Water Price Hike| ಬೆಂಗಳೂರು ಮಂದಿ ಕುಡಿಯುವ ಕಾವೇರಿ ನೀರು ಇಂದಿನಿಂದ ದುಬಾರಿ
ಕರ್ನಾಟಕ ರಾಜ್ಯ ಆಡಳಿತ ಸುಧಾರಣಾ ಆಯೋಗದ ಶಿಫಾರಸಿನಂತೆ 2026ರ ಏಪ್ರಿಲ್‌ನಿಂದ ಪ್ರತಿ ವರ್ಷ ನೀರಿನ ದರವನ್ನು ಶೇ. 3ರಷ್ಟು ಹೆಚ್ಚಳ ಮಾಡಲು ಜಲಮಂಡಳಿ ನಿರ್ಧರಿಸಿದೆ ಎಂದು ಬೆಂಗಳೂರು ಜಲಮಂಡಳಿ ಅಧ್ಯಕ್ಷ ರಾಮ್ ಪ್ರಸಾತ್ ಮನೋಹರ್ ತಿಳಿಸಿದ್ದಾರೆ.;
ಬೆಂಗಳೂರಿನಲ್ಲಿ ಇಂದಿನಿಂದ ನೀರಿನ ದರ ಹೆಚ್ಚಳವಾಗಿದೆ.
ಬೆಂಗಳೂರಿನಲ್ಲಿ ಗುರುವಾರ ( ಏ.10) ದಿಂದ ಕುಡಿಯುವ ನೀರಿನ ಬೆಲೆ ಅಧಿಕೃತವಾಗಿ ಏರಿಕೆಯಾಗಿದೆ. ಅಂದ ಹಾಗೆ, ಮಹಾನಗರದಲ್ಲಿ 11 ವರ್ಷಗಳ ಬಳಿಕ ನೀರಿ ದರ ಏರಿಕೆಯಾಗುತ್ತಿದೆ. ಸ್ವಾಯತ್ತ ಸಂಸ್ಥೆಯಾಗಿರುವ ಬೆಂಗಳೂರು ಜಲಮಂಡಳಿಗೆ ಸರ್ಕಾರದಿಂದ ಅನುದಾನ ದೊರೆಯದ ಕಾರಣ ಕುಡಿಯುವ ನೀರಿಗೆ ವಿಧಿಸುವ ಶುಲ್ಕವೇ ಪ್ರಮುಖ ಆದಾಯವಾಗಿದೆ. ಕಳೆದ ಒಂದು ದಶಕದಲ್ಲಿ ವಿದ್ಯುತ್ ವೆಚ್ಚ ಶೇಕಡ 107ರಷ್ಟು ಹೆಚ್ಚಾಗಿದೆ ಎಂಬುದರ ಕಡೆಗೆ ರಾಮ್ ಪ್ರಸಾತ್ ಮನೋಹರ್ ಗಮನಸೆಳೆದಿದ್ದರು. ಈ ನಿಟ್ಟಿನಲ್ಲಿ ನೀರಿನ ದರ ಏರಿಕೆ ಮಾಡಲಾಗಿದೆ.
ಗೃಹ ಬಳಕೆ ನೀರಿನ ದರ ವಿವರ ಇಂತಿದೆ
1) 0-8000 ಸಾವಿರ ಲೀಟರ್ ಸ್ಲ್ಯಾಬ್: ಪ್ರತಿ ಲೀಟರ್‌ಗೆ 0.15 ಪೈಸೆ ಹೆಚ್ಚಳ (1 ಪೈಸೆಗಿಂತ ಕಡಿಮೆ) - ಉದಾಹರಣೆಗೆ ಈ ಸ್ಲ್ಯಾಬ್ ನಡಿಯಲ್ಲಿ ಪ್ರತಿ 1 ಸಾವಿರ ಲೀಟರ್‌ಗೆ ಪ್ರಸ್ತುತ ದರ 7ರಿಂದ 8.50 ಪೈಸೆ ಹೆಚ್ಚಳ.
2) 8001-25000 ಲೀಟರ್ ಸ್ಲ್ಯಾಬ್: ಪ್ರತಿ ಲೀಟರ್‌ಗೆ 0.3 ಪೈಸೆ ಹಚ್ಚಳ (1 ಪೈಸೆಗಿಂತ ಕಡಿಮೆ) -ಉದಾಹರಣೆಗೆ ಈ ಸ್ಲ್ಯಾಬ್ ಅಡಿಯಲ್ಲಿ ಪ್ರತಿ 1 ಸಾವಿರ ಲೀಟರ್‌ಗೆ ಪ್ರಸ್ತುತ ದರ 11ರಿಂದ 14 ರೂ. ಹೆಚ್ಚಳ.
