ನಾವೂ ಕೂಡ ಭಾರತಕ್ಕೆ ಅಧಿಕ ತೆರಿಗೆ ಹಾಕಬೇಕಾಗುತ್ತೆ: ಡೊನಾಲ್ಡ್ ಟ್ರಂಪ್ ಎಚ್ಚರಿಕೆ
ನಾನು ಅಧಿಕಾರಕ್ಕೆ ಬಂದರೆ ಪರಸ್ಪರ ತೆರಿಗೆಯನ್ನು ಪರಿಚಯಿಸುವುದಾಗಿ ಪ್ರತಿಜ್ಞೆ ಮಾಡಿದ ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ವಿದೇಶಿ ಉತ್ಪನ್ನಗಳ ಮೇಲೆ ಭಾರತವು ಅತಿ ಹೆಚ್ಚು ಸುಂಕವನ್ನು ವಿಧಿಸುತ್ತದೆ ಎಂದು ಅವರು ಆರೋಪಿಸಿದರು.;
ನಾನು ಅಧಿಕಾರಕ್ಕೆ ಬಂದರೆ ಪರಸ್ಪರ ತೆರಿಗೆಯನ್ನು ಪರಿಚಯಿಸುವುದಾಗಿ ಪ್ರತಿಜ್ಞೆ ಮಾಡಿದ ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ವಿದೇಶಿ ಉತ್ಪನ್ನಗಳ ಮೇಲೆ ಭಾರತವು ಅತಿ ಹೆಚ್ಚು ಸುಂಕವನ್ನು ವಿಧಿಸುತ್ತದೆ ಎಂದು ಆರೋಪಿಸಿದರು.
"ಅಮೆರಿಕವನ್ನು ಮತ್ತೊಮ್ಮೆ ಅಸಾಧಾರಣವಾಗಿ ಶ್ರೀಮಂತರನ್ನಾಗಿ ಮಾಡುವ ನನ್ನ ಯೋಜನೆಯ ಪ್ರಮುಖ ಅಂಶವೆಂದರೆ ಪರಸ್ಪರ ಸಂಬಂಧ. ಇದು ನನ್ನ ಯೋಜನೆಯಲ್ಲಿ ಬಹಳ ಮುಖ್ಯವಾದ ಪದವಾಗಿದೆ. ಏಕೆಂದರೆ ನಾವು ಸಾಮಾನ್ಯವಾಗಿ ಸುಂಕಗಳನ್ನು ವಿಧಿಸುವುದಿಲ್ಲ" ಎಂದು ಅಮೆರಿಕ ಅಧ್ಯಕ್ಷ ಚುನಾವಣೆಯ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಟ್ರಂಪ್ ಗುರುವಾರ ಪ್ರಮುಖ ಆರ್ಥಿಕ ನೀತಿ ಭಾಷಣದಲ್ಲಿ ಹೇಳಿದರು.
ಚೀನಾ 200 ಪರ್ಸೆಂಟ್ ತೆರಿಗೆ ಹಾಕುತ್ತದೆ. ಬ್ರೆಜಿಲ್ ಕೂಡ ಹೆಚ್ಚು ತೆರಿಗೆ ಹಾಕುತ್ತದೆ. ಆದರೆ, ಎಲ್ಲಕ್ಕಿಂತ ಹೆಚ್ಚು ತೆರಿಗೆ ವಿಧಿಸುವುದು ಭಾರತವೇ. ತಾನು ಅಧಿಕಾರಕ್ಕೆ ಬಂದರೆ ಈ ದೇಶಗಳಿಗೂ ಅಷ್ಟೇ ತೆರಿಗೆ ವಿಧಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.
“ನಾವು ನಿಜವಾಗಿಯೂ ಶುಲ್ಕ ವಿಧಿಸುವುದಿಲ್ಲ. ಚೀನಾ ನಮಗೆ 200 ಪ್ರತಿಶತ ಸುಂಕವನ್ನು ವಿಧಿಸುತ್ತದೆ. ಬ್ರೆಜಿಲ್ ದೊಡ್ಡ ತೆರಿಗೆ ಹೇರುವ ದೇಶವಾಗಿದೆ. ಎಲ್ಲಕ್ಕಿಂತ ದೊಡ್ಡ ತೆರಿಗೆ ದೇಶ ಭಾರತವಾಗಿದೆ ”ಎಂದು ರಿಪಬ್ಲಿಕನ್ ಅಧ್ಯಕ್ಷೀಯ ಅಭ್ಯರ್ಥಿ ಡೆಟ್ರಾಯಿಟ್‌ನಲ್ಲಿ ಹೇಳಿದರು.
