BMTC | ಪ್ರಯಾಣ ದರ ಏರಿಕೆ ಬೆನ್ನಲ್ಲೇ ಈಗ ಬಿಎಂಟಿಸಿ ಪಾಸ್ ದರ ಏರಿಕೆ!
ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಪಾಸ್ ದರವನ್ನೂ ಏರಿಕೆ ಮಾಡಿದೆ. ದೈನಂದಿನ, ಸಾಪ್ತಾಹಿಕ ಮತ್ತು ಮಾಸಿಕ ಪಾಸ್ ದರ ಏರಿಕೆ ಮಾಡಿ ಬಿಎಂಟಿಸಿ ಗುರುವಾರದಿಂಲೇ ಜಾರಿಗೆ ಬರುವಂತೆ ಆದೇಶ ಹೊರಡಿಸಿದೆ.;
ಈಗಾಗಲೇ ನಾಲ್ಕೂ ಸಾರಿಗೆ ನಿಗಮಗಳ ಬಸ್ ಟಿಕೆಟ್ ದರವನ್ನು ಶೇ 15 ರಷ್ಟು ಏರಿಕೆ ಮಾಡಿರುವ ರಾಜ್ಯ ಸರ್ಕಾರ, ಇದೀಗ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಪಾಸ್ ದರವನ್ನೂ ಏರಿಕೆ ಮಾಡಿದೆ. ದೈನಂದಿನ, ಸಾಪ್ತಾಹಿಕ ಮತ್ತು ಮಾಸಿಕ ಪಾಸ್ ದರ ಏರಿಕೆ ಮಾಡಿ ಬಿಎಂಟಿಸಿ ಗುರುವಾರದಿಂಲೇ ಜಾರಿಗೆ ಬರುವಂತೆ ಆದೇಶ ಹೊರಡಿಸಿದೆ.
ಬಸ್ ಪಾಸ್ ದರ ಏರಿಕೆ ಪಟ್ಟಿ
* ಸಾಮಾನ್ಯ ದಿನದ ಪಾಸು 70 ರೂಪಾಯಿಯಿಂದ 80 ರೂ. ಏರಿಕೆ
* ವಾರದ ಪಾಸು 300 ರೂಪಾಯುಯಿಂದ 350 ರೂ. ಏರಿಕೆ
* ಮಾಸಿಕ ಪಾಸು 1050 ರೂಪಾಯಿಯಿಂದ 1200 ರೂ. ಏರಿಕೆ
* ನೈಸ್ ರಸ್ತೆಯ ಟೋಲ್ ಶುಲ್ಕ ಸೇರಿ 2200 ರೂ. 2350 ರೂ. ಏರಿಕೆಯಾಗಿದೆ.
* ವಜ್ರ ಬಸ್ಸಿನ ದಿನದ ಪಾಸು 120 ರೂಪಾಯಿಯಿಂದ 140 ರೂ. ಏರಿಕೆ
* ವಜ್ರ ಬಸ್ಸಿನ ಮಾಸಿಕ ಪಾಸು 1800 ರೂಪಾಯಿಯಿಂದ 2000 ರೂ. ಏರಿಕೆ
* ವಾಯುವಜ್ರ ಬಸ್ಸಿನ – 3755 ರಿಂದ 4000 ರೂ ಏರಿಕೆ
* ವಿದ್ಯಾರ್ಥಿ ವಜ್ರ ಮಾಸಿಕ ಪಾಸು- 1200 ರಿಂದ 1400 ರೂ ಗೆ ಏರಿಕೆಯಾಗಿದೆ.
ಸರ್ಕಾರಿ ಬಸ್ಗಳ ಟಿಕೆಟ್ ದರ ಶೇ 15 ರಷ್ಟು ಅಂದರೆ 7 ರೂಪಾಯಿಂದ 115 ರೂ.ವರೆಗೆ ಏರಿಕೆಯಾಗಿದ್ದು, ಪ್ರಯಾಣಿಕರ ಜೇಬಿಗೆ ಕತ್ತರಿ ಬೀಳುತ್ತಿದೆ
ಬಿಎಂಟಿಸಿ ಬಸ್ಗಳ ಹಳೆಯ ಮತ್ತು ಹೊಸ ಟಿಕೆಟ್ ದರ ಪಟ್ಟಿ
* ಮೆಜೆಸ್ಟಿಕ್-ಜೆ.ಪಿ.ನಗರ 20 ರೂ. ಇತ್ತು, ಹೊಸ ದರ 24 ರೂ.
