ChatGPT | ನಕಲಿ ಆಧಾರ್, ಪ್ಯಾನ್ ಕಾರ್ಡ್‌ ಸೃಷ್ಟಿಸಲಿದೆ ChatGPT ; ಎಐ ಆಧರಿತ ತಂತ್ರಾಂಶ ಬಳಕೆಗೂ ಮುನ್ನ ಇರಲಿ ಎಚ್ಚರ !

ಚಾಟ್‌ ಜಿಪಿಟಿ ಹೊಸ ವೈಶಿಷ್ಟ್ಯದಲ್ಲಿ ನಕಲಿ ಆಧಾರ್ ಮತ್ತು ಪ್ಯಾನ್ ಕಾರ್ಡ್‌ ನಂತಹ ಸರ್ಕಾರಿ ಗುರುತಿನ ದಾಖಲೆಗಳನ್ನು ಜನರೇಟ್‌ ಮಾಡಲಿದೆ ಎಂಬ ಆತಂಕಕಾರಿ ವಿಷಯ ಬಹಿರಂಗಗೊಂಡಿದೆ.;

Update: 2025-04-05 09:43 GMT
ChatGPT | ನಕಲಿ ಆಧಾರ್, ಪ್ಯಾನ್ ಕಾರ್ಡ್‌ ಸೃಷ್ಟಿಸಲಿದೆ ChatGPT ; ಎಐ ಆಧರಿತ ತಂತ್ರಾಂಶ ಬಳಕೆಗೂ ಮುನ್ನ ಇರಲಿ ಎಚ್ಚರ !

ಚಾಟ್‌ಜಿಪಿಟಿ ಈಗ ನಕಲಿ ಆಧಾರ್ ಮತ್ತು ಪ್ಯಾನ್ ಕಾರ್ಡ್‌ಗಳನ್ನು ರಚಿಸಬಹುದು. 

ತಂತ್ರಜ್ಞಾನದಲ್ಲಿ ಒಂದು ಹೆಜ್ಜೆ ಮುಂದೆ ಇಟ್ಟಿರುವ ಕೃತಕ ಬುದ್ದಿಮತ್ತೆ(ಎಐ) ಇದೀಗ  ಗೌಪ್ಯತಾ ಮತ್ತು ಭದ್ರತಾ ವಿಷಯಗಳನ್ನು ಬೇಧಿಸುವ ಮಟ್ಟಿಗೆ ಬೆಳೆದಿದ್ದು, ತೀವ್ರ ಚರ್ಚೆಗೆ ಕಾರಣವಾಗಿದೆ.

ಚಾಟ್‌ ಜಿಪಿಟಿ ತಂತ್ರಾಂಶವು ಹೊಸ ವೈಶಿಷ್ಟ್ಯತೆಯನ್ನು ಬಳಕೆದಾರರಿಗೆ ಪರಿಚಯಿಸಿದೆ. ಆಧಾರ್‌ ಹಾಗೂ ಪಾನ್ ಕಾರ್ಡ್‌ ಸೇರಿದಂತೆ ಸರ್ಕಾರದ ಗುರುತಿನ ಚೀಟಿಯ ಚಿತ್ರಗಳನ್ನು ಜನರೇಟ್‌ ಮಾಡಲಿದೆ. ಇದು ಬರೀ ವೈಶಿಷ್ಟ್ಯ ಮಾತ್ರವಲ್ಲ, ಅಪಾಯಕಾರಿ ನಡೆಯೂ ಆಗಿದೆ. ನಕಲಿ ಆಧಾರ್ ಮತ್ತು ಪ್ಯಾನ್ ಕಾರ್ಡ್‌ಗಳಂತಹ ಸರ್ಕಾರಿ ಗುರುತಿನ ದಾಖಲೆಗಳನ್ನು ಜನರೇಟ್‌ ಮಾಡಲು ವಂಚಕರಿಗೆ ಸುಲಭ ಮಾರ್ಗವಾಗಿದೆ ಎಂಬುದು ಆತಂಕ ಹುಟ್ಟಿಸಿದೆ.

