ವನ್ಯಜೀವಿಗಳಿಗೂ ತಟ್ಟಿದ ಬರ | ಕರ್ನಾಟಕದಲ್ಲಿ 36 ಗಂಟೆಯಲ್ಲಿ 4 ಆನೆ ಸಾವು!

ಕರ್ನಾಟಕದಲ್ಲಿ ಬರದ ತೀವ್ರತೆ ಇದೀಗ ವನ್ಯಜೀವಿಗಳಿಗೂ ಮುಟ್ಟಿದ್ದು, ಕಳೆದ 36 ಗಂಟೆಯ ಅವಧಿಯಲ್ಲಿ ಕರ್ನಾಟಕದ ಆಗ್ನೇಯ ಅರಣ್ಯ ವ್ಯಾಪ್ತಿಯಲ್ಲಿ ನಾಲ್ಕು ಆನೆಗಳು ಸಾವನ್ನಪ್ಪಿರುವುದು ವರದಿಯಾಗಿದೆ.

Update: 2024-04-08 12:34 GMT

ಕರ್ನಾಟಕದಲ್ಲಿ ಬರದ ತೀವ್ರತೆ ಇದೀಗ ವನ್ಯಜೀವಿಗಳಿಗೂ ತಟ್ಟಿದ್ದು, ಕಳೆದ 36 ಗಂಟೆಯ ಅವಧಿಯಲ್ಲಿ ಕರ್ನಾಟಕದ ಆಗ್ನೇಯ ಅರಣ್ಯ ವ್ಯಾಪ್ತಿಯಲ್ಲಿ ನಾಲ್ಕು ಆನೆಗಳು ಸಾವನ್ನಪ್ಪಿರುವುದು ವರದಿಯಾಗಿದೆ.

ರಾಮನಗರದಲ್ಲಿ ನಿರ್ಜಲೀಕರಣದಿಂದ ಭಾನುವಾರ ಆನೆಯೊಂದು ಮೃತಪಟ್ಟಿದೆ. ಕರ್ನಾಟಕದಲ್ಲಿ ಅಲ್ಲಲ್ಲಿ ಹಗುರ ಮಳೆಯಾಗುತ್ತಿದೆ. ಆದರೆ, ಬರದ ತೀವ್ರತೆಯ ಮುಂದೆ ಈಗ ಸುರಿಯುತ್ತಿರುವ ಮಳೆಯಿಂದ ನಿರೀಕ್ಷಿತ ಪ್ರಮಾಣದಲ್ಲಿ ಅನುಕೂಲ ಆಗಿಲ್ಲ.

ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದ ಗಡಿ ಪ್ರದೇಶವಾದ ಕನಕಪುರದಲ್ಲಿ 11 ವರ್ಷದ ಆನೆ ಮಾವಿನ ಹಣ್ಣು ಸೇವಿಸಿ ಮೃತಪಟ್ಟಿದೆ. ಅಜೀರ್ಣದಿಂದ ಆನೆ ಸಾವನ್ನಪ್ಪಿರುವ ಸಾಧ್ಯತೆ ಇದೆ. ಮಾವಿನಹಣ್ಣು ಸೇವಿಸಿದ ನಂತರ ಆನೆಯ ಕರುಳಿನ ಭಾಗ ಮುಚ್ಚಿದ್ದರಿಂದ ಆನೆ ಸಾವನ್ನಪ್ಪಿದೆ ಎಂದು ಕನಕಪುರ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಗಣೇಶ್ ತಿಳಿಸಿದ್ದಾರೆ.

ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದ ಕೋಡಿಹಳ್ಳಿ ವ್ಯಾಪ್ತಿಯಲ್ಲಿ ಸೋಮವಾರ ದಂತವಿಲ್ಲದ ಆನೆಯೊಂದು ಮೃತಪಟ್ಟಿದೆ. ಇನ್ನು ತಮಿಳುನಾಡು-ಕರ್ನಾಟಕ ಗಡಿಭಾಗದ ಗೋಪಿನಾಥಂ ಅರಣ್ಯ ಪ್ರದೇಶದ ಕಾವೇರಿ ನದಿಯ ತಟದಲ್ಲಿ ಆನೆಯ ಕಳೇಬರ ಪತ್ತೆಯಾಗಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಕಾವೇರಿ ವನ್ಯಧಾಮ ಅರಣ್ಯ ಸಂಕರ್ನಾಟಕದಲ್ಲಿ ಬರದ ತೀವ್ರತೆ ಇದೀಗ ವನ್ಯಜೀವಿಗಳಿಗೂ ತಟ್ಟಿದ್ದು, ಕಳೆದ 36 ಗಂಟೆಯ ಅವಧಿಯಲ್ಲಿ ಕರ್ನಾಟಕದ ಆಗ್ನೇಯ ಅರಣ್ಯ ವ್ಯಾಪ್ತಿಯಲ್ಲಿ ನಾಲ್ಕು ಆನೆಗಳು ಸಾವನ್ನಪ್ಪಿರುವುದು ವರದಿಯಾಗಿದೆ.

ರಕ್ಷಣಾಧಿಕಾರಿ ಸುರೇಂದ್ರ ಅವರು, ಆನೆ ನದಿಯಲ್ಲಿ ಮುಳುಗಿ ಸಾವನ್ನಪ್ಪಿರುವುದು ಕಂಡುಬಂದಿದೆ. ನದಿಯಲ್ಲಿ ಜಾರಿ ಬಿದ್ದು ಸಾವನ್ನಪ್ಪಿರುವ ಸಾಧ್ಯತೆಯೂ ಇದೆ. ಆದರೆ, ಸಾವಿಗೆ ಇನ್ನು ನಿಖರ ಕಾರಣ ತಿಳಿದುಬಂದಿಲ್ಲ. ಆನೆಯ ಕೆಳೇಬರವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಮರಣೋತ್ತರ ಪರೀಕ್ಷೆ ವರದಿ ಬಂದ ನಂತರ ನಿಖರ ಮಾಹಿತಿ ಸಿಗಲಿದೆ ಎಂದು ಹೇಳಿದ್ದಾರೆ. 

Tags:    

Similar News