‘ಭಾರತದೊಂದಿಗೆ ನಾವು ಒಳ್ಳೆಯ ಬಾಂಧವ್ಯ ಹೊಂದಿದ್ದೇನೆ. ನಾನಿದ್ದಾಗ ಅದ್ಭುತ ಸಂಬಂಧ ಇಟ್ಟುಕೊಂಡಿದ್ದೆ. ಅದರಲ್ಲೂ ಮೋದಿಯದ್ದು ವಿಶೇಷತೆ. ಅವರೊಬ್ಬ ಗ್ರೇಟ್ ಲೀಡರ್. ಶ್ರೇಷ್ಠ ವ್ಯಕ್ತಿತ್ವದವರು. ನಿಜಕ್ಕೂ ಶ್ರೇಷ್ಠ ವ್ಯಕ್ತಿ. ಒಳ್ಳೆಯ ಕೆಲಸ ಮಾಡಿದ್ದಾರೆ. ಆದರೆ ಭಾರತ ಬಹುಶಃ ಚೀನಾಕ್ಕಿಂತ ಹೆಚ್ಚಿನ ರೀತಿಯಲ್ಲಿ ಶುಲ್ಕ ವಿಧಿಸುತ್ತಾರೆ ಎಂದು ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
ತಾನೇನಾದರೂ ಅಧಿಕಾರಕ್ಕೆ ಬಂದರೆ ಬೇರೆ ಬೇರೆ ದೇಶಗಳಿಗೆ ಅವುಗಳಷ್ಟೇ ಸರಿಸಮಾನವಾಗಿ ಸುಂಕ ವಿಧಿಸುತ್ತೇನೆ. ಹಾಗೆಯೇ, ಅಮೆರಿಕದಲ್ಲಿ ಉತ್ಪಾದನೆ ಮಾಡುವ ಕಂಪನಿಗಳಿಗೆ ಕಾರ್ಪೊರೇಟ್ ತೆರಿಗೆ ದರವನ್ನು ಶೇ. 21ರಿಂದ ಶೇ. 15ಕ್ಕೆ ಇಳಿಸುತ್ತೇನೆ ಎಂದು ಆಶ್ವಾಸನೆ ನೀಡಿದ್ದಾರೆ.
ಅಮೆರಿಕದಲ್ಲಿ ಅಧ್ಯಕ್ಷೀಯ ಚುನಾವಣೆಯಲ್ಲಿ ಆಡಳಿತಾರೂಢ ಡೆಮಾಕ್ರಟಿಕ್ ಪಕ್ಷದಿಂದ ಕಮಲಾ ಹ್ಯಾರಿಸ್ ಮತ್ತು ರಿಪಬ್ಲಿಕನ್ ಪಕ್ಷದಿಂದ ಡೊನಾಲ್ಡ್ ಟ್ರಂಪ್ ಕಣದಲ್ಲಿದ್ದಾರೆ. ಇತರ ಸಣ್ಣಪುಟ್ಟ ಪಕ್ಷಗಳ ಅಭ್ಯರ್ಥಿಗಳು ಮತ್ತು ಪಕ್ಷೇತರ ಅಭ್ಯರ್ಥಿಗಳೂ ಕಣದಲ್ಲಿದ್ದಾರೆ. ಆದರೆ, ಕಮಲಾ ಹ್ಯಾರಿಸ್ ಮತ್ತು ಡೊನಾಲ್ಡ್ ಟ್ರಂಪ್ ಮಧ್ಯೆ ನೇರ ಪೈಪೋಟಿ ನಡೆಯುತ್ತಿದೆ. ನವೆಂಬರ್ 5ರಂದು ಚುನಾವಣೆ ನಡೆಯಲಿದೆ.