ಮೈಸೂರು ಫ್ಯಾಕ್ಟರಿಯಲ್ಲಿ 390 ಕೋಟಿ ರೂಪಾಯಿ ಮೌಲ್ಯದ 192 ಕೆ.ಜಿ. ಮೆಥಡ್ರನ್ ಡ್ರಗ್ಸ್ ವಶ!
ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಲಾಗಿರುವ 8 ಮಂದಿಯ ಸಮಗ್ರ ತನಿಖೆ ನಡೆಯುತ್ತಿದೆ. ಮುಂಬೈ ಮತ್ತು ಮೈಸೂರು ಪೊಲೀಸರು ಜಂಟಿಯಾಗಿ ನಡೆಸಿದ ಈ ಕಾರ್ಯಾಚರಣೆಯು, ದೊಡ್ಡ ಡ್ರಗ್ಸ್ ಜಾಲವನ್ನು ಭೇದಿಸುವಲ್ಲಿ ಮಹತ್ವದ ಸಾಧನೆಯಾಗಿ ಪರಿಗಣಿಸಲಾಗಿದೆ.;
ಸಾಂದರ್ಭಿಕ ಚಿತ್ರ
ಮೈಸೂರಿನ ಹೊರವಲಯದಲ್ಲಿ ನಡೆದ ಭಾರಿ ಪ್ರಮಾಣದ ಡ್ರಗ್ಸ್ ವಶ ಪ್ರಕರಣದಲ್ಲಿ ಒಟ್ಟು 192 ಕೆ.ಜಿ. ಮೆಥಡ್ರನ್ (Mephredone) ಸಿಕ್ಕಿದ್ದು, ಇದರ ಮೌಲ್ಯ ಸುಮಾರು 390 ಕೋಟಿ ರೂಪಾಯಿ ಎಂದು ಮುಂಬೈ ಪೊಲೀಸರು ತಿಳಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂಬೈ ಪೊಲೀಸರು ದೂರಿನ ಅನುಸಾರ ಕಾರ್ಯಾಚರಣೆ ನಡೆಸಿ, ಪ್ರಮುಖ 8 ಮಂದಿಯನ್ನು ಬಂಧಿಸಿದ್ದಾರೆ.
ಉಪ ಪೊಲೀಸ್ ಆಯುಕ್ತ ದತ್ತ ನಲವಾಡೆ ಪ್ರಕಟಿಸಿದ ಮಾಹಿತಿ ಪ್ರಕಾರ, ಮೈಸೂರಿನ ಹೊರವಲಯದ ಈ ದಾಳಿಯ ಮೊದಲು ಮುಂಬೈನಲ್ಲಿ ಒಂದು ದಾಳಿ ನಡೆದಿತ್ತು. ಅಲ್ಲಿ ಸುಮಾರು 5 ಕೆ.ಜಿ. ಮೆಥಡ್ರನ್ ಡ್ರಗ್ಸ್ ವಶಪಡಿಸಿಕೊಳ್ಳಲಾಗಿದ್ದು, ಇದರ ಮೌಲ್ಯ 8 ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿತ್ತು.
ಆ ಬಳಿಕ, ಮೈಸೂರಿನಲ್ಲಿ ನಡೆದ ದಾಳಿಯಲ್ಲಿ 187 ಕೆ.ಜಿ. ಮೆಥಡ್ರನ್ ಡ್ರಗ್ಸ್ ವಶಪಡಿಸಿಕೊಳ್ಳಲಾಗಿದ್ದು, ಇದರ ಮೌಲ್ಯ 382 ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದೆ. ಈ ಎರಡು ದಾಳಿಗಳಿಂದ ವಶಪಡಿಸಿಕೊಂಡ ಡ್ರಗ್ಸ್‌ನ ಒಟ್ಟು ಪ್ರಮಾಣ 192 ಕೆ.ಜಿ. ಆಗಿದ್ದು, ಇದರ ಒಟ್ಟು ಮೌಲ್ಯ 390 ಕೋಟಿ ರೂಪಾಯಿ ಆಗಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಲಾಗಿರುವ 8 ಮಂದಿಯ ಸಮಗ್ರ ತನಿಖೆ ನಡೆಯುತ್ತಿದೆ. ಮುಂಬೈ ಮತ್ತು ಮೈಸೂರು ಪೊಲೀಸರು ಜಂಟಿಯಾಗಿ ನಡೆಸಿದ ಈ ಕಾರ್ಯಾಚರಣೆಯು, ದೊಡ್ಡ ಡ್ರಗ್ಸ್ ಜಾಲವನ್ನು ಭೇದಿಸುವಲ್ಲಿ ಮಹತ್ವದ ಸಾಧನೆಯಾಗಿ ಪರಿಗಣಿಸಲಾಗಿದೆ. ಈ ಪ್ರಕರಣದ ಕುರಿತು ಹೆಚ್ಚಿನ ಮಾಹಿತಿಯನ್ನು ಪತ್ತೆಹಚ್ಚಲಾಗುತ್ತಿದೆ ಮತ್ತು ಕಾನೂನು ಅಡಿ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.