ಸಾಮಾಜಿಕ ಮಾಧ್ಯಮಗಳಲ್ಲಿ ಹಲವರು ChatGPT ಬಳಸಿ ರಚಿಸಲಾದ ಇಂತಹ ನಕಲಿ ಆಧಾರ್ ಕಾರ್ಡ್‌ಗಳು ಮತ್ತು PAN ಕಾರ್ಡ್‌ಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಸಾಮಾಜಿಕ ಮಾಧ್ಯಮ ಬಳಕೆದಾರರೊಬ್ಬರು (ಯಶವಂತ್ ಸಾಯಿ ಪಾಲಘಾಟ್) ಆರ್ಯಭಟ ಚಿತ್ರವನ್ನು ಹಂಚಿಕೊಂಡಿದ್ದಾರೆ.

"ChatGPT ತಕ್ಷಣವೇ ನಕಲಿ ಆಧಾರ್ ಮತ್ತು ಪ್ಯಾನ್ ಕಾರ್ಡ್‌ಗಳನ್ನು ಜನರೇಟ್‌ ಮಾಡಲಿದೆ. ಇದು ಗಂಭೀರ ಭದ್ರತಾ ಲೋಪ. ಅದಕ್ಕಾಗಿಯೇ ಕೃತಕ ಬುದ್ದಿಮತ್ತೆಯನ್ನು ಸ್ವಲ್ಪ ಮಟ್ಟಿಗೆ ನಿಯಂತ್ರಿಸಬೇಕು" ಎಂದು ಹಲವರು ಪೋಸ್ಟ್ ಮಾಡಿದ್ದಾರೆ. 

ಮತ್ತೊಬ್ಬ ಬಳಕೆದಾರ, ಎಐ ಆಧಾರ್ ಕಾರ್ಡ್‌ ಚಿತ್ರವನ್ನು ರಚಿಸಬಹುದು ಎಂದು ಸೂಚಿಸುವ ಪೋಸ್ಟ್‌  ಹಂಚಿಕೊಂಡಿದ್ದಾರೆ.  ʼʼChatGPT ಆಧಾರ್ ಚಿತ್ರಗಳನ್ನು ರಚಿಸಬಹುದು. ಅದು ಆಸಕ್ತಿದಾಯಕ ವಿಷಯವಲ್ಲ. ಆಸಕ್ತಿದಾಯಕ ವಿಷಯವೆಂದರೆ ತರಬೇತಿಗಾಗಿ ಆಧಾರ್ ಫೋಟೋಗಳ ಡೇಟಾ ಎಲ್ಲಿಂದ ಪಡೆಯಿತು?" ಎಂದು ಪ್ರಶ್ನಿಸಿದ್ದಾರೆ. 

‌ಪ್ಯಾನ್‌ -ಆಧಾರ್‌ ಕಾರ್ಡ್‌ ಭದ್ರತಾ ವೈಶಿಷ್ಟ್ಯಗಳೇನು?

ವಂಚಕರು ಪ್ಯಾನ್ ಅಥವಾ ಆಧಾರ್ ಕಾರ್ಡ್ ನಕಲಿ ಮಾಡುವುದು ಹೊಸ ವಿದ್ಯಮಾನವಲ್ಲ. ಆದರೆ ವಿಶಿಷ್ಟ ಡಿಜಿಟಲ್ ಗುರುತಿನ ಚೀಟಿಗಳನ್ನು ನಕಲಿ ಮಾಡಲು ವಿವಿಧ ಸಾಧನಗಳನ್ನು ಬಳಸುತ್ತಿದ್ದಾರೆ. ಪ್ಯಾನ್ 2.0 ಕಾರ್ಡ್‌ಗಳು ಹೆಚ್ಚಿನ ಭದ್ರತೆಗಾಗಿ ಛಾಯಾಚಿತ್ರ, ಸಹಿ, ಹೊಲೊಗ್ರಾಮ್ ಮತ್ತು QR ಕೋಡ್‌ ಹೊಂದಿರುತ್ತವೆ. ಇತ್ತೀಚಿನ ಆವೃತ್ತಿಯು ಹೆಚ್ಚುವರಿ ಭದ್ರತೆಗಾಗಿ ಮೈಕ್ರೋ ಚಿಪ್ ಕೂಡ ಒಳಗೊಂಡಿದೆ. ಅದೇ ರೀತಿ, ಆಧಾರ್ ಕಾರ್ಡ್‌ಗಳು ಟ್ಯಾಂಪರ್‌-ಪ್ರೂಫ್ QR ಕೋಡ್‌ಗಳು, ಹೊಲೊಗ್ರಾಮ್, ಮೈಕ್ರೋಟೆಕ್ಸ್ಟ್, ಗಿಲ್ಲೋಚೆ ಪ್ಯಾಟರ್ನ್ ಮತ್ತು ಉಬ್ಬು ಆಧಾರ್ ಲೋಗೋ ವೈಶಿಷ್ಟ್ಯತೆ ಹೊಂದಿದೆ. ನಕಲಿ ಚಾಟ್‌ಜಿಪಿಟಿ-ರಚಿತ ಆಧಾರ್ ಮತ್ತು ಪ್ಯಾನ್ ಕಾರ್ಡ್‌ಗಳಲ್ಲಿ ಈ ಯಾವುದೇ ವಂಚನೆ-ವಿರೋಧಿ ವೈಶಿಷ್ಟ್ಯಗಳು ಇದುವರೆಗೆ ಗೋಚರಿಸಿಲ್ಲ ಎನ್ನಲಾಗಿದೆ.

