ಹಂದಿಗಳ ಜೊತೆ ಜಗಳ ಮಾಡಬಾರದು; ಕೇಂದ್ರ ಸಚಿವ ಎಚ್‌ಡಿ ಕುಮಾರಸ್ವಾಮಿಗೆ ಐಪಿಎಸ್‌ ಅಧಿಕಾರಿ ತಿರುಗೇಟು

ಜಾರ್ಜ್ ಬರ್ನಾಡ್ ಶಾ ಅವರ ಪ್ರಸಿದ್ಧ ಇಂಗ್ಲಿಷ್ ಸಾಲನ್ನು ಉಲ್ಲೇಖಿಸಿರುವ ಚಂದ್ರಶೇಖರ್‌ ಅವರು, ಹಂದಿಗಳ ಜೊತೆ ಜಗಳಕ್ಕೆ ಇಳಿದರೆ ನಾವು ಕೊಳಕಾಗುತ್ತೇವೆ. ಏಕೆಂದರೆ ಹಂದಿಗಳು ಕೊಳಕನ್ನೇ ಇಷ್ಟಪಡುತ್ತವೆ. ಹಾಗಾಗಿ ನಾವು ಹಂದಿಗಳ ಜೊತೆ ಜಗಳ ಮಾಡಬಾರದು ಎಂದು ಪರೋಕ್ಷವಾಗಿ ಕುಮಾರಸ್ವಾಮಿ ಅವರಿಗೆ ಚಂದ್ರಶೇಖರ್‌ ತಿರುಗೇಟು ನೀಡಿದ್ದು, ಪತ್ರದ ಕೊನೆಯಲ್ಲಿ ಸತ್ಯಮೇವ ಜಯತೆ ಎಂದು ಬರೆದಿದ್ದಾರೆ.

Update: 2024-09-29 06:26 GMT

ಎಚ್‌.ಡಿ.ಕುಮಾರಸ್ವಾಮಿ ಮತ್ತು ಲೋಕಾಯುಕ್ತ ಐಜಿಪಿ ಚಂದ್ರಶೇಖರ್‌

ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ಅವರ ಆರೋಪಗಳಿಗೆ ತಿರುಗೇಟು ನೀಡಿರುವ ಲೋಕಾಯುಕ್ತ ಎಸ್‌ಐಟಿ ತಂಡದ ಎಡಿಜಿಪಿ ಎಂ.ಚಂದ್ರಶೇಖರ್‌ ಅವರು ತಮ್ಮ ಸಿಬ್ಬಂದಿಗೆ ಪತ್ರ ಬರೆಯುವ ಪತ್ರದ ಮೂಲಕ ಅಭಯ ನೀಡಿದ್ದಾರೆ.

ಎಚ್.ಡಿ.ಕುಮಾರಸ್ವಾಮಿ ಅವರು ಪತ್ರಿಕಾಗೋಷ್ಠಿಯಲ್ಲಿ ತಮ್ಮ ವಿರುದ್ಧ ಮಾಡಿರುವ ಸುಳ್ಳು, ದುರುದ್ದೇಶಪೂರಿತ ಆರೋಪ ಹಾಗೂ ಬೆದರಿಕೆಗೆ ಬಗ್ಗುವುದಿಲ್ಲ.

ಕುಮಾರಸ್ವಾಮಿ ಪ್ರಕರಣದ ಆರೋಪಿ. ಅವರು ಎಷ್ಟೇ ಎತ್ತರದ ಸ್ಥಾನದಲ್ಲಿದಲ್ಲಿದ್ದರೂ ಜಾಮೀನಿನ ಮೇಲಿರುವ ಆರೋಪಿಯಷ್ಟೇ. ನನ್ನ ಮೇಲೆ ಸುಳ್ಳು ಆರೋಪಗಳನ್ನು ಮಾಡಿ ನಮ್ಮನ್ನು ಕುಗ್ಗಿಸುವ ಪ್ರಯತ್ನ ಮಾಡುತ್ತಿದ್ದಾರೆ. ನಮ್ಮ ಕರ್ತವ್ಯವನ್ನು ನಾವು ನಿರ್ವಹಿಸೋಣ. ಅದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ಎಲ್ಲಾ ಬಾಹ್ಯ ಪ್ರಭಾವಗಳಿಂದ ನಿಮ್ಮನ್ನು ರಕ್ಷಿಸುತ್ತೇನೆ ಎಂದು ಎಸ್ ಐಟಿ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ಧೈರ್ಯ ತುಂಬಿದ್ದಾರೆ.

ಜಾರ್ಜ್ ಬರ್ನಾಡ್ ಶಾ ಅವರ ಪ್ರಸಿದ್ಧ ಇಂಗ್ಲಿಷ್ ಸಾಲನ್ನು ಉಲ್ಲೇಖಿಸಿರುವ ಚಂದ್ರಶೇಖರ್‌ ಅವರು, ಹಂದಿಗಳ ಜೊತೆ ಜಗಳಕ್ಕೆ ಇಳಿದರೆ ನಾವು ಕೊಳಕಾಗುತ್ತೇವೆ. ಏಕೆಂದರೆ ಹಂದಿಗಳು ಕೊಳಕನ್ನೇ ಇಷ್ಟಪಡುತ್ತವೆ. ಹಾಗಾಗಿ ನಾವು ಹಂದಿಗಳ ಜೊತೆ ಜಗಳ ಮಾಡಬಾರದು ಎಂದು ಪರೋಕ್ಷವಾಗಿ ಕುಮಾರಸ್ವಾಮಿ ಅವರಿಗೆ ತಿರುಗೇಟು ನೀಡಿದ್ದು, ಪತ್ರದ ಕೊನೆಯಲ್ಲಿ ಸತ್ಯಮೇವ ಜಯತೆ ಎಂದು ಬರೆದಿದ್ದಾರೆ.

ಶನಿವಾರ ಜೆಡಿಎಸ್‌ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ್ದ ಕುಮಾರಸ್ವಾಮಿ ಅವರು, ಎಡಿಜಿಪಿ ಚಂದ್ರಶೇಖರ್ ವಿರುದ್ಧ ನಾನಾ ರೀತಿಯ ಆರೋಪ ಮಾಡಿದ್ದರು. ರಾಜಕಾಲುವೆ ಮೇಲೆ 38 ಮಹಡಿಯ ಕಟ್ಟಡ ಕಟ್ಟುತ್ತಿದ್ದಾರೆ. ಭೂ ವ್ಯವಹಾರದಲ್ಲಿ ಅಧೀನ ಅಧಿಕಾರಿಯ ಬಳಿ ೨೦ ಕೋಟಿಗೆ ಬೇಡಿಕೆ ಇಟ್ಟಿದ್ದರು. ವಿಜಯ್‌ ತಾತಾ ಜೊತೆ ಹಲವು ಅಕ್ರಮಗಳಲ್ಲಿ ಭಾಗವಹಿಸಿದ್ದರು ಎಂದು ಹಣಕಾಸು ವ್ಯವಹಾರಗಳ ಕುರಿತಾಗಿಯೂ ದಾಖಲೆ ಬಿಡುಗಡೆ ಮಾಡಿದ್ದರು. ಕೇಂದ್ರದ ಗೃಹ ಕಾರ್ಯದರ್ಶಿಗೂ ದೂರು ನೀಡುವುದಾಗಿ ಎಚ್ಚರಿಕೆ ನೀಡಿದ್ದರು.

Tags:    

Similar News