3) 25,001-50000 ಲೀಟರ್ ಸ್ಲ್ಯಾಬ್ : ಪ್ರತಿ ಲೀಟರ್‌ಗೆ 0.8 ಪೈಸೆ ಹೆಚ್ಚಳ (1 ಪೈಸೆಗಿಂತ ಕಡಿಮೆ)
4) 50001-100000 ಲೀಟರ್ ಸ್ಲ್ಯಾಬ್: ಪ್ರತೀ ಲೀಟರ್‌ಗೆ 1.5 ಪೈಸೆ ಹೆಚ್ಚಳ
5) 100001 ರಿಂದ ಹೆಚ್ಚು ಲೀಟರ್ ಸ್ಲ್ಯಾಬ್ : ಪ್ರತಿ ಲೀಟರ್‌ಗೆ 1 ಪೈಸೆ ಹೆಚ್ಚಳ
ಗೃಹೇತರ ಬಳಕೆ - ವಾಣಿಜ್ಯ / ಕೈಗಾರಿಕೆ ಬಳಕೆ ನೀರಿನ ದರ
1) ಕೈಗಾರಿಕೆಗಳಿಗೆ/ಬಲ್ಕ್ ಸಪ್ರೈ ಸ್ಪ್ಯಾಬ್: ಪ್ರತಿ ಲೀಟರ್‌ಗೆ 0.9 ಪೈಸೆ ಹೆಚ್ಚಳ (1ಪೈಸೆಗಿಂತ ಕಡಿಮೆ)
2) 0-10,000 ಲೀಟರ್ ಸ್ಲ್ಯಾಬ್ : ಪ್ರತೀ ಲೀಟರ್‌ಗೆ 1 ಪೈಸೆ ಹೆಚ್ಚಳ
3) 10,001-25,000 ಲೀಟರ್ ಸ್ಲ್ಯಾಬ್: ಪ್ರತಿ ಲೀಟರ್‌ಗೆ 1.3 ಪೈಸೆ ಹೆಚ್ಚಳ
4) 25,001-50,000 : ಲೀಟರ್ ಸ್ಲ್ಯಾಬ್: ಪ್ರತೀ ಲೀಟರ್‌ಗೆ 1.5 ಪೈಸೆ ಹೆಚ್ಚಳ
5) 50,001-75,000 ಲೀಟರ್ ಸ್ಕ್ಯಾಬ್: ಪ್ರತಿ ಲೀಟರ್‌ಗೆ 1.9 ಪೈಸೆ ಹೆಚ್ಚಳ
6) 760001-1 ಲಕ್ಷ ಲೀಟರ್ ಸ್ಲಾಬ್: ಪ್ರತಿ ಲೀಟರ್‌ಗೆ 1.1 ಪೈಸೆ ಹೆಚ್ಚಳ
7) 1 ಲಕ್ಷ ಮತ್ತು ಅದಕ್ಕೂ ಹೆಚ್ಚು ಲೀಟರ್ ಸ್ಲ್ಯಾಬ್: ಪ್ರತೀ ಲೀಟರ್‌ಗೆ 1.2 ಪೈಸೆ ಹೆಚ್ಚಳ
ಬೆಂಗಳೂರಲ್ಲಿ ಪ್ರತಿ ವರ್ಷ ಏಪ್ರಿಲ್ 1ರಿಂದ ನೀರಿನ ದರವನ್ನು ಶೇ. 3ರಷ್ಟು ಏರಿಕೆ ಮಾಡಲು ನಿರ್ಧರಿಸಲಾಗಿದೆ. ಒಮ್ಮೆಲೆ ದರ ಹೆಚ್ಚಳದ ಮೂಲಕ ಜನರಿಗೆ ಹೊರೆಯಾಗುವುದನ್ನು ಕಡಿಮೆ ಮಾಡುವ ಉದ್ದೇಶ ಮಂಡಳಿಯದ್ದು. ಅದೇ ರೀತಿ, ಕರ್ನಾಟಕ ರಾಜ್ಯ ಆಡಳಿತ ಸುಧಾರಣಾ ಆಯೋಗದ ಶಿಫಾರಸಿನಂತೆ 2026ರ ಏಪ್ರಿಲ್‌ನಿಂದ ಪ್ರತಿ ವರ್ಷ ನೀರಿನ ದರವನ್ನು ಶೇಕಡಾ 3ರಷ್ಟು ಹೆಚ್ಚಳ ಮಾಡಲು ಜಲಮಂಡಳಿ ನಿರ್ಧರಿಸಿದೆ ಎಂದು ಬೆಂಗಳೂರು ಜಲಮಂಡಳಿ ಅಧ್ಯಕ್ಷ ರಾಮ್ ಪ್ರಸಾತ್ ಮನೋಹರ್ ತಿಳಿಸಿದ್ದಾರೆ.