* ಮೆಜೆಸ್ಟಿಕ್-ನಂದಿನಿ ಲೇಔಟ್ 25 ರೂ. ಇತ್ತು, ಹೊಸ ದರ 28 ರೂ.
* ಮೆಜೆಸ್ಟಿಕ್-ಯಶವಂತಪುರ ರೈಲ್ವೆ ಸ್ಟೇಷನ್ 20 ರೂ. ಇತ್ತು, ಹೊಸ ದರ 23 ರೂ.
* ಮೆಜೆಸ್ಟಿಕ್-ಪೀಣ್ಯ ಎರಡನೇ ಹಂತ 25 ರೂ. ಇತ್ತು, ಹೊಸ ದರ 28 ರೂ.
* ಮೆಜೆಸ್ಟಿಕ್-ಅತ್ತಿಬೆಲೆ 25 ರೂ. ಇತ್ತು, ಹೊಸ ದರ 30 ರೂ.
* ಮೆಜೆಸ್ಟಿಕ್-ವಿದ್ಯಾರಣ್ಯಪುರ 25 ರೂ. ಇತ್ತು, ಹೊಸ ದರ 28 ರೂ.
* ಮೆಜೆಸ್ಟಿಕ್-ದೊಡ್ಡಬಳ್ಳಾಪುರ 25 ರೂ. ಇತ್ತು, ಹೊಸ ದರ 30 ರೂ.
* ಮೆಜೆಸ್ಟಿಕ್-ಬಿಇಎಂಎಲ್ 5ನೇ ಹಂತ 20 ರೂ. ಇತ್ತು, ಹೊಸ ದರ 24 ರೂ.
* ಮೆಜೆಸ್ಟಿಕ್-ಕುಮಾರಸ್ವಾಮಿ ಲೇಔಟ್ 25 ರೂ. ಇತ್ತು, ಹೊಸ ದರ 28 ರೂ.
* ಮೆಜೆಸ್ಟಿಕ್-ಬಿಟಿಎಂ ಲೇಔಟ್ 25 ರೂ. ಇತ್ತು, ಹೊಸ ದರ 28 ರೂ.
ಟಿಕೆಟ್ ದರ ಏರಿಕೆಗೆ ಸರ್ಕಾರದ ಸ್ಪಷ್ಟೀಕರಣ
ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯಲ್ಲಿ 2015ರಲ್ಲಿ ಹಾಗೂ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ, ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಮತ್ತು ಕಲ್ಯಾಣ ಕರ್ನಾಟಕ ಸಾರಿಗೆ ನಿಗಮಗಳಲ್ಲಿ 2020ರಲ್ಲಿ ಪ್ರಯಾಣದ ದರ ಪರಿಷ್ಕರಣೆ ಮಾಡಲಾಗಿತ್ತು. ಪ್ರಯಾಣ ದರ ಪರಿಷ್ಕರಣೆಗಾಗಿ ನಿಗಮದ ಸಿಬ್ಬಂದಿ ವೇತನ ವೆಚ್ಚ, ಇಂಧನ ವೆಚ್ಚ ಹಾಗೂ ನಿರ್ವಹಣಾ ವೆಚ್ಚವನ್ನು ಪರಿಗಣಿಸಲಾಗುತ್ತಿದೆ. ಪ್ರಸ್ತುತ 9.56 ಕೋಟಿ ರೂ. ಮೊತ್ತವನ್ನು ಹೆಚ್ಚುವರಿಯಾಗಿ ವೆಚ್ಚ ಮಾಡುತ್ತಿದ್ದು, ಸಿಬ್ಬಂದಿ ವೆಚ್ಚ ಸೇರಿ ವಾರ್ಷಿಕವಾಗಿ 3650.00 ಕೋಟಿ ರೂ. ನಿಗಮಕ್ಕೆ ಹೊರೆಯಾಗುತ್ತಿದೆ. ಆದ್ದರಿಂದ, ಶೇ 15ರಷ್ಟು ಪ್ರಯಾಣದ ದರ ಹೆಚ್ಚಳ ಮಾಡಲಾಗಿದೆ ಎಂದು ಸರ್ಕಾರ ಸ್ಪಷ್ಟನೆ ನೀಡಿತ್ತು.