ಭದ್ರತಾ ಕಾಳಜಿಗಳಿವೆಯೇ?

ಎಐನಿಂದ ರಚಿಸಲಾದ ನಕಲಿ ಪ್ಯಾನ್ ಅಥವಾ ಆಧಾರ್ ಕಾರ್ಡ್‌ಗಳನ್ನು ಅಪ್‌ಲೋಡ್ ಮಾಡುವುದರಿಂದ ಆನ್‌ಲೈನ್ ಮತ್ತು ಆಫ್‌ಲೈನ್‌ನಲ್ಲಿನ "ನಿಮ್ಮ ಗ್ರಾಹಕರನ್ನು ತಿಳಿದುಕೊಳ್ಳಿ" (KYC) ಪ್ರಕ್ರಿಯೆ ತಪ್ಪಿಸಲು ಸಾಧ್ಯವೇ ಇಲ್ಲ. ಆದರೆ ChatGPT ಮೂಲಕ ರಚಿಸಲಾದ ನಕಲಿ ಪ್ಯಾನ್ ಕಾರ್ಡ್‌ಗಳನ್ನು ಕೆಲವು ಅನುಮಾನಾಸ್ಪದ ವ್ಯಕ್ತಿಗಳು ನಿಜವೆಂದು ನಂಬುವ ಸಾಧ್ಯತೆ ಇರುತ್ತದೆ. ಇದರಿಂದ ಸ್ಕ್ಯಾಮರ್‌ಗಳು (ಮೋಸಗಾರರು) ಅಂಥ ಜನರನ್ನು ಸುಲಭವಾಗಿ ಮೋಸಗೊಳಿಸಬಹುದಾಗಿದೆ. 

QR ಕೋಡ್ ಬಳಸಿ ಆಧಾರ್ ಪರಿಶೀಲಿಸುವುದು ಹೇಗೆ?

ಪ್ರಸ್ತುತ ರೂಪದಲ್ಲಿ ChatGPT ಯಿಂದ ರಚಿಸಲಾದ ಆಧಾರ್ ಮತ್ತು ಪ್ಯಾನ್‌ ಕಾರ್ಡ್‌ ಸಂಖ್ಯೆಗಳು ಯಾವುದೇ ನೈಜ ಸಂಖ್ಯೆಯನ್ನು ಪ್ರತಿನಿಧಿಸದ ಕಾರಣ ಇದೊಂದು ನಕಲಿ ಎಂದು ಸ್ಪಷ್ಟವಾಗಿ ಕಾಣಬಹುದು. ಅಲ್ಲದೆ ಪ್ಯಾನ್‌ ಕಾರ್ಡ್‌ ಅಥವಾ ಆಧಾರ್ ಕಾರ್ಡ್‌ಗಳಲ್ಲಿ ಯಾವುದೇ QR ಕೋಡ್ ಇಲ್ಲ. ಆದ್ದರಿಂದ ಸರಳವಾದ ಭದ್ರತಾ ಪರಿಶೀಲನೆಯನ್ನು ಮಾಡಿದರೆ ನಿಜವಾದ ಮತ್ತು ನಕಲಿ ಆಧಾರ್ ಮತ್ತು ಪ್ಯಾನ್‌ ಕಾರ್ಡ್‌ ನಡುವೆ ವ್ಯತ್ಯಾಸ ಗುರುತಿಸಬಹುದು. ಪ್ರತಿ ಆಧಾರ್ ಕಾರ್ಡ್ ಆಧಾರ್ ಮತ್ತು ಇ-ಆಧಾರ್‌ನಲ್ಲಿ ಸುರಕ್ಷಿತ QR ಕೋಡ್  ಹೊಂದಿರುತ್ತದೆ. ಪ್ರಸ್ತುತಪಡಿಸಿದ ಆಧಾರ್ / ಇ-ಆಧಾರ್‌ನಲ್ಲಿರುವ ಸುರಕ್ಷಿತ QR ಕೋಡ್ ಸ್ಕ್ಯಾನ್ ಮಾಡುವ ಮೂಲಕ ವ್ಯಕ್ತಿಯ ಗುರುತು ಪರಿಶೀಲಿಸಬಹುದು.

