ರಾಜ್ಯ ವನ್ಯಜೀವಿ ಮಂಡಳಿ ಪುನರ್‌ ರಚನೆ: ಶಾಸಕರು, ಸಚಿವರ ಮಕ್ಕಳಿಗೆ ಅವಕಾಶ

ಮುಂದಿನ ಮೂರು ವರ್ಷಗಳ ಅವಧಿಗೆ ಜಾರಿಗೆ ಬರುವಂತೆ ವನ್ಯಜೀವಿ ಮಂಡಳಿಯನ್ನು ಪುನರ್‌ ರಚಿಸಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಧ್ಯಕ್ಷರಾಗಿದ್ದು, ಅರಣ್ಯ ಮತ್ತು ಜೀವಶಾಸ್ತ್ರ ಸಚಿವ ಈಶ್ವರ್‌ ಖಂಡ್ರೆ ಉಪಾಧ್ಯಕ್ಷರಾಗಿದ್ದಾರೆ.;

Update: 2024-07-27 07:35 GMT
ವನ್ಯ ಜೀವಿ ಮಂಡಳಿಗೆ ಸದಸ್ಯರನ್ನು ನೇಮಿಸಲಾಗಿದೆ.
Click the Play button to listen to article

ರಾಜ್ಯ ವನ್ಯಜೀವಿ ಮಂಡಳಿಗೆ ಶಾಸಕರು, ಸಚಿವರ ಮಕ್ಕಳು ಹಾಗೂ ಸ್ವಯಂಸೇವಾ ಸಂಸ್ಥೆಗಳ ಪ್ರಮುಖರನ್ನು ನೇಮಕಗೊಳಿಸಿ ರಾಜ್ಯ ಸರಕಾರ ಆದೇಶ ಹೊರಡಿಸಿದೆ.

ಮುಂದಿನ ಮೂರು ವರ್ಷಗಳ ಅವಧಿಗೆ ರಾಜ್ಯ ವನ್ಯಜೀವಿ ಮಂಡಳಿಯನ್ನು ಪುನರ್‌ರಚಿಸಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಡಳಿಯ ಅಧ್ಯಕ್ಷರಾಗಿದ್ದು, ಅರಣ್ಯ ಮತ್ತು ಜೀವಶಾಸ್ತ್ರ ಸಚಿವ ಈಶ್ವರ್‌ ಖಂಡ್ರೆ ಉಪಾಧ್ಯಕ್ಷರಾಗಿದ್ದಾರೆ.

ವನ್ಯಜೀವಿ ಮಂಡಳಿ ನೂತನ ಸದಸ್ಯರು

ರಾಮದುರ್ಗ ಶಾಸಕ ಅಶೋಕ್ ಎಂ. ಪಟ್ಟಣ, ಗುಂಡ್ಲುಪೇಟೆ ಶಾಸಕ ಎಚ್.ಎಂ.ಗಣೇಶ್ ಪ್ರಸಾದ್, ವಿಧಾನ ಪರಿಷತ್ ಸದಸ್ಯ ಪುಟ್ಟಣ್ಣ, ಸರ್ಕಾರೇತರ ಸಂಸ್ಥೆಗಳ ಮುಖ್ಯಸ್ಥರಾದ ವೈಲ್ಡ್‌ಲೈಫ್‌ ಅಸೋಸಿಯೇಷನ್‌ ಆಫ್ ಸೌತ್ ಇಂಡಿಯಾ ವನ್ಯಜೀವಿ ಸಂಘದಿಂದ ಸುಶೀಲ ಗ್ಯಾನಚಂದ್, ಟೈಗರ್ಸ್‌ ಅನ್‌ಲಿಮಿಟೆಡ್ ವನ್ಯಜೀವಿ ಸಮಾಜದಿಂದ ಸೀಮಾ ಬೇಗಂ ಖಲೀಲ್, ಬೆಂಗಳೂರು ಪರಿಸರ ಟ್ರಸ್ಟ್‌ನಿಂದ ಡಾ.ಆರ್.ವಿ. ದಿನೇಶ್ ಅವರನ್ನು ಸದಸ್ಯರನ್ನಾಗಿ ನೇಮಕ ಮಾಡಲಾಗಿದೆ.

ಸಂರಕ್ಷಣಾ ವಿಶೇಷ ತಜ್ಞರು, ಜೀವಿಶಾಸ್ತ್ರ ತಜ್ಞರು ಹಾಗೂ ಪರಿಸರವಾದಿಗಳಾಗಿರುವ ಬೆಂಗಳೂರಿನ ರವೀಂದ್ರ ರಘುನಾಥ, ಡಾ.ರಾಜಕುಮಾರ್ ಎಸ್ ಅಲ್ಲೆ, ಅಜಿತ್ ಕರಿಗುಡ್ಡಯ್ಯ, ಧ್ರುವ ಎಂ ಪಾಟೀಲ್, ಮಲ್ಲಪ್ಪ ಎಸ್ ಅಂಗಡಿ, ವಿರಾಜಪೇಟೆಯ ಸಂಕೇತ ಪೂವಯ್ಯ, ಧಾರವಾಡದ ವೈಶಾಲಿ ಕುಲಕರ್ಣಿ, ಬೀದರ್‌ನ ವಿನಯ್ ಕುಮಾರ್ ಮಾಳಿಗೆ, ಮೈಸೂರಿನ ಡಾ.ಸಂತೃಪ್ತ ಅವರನ್ನು ನೇಮಕ ಮಾಡಲಾಗಿದೆ.

ಮಂಡಳಿಯಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿವಿಧ ಇಲಾಖೆಗಳು, ಸಂಸ್ಥೆಗಳ ಹತ್ತು ಅಧಿಕಾರಿಗಳು ಪದನಿಮಿತ್ತ ಸದಸ್ಯರು ರಾಜ್ಯದ ವನ್ಯಜೀವಿ ವಿಭಾಗದ ಪ್ರಧಾನ ಅರಣ್ಯ ಸಂರಕ್ಷಣಾಧಿಕಾರಿ ಮತ್ತು ಮುಖ್ಯ ವನ್ಯಜೀವಿ ಪರಿಪಾಲಕರು ಮಂಡಳಿಯ ಸದಸ್ಯ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದಾರೆ.

Tags:    

Similar News