್ನು ಕಲಿಯುತ್ತಾರಾ? ಖಂಡಿತ ಇಲ್ಲ. ಜನರ ಮನಸ್ಸಿನ ಮೇಲೆ ಕೆಟ್ಟ ಪರಿಣಾಮ ಬೀರುವಂತೆ ಸುದ್ದಿಗಳನ್ನು ಪದೇ ಪದೇ ತೋರಿಸಬಾರದು'' ಎಂದು ಅವರು ಹೇಳಿದ್ದಾರೆ.