"ಆಧಾರ್ ಪ್ರಿಂಟ್-ಲೆಟ‌ರ್ ಮತ್ತು ಇ-ಆಧಾರ್‌ನಲ್ಲಿ ಈ ಹಿಂದೆ ಇದ್ದ QR ಕೋಡ್ ಆಧಾರ್ ಸಂಖ್ಯೆ ಹೊಂದಿರುವವರ ಜನಸಂಖ್ಯಾ ಮಾಹಿತಿ ಮಾತ್ರ ಒಳಗೊಂಡಿತ್ತು. UIDAI ಹೊಸ ಸುರಕ್ಷಿತ QR ಕೋಡ್ ಪರಿಚಯಿಸಿದೆ. ಇದು ಜನಸಂಖ್ಯಾಶಾಸ್ತ್ರ ಮತ್ತು ಆಧಾ‌ರ್ ಸಂಖ್ಯೆ ಹೊಂದಿರುವವರ ಛಾಯಾಚಿತ್ರ ಒಳಗೊಂಡಿದೆ.

QR ಕೋಡ್‌ನಲ್ಲಿರುವ ಮಾಹಿತಿಯು ಸುರಕ್ಷಿತ ಮತ್ತು ಟ್ಯಾಂಪರ್-ಫ್ರೂಫ್‌ ಆಗಿದ್ದು, ಇದರಲ್ಲಿ UIDAI ಡಿಜಿಟಲ್ ಸಹಿ ಇದೆ.  ಹೊಸ ಡಿಜಿಟಲ್ ಸಹಿ ಮಾಡಿದ ಸುರಕ್ಷಿತ QR ಕೋಡ್  UIDAI ನ ಕಸ್ಟಮ್ ಅಪ್ಲಿಕೇಶನ್ ಬಳಸಿ ಓದಬಹುದು. ಆಧಾರ್‌ನಲ್ಲಿ ಪ್ರಯತ್ನಿಸಲಾದ ಯಾವುದೇ ವಂಚನೆಯನ್ನು QR ಕೋಡ್ ಸ್ಕ್ಯಾನರ್ ಬಳಸಿ ಸುಲಭವಾಗಿ ಪತ್ತೆ ಮಾಡಬಹುದು" ಎಂದು UIDAI ತನ್ನ ವೆಬ್‌ಸೈಟ್‌ನಲ್ಲಿ ತಿಳಿಸಿದೆ.

ಪ್ಯಾನ್ ಕಾರ್ಡ್‌ ಅಸಲಿಯೇ ನಕಲಿಯೇ- ಪರಿಶೀಲಿಸುವುದು ಹೇಗೆ?

