Caste Census | ಸಿಎಂಗೆ ಜಾತಿಗಣತಿ ವರದಿ ʼಬೆದರು ಬೊಂಬೆʼ; ವಿಜಯೇಂದ್ರ ಲೇವಡಿ

ಸರ್ಕಾರದ ದುರಾಡಳಿತದ ವಿಚಾರಗಳ ಚರ್ಚೆ ಮುನ್ನೆಲೆಗೆ ಬಂದಾಗ ಸಿಎಂ ಸಿದ್ದರಾಮಯ್ಯ ಅವರು ಜಾತಿವಾರು ಜನಗಣತಿ ವರದಿಯನ್ನು ಮುನ್ನೆಲೆಗೆ ತರುತ್ತಿದ್ದಾರೆ. ಇದು ‌ಕುರ್ಚಿ ಉಳಿಸಿಕೊಳ್ಳುವ ಕಸತ್ತಿನ ಭಾಗವಾಗಿದೆ ಎಂದು ವಿಜಯೇಂದ್ರ ಹೇಳಿದ್ದಾರೆ.;

Update: 2025-04-11 08:35 GMT

ವಿಜಯೇಂದ್ರ

ಮುಖ್ಯಮಂತ್ರಿ ಕುರ್ಚಿ ಅಲುಗಾಡಿದಾಗ ಮಾತ್ರ ಸಿದ್ದರಾಮಯ್ಯ ಅವರಿಗೆ ಜಾತಿಗಣತಿ ವರದಿ ನೆನಪಾಗುತ್ತದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ವಾಗ್ದಾಳಿ ನಡೆಸಿದ್ದಾರೆ.

ಶಿರಸಿಯ ಯಲ್ಲಾಪುರದಲ್ಲಿ ಶುಕ್ರವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಬೆಲೆ ಏರಿಕೆ , ಸರ್ಕಾರದ ದುರಾಡಳಿತದ ವಿಚಾರಗಳ ಚರ್ಚೆ ಮುನ್ನೆಲೆಗೆ ಬಂದಾಗ ಸಿಎಂ ಸಿದ್ದರಾಮಯ್ಯ ಅವರು ಜಾತಿವಾರು ಜನಗಣತಿ ವರದಿಯನ್ನು ಮುನ್ನೆಲೆಗೆ ತರುತ್ತಿದ್ದಾರೆ. ಇದು ‌ಕುರ್ಚಿ ಉಳಿಸಿಕೊಳ್ಳುವ ಕಸತ್ತಿನ ಭಾಗವಾಗಿದೆ. ಸಿಎಂ ಪಾಲಿಗೆ ಜಾತಿ ಗಣತಿ ವರದಿ ಬೆದರು ಗೊಂಬೆಯಂತಾಗಿದೆ ಎಂದು ಲೇವಡಿ ಮಾಡಿದ್ದಾರೆ.

'ಜನಸಾಮಾನ್ಯರು ಬಳಸುವ 50ಕ್ಕೂ ಹೆಚ್ಚು ವಸ್ತುಗಳ ಬೆಲೆ ಏರಿಕೆ ಮಾಡಿದೆ. ಹಾಲಿನಿಂದ, ಕಸದವರೆಗೆ ಬೆಲೆ ಏರಿಕೆಯಾಗಿದೆ. ಇದರಿಂದ ರಾಜ್ಯದ ಜನರು ಬೇಸತ್ತಿದ್ದು, ಜನಾಕ್ರೋಶ ಯಾತ್ರೆಯ ಬಿಸಿ ಕಾಂಗ್ರೆಸ್‌ಗೆ ತಟ್ಟುತ್ತಿದೆ ಎಂದಿದ್ದಾರೆ.

ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಏ.17 ರಂದು ಕೇಂದ್ರದ ವಿರುದ್ಧ ಪ್ರತಿಭಟಿಸಲು ಕರೆ ನೀಡಿದ್ದಾರೆ. ಇದು ಅವರ ಹತಾಶ ಮನೋಭಾವ ತೋರಿಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Similar News