ಪೊಲೀಸ್​ ಠಾಣೆಯಲ್ಲೇ ನೇಣು ಬಿಗಿದ ಸ್ಥಿತಿಯಲ್ಲಿ ಶವ ಪತ್ತೆ

ಠಾಣೆಯಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಶವ ಪತ್ತೆಯಾಗಿದ್ದು, ಆತನೇ ನೇಣಿಗೆ ಶರಣಾದನಾ ಅಥವಾ ಪೊಲೀಸರು ಹೊಡೆತಕ್ಕೆ ಬಲಿಯಾದನಾ ಎನ್ನುವ ಅನುಮಾನ ಮೂಡದೆ.;

Update: 2025-08-20 06:37 GMT

ಸಾಂದರ್ಭಿಕ ಚಿತ್ರ

ಬೆಂಗಳೂರು ದಕ್ಷಿಣ ಜಿಲ್ಲೆಯ ಚನ್ನಪಟ್ಟಣದಲ್ಲಿ ಲಾಕಪ್ ಡೆತ್ ಆರೋಪ ಕೇಳಿ ಬಂದಿದೆ. ಕಳ್ಳತನ ಆರೋಪದಲ್ಲಿ ಬಂಧನವಾಗಿದ್ದ ಆರೋಪಿ ರಮೇಶ್ ಎಂಬಾತನ ಶವ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ ಎನ್ನಲಾಗಿದೆ. ಈತ ಪೊಲೀಸ್​ ಠಾಣೆಯಲ್ಲೇ ಮೃತಪಟ್ಟಿದ್ದು,ಅನುಮಾನ ಮೂಡಿಸಿದೆ. 

ಠಾಣೆಯಲ್ಲಿ ಆತನೇ ನೇಣಿಗೆ ಶರಣಾದನಾ ಅಥವಾ ಪೊಲೀಸರು ಹೊಡೆತಕ್ಕೆ ಬಲಿಯಾದನಾ ಎನ್ನುವ ಶಂಕೆ ಇದ್ದು, ಮೃತ ರಮೇಶ್ ಕುಟುಂಬಸ್ಥರು ಲಾಕಪ್ ಡೆತ್​ ಆರೋಪ ಮಾಡಿದ್ದಾರೆ. 

ಎಸ್ಪಿ ಶ್ರೀನಿವಾಸ್ ಗೌಡ ಭೇಟಿ, ಪರಿಶೀಲನೆ

ಚನ್ನಪಟ್ಟಣ ಸಾರ್ವಜನಿಕ ಆಸ್ಪತ್ರೆಯಲ್ಲಿ ಮೃತದೇಹ ಇರಿಸಲಾಗಿದೆ. ಸ್ಥಳಕ್ಕೆ ಎಸ್ಪಿ ಶ್ರೀನಿವಾಸ್ ಗೌಡ ಹಾಗೂ ಎಎಸ್ಪಿ ರಾಮಚಂದ್ರಯ್ಯ ಭೇಟಿ ಪರಿಶೀಲನೆ ನಡೆಸಿದರು. ರಮೇಶ್ ಮೂಲತಃ ಮಂಡ್ಯ ಜಿಲ್ಲೆಯ ಮದ್ದೂರಿನ ದುಂಡನಹಳ್ಳಿ ನಿವಾಸಿಯಾಗಿದ್ದರು.

ಕಳ್ಳತನ ಪ್ರಕರಣದಲ್ಲಿ ಅಪ್ಪ-ಮಗನ ಬಂಧನ

ಚನ್ನಪಟ್ಟಣದ ಬೊಮ್ಮನಾಯಕನಹಳ್ಳಿ ಗ್ರಾಮದ ದೇವಸ್ಥಾನದ ಕಳ್ಳತನ ಪ್ರಕರಣದಲ್ಲಿ ರಮೇಶ್‌ನನ್ನು ಬಂಧಿಸಲಾಗಿತ್ತು. ಜೊತೆಗೆ ಮಗ ಮಂಜು ಎಂಬುವರನ್ನು ಸಹ ಬಂಧಿಸಿದ್ದರು. ಈಗ ಮಂಜು ಎಂ.ಕೆ.ದೊಡ್ಡಿ ಠಾಣೆಯಲ್ಲೇ ಇದ್ದಾನೆ.  ಚನ್ನಪಟ್ಟಣ ಸಾರ್ವಜನಿಕ ಆಸ್ಪತ್ರೆಯಲ್ಲಿ ಮೃತ ರಮೇಶ್ ಕುಟುಂಬಸ್ಥರ ಆಕ್ರಂಧನ ಮುಗಿಲು ಮುಟ್ಟಿದೆ. ಅಪ್ಪನ ಸಾವಿಗೆ ಪೊಲೀಸರೇ ಕಾರಣ ಎಂದು ಆಸ್ಪತ್ರೆ ಬಳಿ ಮೃತರ ಮಕ್ಕಳಾದ ಉಷಾ, ಆಶಾ ಆಕ್ರೋಶ ಹೊರಹಾಕಿದ್ದಾರೆ.

Tags:    

Similar News