ಪ್ಯಾನ್ ಕಾರ್ಡ್‌ಗೆ ಸಂಬಂಧಿಸಿದಂತೆ 2018 ರಿಂದ ನೀಡಲಾದ ಪ್ರತಿಯೊಂದು ಪ್ಯಾನ್‌ ಕಾರ್ಡ್‌ನಲ್ಲಿ QR ಕೋಡ್ ಇರುತ್ತದೆ. 2018 ರಲ್ಲಿ ಆದಾಯ ತೆರಿಗೆ ಇಲಾಖೆಯು ವರ್ಧಿತ ಭದ್ರತೆ ಮತ್ತು ಪರಿಶೀಲನೆಗಾಗಿ ಪ್ಯಾನ್‌ ಕಾರ್ಡ್‌ದಾರರ ಛಾಯಾಚಿತ್ರ ಮತ್ತು ಸಹಿ ಒಳಗೊಂಡಿರುವ ವರ್ಧಿತ QR ಕೋಡ್ ಒಳಗೊಂಡಿರುವ ಮರುವಿನ್ಯಾಸಗೊಳಿಸಲಾದ ಪ್ಯಾನ್ ಕಾರ್ಡ್ ಪರಿಚಯಿಸಿತು. ಆದಾಯ ತೆರಿಗೆ ವೆಬ್‌ಸೈಟ್‌ನಲ್ಲಿ ಪ್ಯಾನ್ ಸಂಖ್ಯೆಯನ್ನು ಸಹ ಪರಿಶೀಲಿಸಬಹುದು.

“ಪ್ಯಾನ್‌ ಕಾರ್ಡ್‌ನಲ್ಲಿರುವ QR ಕೋಡ್ ಪ್ರಮಾಣೀಕೃತ ಸ್ಕ್ಯಾನರ್‌ಗಳಿಂದ ಮಾತ್ರ ಓದಬಹುದಾದ ಎನ್‌ ಕ್ರಿಪ್ಟ್ ಮಾಡಿದ ಡೇಟಾ ಹೊಂದಿದೆ. ಇದು ಅಧಿಕೃತ ಘಟಕಗಳು ಮಾತ್ರ ಪ್ಯಾನ್ ಪರಿಶೀಲನೆ ಮಾಡಬಹುದು ಎಂದು ಖಚಿತಪಡಿಸುತ್ತದೆ. ಈ ಕಾರ್ಯವಿಧಾನವು ನಕಲಿ ಪ್ಯಾನ್ ಕಾರ್ಡ್‌ಗಳು, ತಪ್ಪಾದ ಮಾಹಿತಿ ಅಥವಾ ನಕಲು ಸಮಸ್ಯೆಗಳನ್ನು ಪರಿಣಾಮಕಾರಿಯಾಗಿ ನಿವಾರಿಸುತ್ತದೆ. ಎಲ್ಲಾ ಪ್ಯಾನ್ ಡೇಟಾ ನಿಖರ ಮತ್ತು ನವೀಕೃತವಾಗಿದೆ ಎಂದು ಖಚಿತಪಡಿಸುತ್ತದೆ.

ಇದಲ್ಲದೆ, QR ಕೋಡ್‌ನಲ್ಲಿ ಎನ್‌ಕೋಡ್ ಮಾಡಲಾದ ಸಮಗ್ರ ವಿವರಗಳು ಕಾರ್ಡ್‌ದಾರರ ಮಾಹಿತಿಗೆ ತ್ವರಿತ ಮತ್ತು ನಿಖರವಾದ ಪ್ರವೇಶವನ್ನು ಅನುಮತಿಸುತ್ತದೆ. ಎಲ್ಲಾ ವಹಿವಾಟುಗಳು ಮತ್ತು ಪರಿಶೀಲನೆಗಳನ್ನು ದೋಷವಿಲ್ಲದೆ ಪ್ರಕ್ರಿಯೆಗೊಳಿಸಲಾಗಿದೆ. ಒಟ್ಟಿನಲ್ಲಿ AI ಮಾದರಿಗಳ ಈ ಬೆಳೆಯುತ್ತಿರುವ ಸಾಮರ್ಥ್ಯವು ಗಮನಾರ್ಹ ಅಪಾಯ ಉಂಟು ಮಾಡುತ್ತಿದೆ. ಸೈಬರ್ ಅಪರಾಧಗಳು ಮತ್ತು ವಂಚನೆ ಸೇರಿದಂತೆ ದುರುದ್ದೇಶಪೂರಿತ ಚಟುವಟಿಕೆಗಳಲ್ಲಿ ಇಂಥಹ AI ಗಳ ದುರುಪಯೋಗವಾಗುವ ಸಾಧ್ಯತೆ ಹೆಚ್ಚಿದೆ. 

Tags:    

Similar News