ಬೆಂಗಳೂರಿನಲ್ಲಿ ಆಫ್ರಿಕಾದ ಮಹಿಳೆಯ ಮೃತದೇಹ ಪತ್ತೆ

ಮೃತ ಲೋವೆತ್​​ ಸಂಪರ್ಕದಲ್ಲಿದ್ದವರನ್ನು ಕರೆಸಿ ವಿಚಾರಣೆ ಮುಂದಿವರಿಸಿದ್ದು, ಕೊಲೆಗೆ ಕಾರಣವೇನು ಎನ್ನುವುದರ ಕುರಿತು ಚಿಕ್ಕಜಾಲ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.;

Update: 2025-05-01 07:36 GMT

ಸಾಂದರ್ಭಿಕ ಚಿತ್ರ

ಬೆಂಗಳೂರು ಹೊರವಲಯದ ಚಿಕ್ಕಜಾಲ ಪೊಲೀಸ್ ಠಾಣಾ ವ್ಯಾಪ್ತಿಯ ತರಹುಣಸೆ ಗ್ರಾಮದ ನಿರ್ಜನ ಪ್ರದೇಶದಲ್ಲಿ ವಿದೇಶಿ ಮಹಿಳೆಯ ಮೃತದೇಹ ಪತ್ತೆಯಾಗಿದೆ.

ಬೆಟ್ಟಹಲಸೂರು ಮುಖ್ಯ ರಸ್ತೆಯ ನಿರ್ಜನ ಪ್ರದೇಶದಲ್ಲಿ ಮೃತದೇಹ ಪತ್ತೆಯಾಗಿದ್ದು, ಮೃತಳನ್ನು ಆಫ್ರಿಕಾದ ನೈಜೀರಿಯಾದ ಕ್ರಾಸ್ ರಿವರ್ ಮೂಲದ ಲೋಯೆತ್​ ಎಂದು ಗುರುತಿಸಲಾಗಿದೆ.

ಮೃತರ ಪಾಸ್ ಪೋರ್ಟ್ ಚಿಕ್ಕ ಮಜಾಲ ಪೊಲೀಸರಿಗೆ ಪತ್ತೆಯಾಗಿದ್ದು, ಬನ್ನೇರುಘಟ್ಟ ರಸ್ತೆಯಲ್ಲಿ ನೆಲೆಸಿದ್ದರು ಎಂದು ತಿಳಿದುಬಂದಿದೆ. ಮೃತ ಮಹಿಳೆ ಮೂಲತಃ ಆಫ್ರಿಕಾದ ಕ್ರಾಸ್ ರಿವರ್ ರಾಜ್ಯದವರು. ಆಕೆ ಭಾರತಕ್ಕೆ ಬಂದಿದ್ದರ ಹಿಂದಿನ ಉದ್ದೇಶವೇನು? ಕಳೆದ ರಾತ್ರಿ ಕೊಲೆಗೂ ಮುನ್ನ ಆಕೆ ಸಂಪರ್ಕದಲ್ಲಿದ್ದವರು ಯಾರು ಎನ್ನುವುದರ ಬಗ್ಗೆ ತನಿಖೆ ಚುರುಕುಗೊಳಿಸಿದ್ದಾರೆ.  ಪೋರೆ‌ನ್ಸಿಕ್ ತಂಡದೊಂದಿಗೆ ಕೃತ್ಯ ನಡೆದ ಸ್ಥಳಕ್ಕೆ ದೌಡಯಿಸಿದ ಚಿಕ್ಕಜಾಲ ಪೊಲೀಸರು ಸ್ಥಳ ಪರಿಶೀಲನೆ ನಡೆಸಿ ಮೃತಳ ಗುರುತು ಪತ್ತೆಹಚ್ಚಲು ಮುಂದಾಗಿದ್ದಾರೆ.

ವಿದೇಶಿ ಮಹಿಳೆ ಮೃತದೇಹ ಮರಣೋತ್ತರ ಪರೀಕ್ಷೆಗೆ ಅಂಬೇಡ್ಕರ್ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.  ಲೋಯೆತ್​ ಸಂಪರ್ಕದಲ್ಲಿದ್ದವರನ್ನು ಕರೆಸಿ ವಿಚಾರಣೆ ಮುಂದಿವರಿಸಿದ್ದು, ಕೊಲೆಗೆ ಕಾರಣವೇನು ಎನ್ನುವುದರ ಕುರಿತು ಚಿಕ್ಕಜಾಲ ಪೊಲೀಸರು ತನಿಖೆ ಮುಂದುವರಿಸಿದ್ದಾರೆ. 

Tags:    

Similar News