Covid | ಕೋವಿಡ್‌ ಸೋಂಕಿನ ಆತಂಕ; ಮಾಸ್ಕ್‌ ಮೊರೆ ಹೋದ ಸಿಎಂ ಸಿದ್ದರಾಮಯ್ಯ

ಕೋವಿಡ್‌ ಸೋಂಕಿನ ಕುರಿತು ಅನಗತ್ಯವಾಗಿ ಆತಂಕ ಪಡಬೇಡಿ, ಎಲ್ಲಿ ಬೇಕಾದರೂ ಆರಾಮಾಗಿ ಓಡಾಡಿ ಎಂದು ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌ ಹೇಳುತ್ತಿದ್ದಾರೆ. ಆದರೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ದಿಢೀರ್‌ ಮಾಸ್ಕ್‌ ಧರಿಸಿ, ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಳ್ಳುತ್ತಿರುವುದು ಸಾರ್ವಜನಿಕರಲ್ಲಿ ಆತಂಕಕ್ಕೆ ಕಾರಣವಾಗಿದೆ.;

Update: 2025-05-24 11:20 GMT

ಮೈಸೂರಿನಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮವೊಂದರಲ್ಲಿ ಸಿಎಂ ಸಿದ್ದರಾಮಯ್ಯ ಅವರು ಮಾಸ್ಕ್‌ ಧರಿಸಿರುವುದು 

ಕೋವಿಡ್‌ ರೂಪಾಂತರ ತಳಿ ಜೆಎನ್‌-1 ಸೋಂಕಿನ ಪ್ರಸರಣ ಕುರಿತಂತೆ ರಾಜ್ಯದಲ್ಲಿ ಭೀತಿ ಎದುರಾಗಿದೆ. ಕರ್ನಾಟಕದಲ್ಲಿ ಇಲ್ಲಿಯವರೆಗೆ 35 ಹೊಸ ಪ್ರಕರಣಗಳು ದೃಢಪಟ್ಟಿವೆ.

ಕೋವಿಡ್‌ ಸೋಂಕಿನ ಕುರಿತು ಅನಗತ್ಯವಾಗಿ ಆತಂಕ ಪಡಬೇಡಿ, ಎಲ್ಲಿ ಬೇಕಾದರೂ ಆರಾಮಾಗಿ ಓಡಾಡಿ ಎಂದು ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌ ಹೇಳುತ್ತಿದ್ದಾರೆ. ಆದರೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ದಿಢೀರ್‌ ಮಾಸ್ಕ್‌ ಧರಿಸಿ, ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಳ್ಳುತ್ತಿರುವುದು ಸಾರ್ವಜನಿಕರಲ್ಲಿ ಆತಂಕಕ್ಕೆ ಕಾರಣವಾಗಿದೆ.  

ಮೈಸೂರಿನಲ್ಲಿ ಶುಕ್ರವಾರ ಹಾಗೂ ಶನಿವಾರ ಜಿಲ್ಲಾಡಳಿತ ಕೈಗೊಂಡಿದ್ದ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾಸ್ಕ್‌ ಧರಿಸಿ ಮುಖಂಡರ ಜತೆ ಮಾತುಕತೆ ನಡೆಸಿದ್ದು ಕುತೂಹಲ ಮೂಡಿಸಿದೆ. 

ಉಸಿರಾಟ ಸಮಸ್ಯೆ ಇರುವವರು ಅಥವಾ ಅನಾರೋಗ್ಯದಿಂದ ಬಳಲುತ್ತಿರುವವರು ಮಾಸ್ಕ್‌ ಧರಿಸಬೇಕು. ಎಲ್ಲರೂ ಮಾಸ್ಕ್‌ ಧರಿಸಬೇಕೆಂಬ ಕಡ್ಡಾಯವೇನಿಲ್ಲ ಎಂದು ಆರೋಗ್ಯ ಇಲಾಖೆ ತನ್ನ ಮಾರ್ಗಸೂಚಿಯಲ್ಲಿ ತಿಳಿಸಿದೆ. ಹೀಗಿರುವಾಗ ಸಿಎಂ ಅವರು ದಿಢೀರ್‌ ಮಾಸ್ಕ್‌ ಧರಿಸಿದ್ದು ಏಕೆ, ಸೋಂಕಿನ ಪ್ರಸರಣದ ಮುಂಜಾಗ್ರತೆಯೇ ಎಂಬ ಪ್ರಶ್ನೆಗಳು ಎದ್ದಿವೆ.   

ಸಿಎಂ ಸಿದ್ದರಾಮಯ್ಯ ಅವರಿಗೆ ಮೊಣಕಾಲಿನ ಶಸ್ತ್ರಚಿಕಿತ್ಸೆಯಾಗಿದೆ. ಸಾಕಷ್ಟು ವಿಶ್ರಾಂತಿ ಬಳಿಕ ಮಾಮೂಲಿಯಾಗಿ ಓಡಾಡುತ್ತಿದ್ದಾರೆ. ಗಂಭೀರವಾದ ಆರೋಗ್ಯ ಸಮಸ್ಯೆ ಇಲ್ಲದಿದ್ದರೂ ಕೋವಿಡ್‌ ಪ್ರಕರಣಗಳು ಹೆಚ್ಚುತ್ತಿರುವ ಆತಂಕದಲ್ಲಿ ಮಾಸ್ಕ್‌ ಮೊರೆ ಹೋದರೆ ಎಂಬ ಮಾತುಗಳು ಕೇಳಿ ಬರುತ್ತಿವೆ. 

ಬೆಂಗಳೂರು ನಗರದಲ್ಲೇ ಸದ್ಯ 32 ಸಕ್ರಿಯ ಪ್ರಕರಣಗಳು ಇವೆ. ಅಲ್ಲದೇ ಜ್ವರ, ಶೀತದ ಪ್ರಕರಣಗಳ ಸಂಖ್ಯೆಯೂ ಹೆಚ್ಚುತ್ತಿರುವುದು ಜನರಲ್ಲಿ ಕಳವಳ ಮೂಡಿಸಿದೆ. 

Tags:    

Similar News