ಅಮೆರಿಕ ಅಧ್ಯಕ್ಷೀಯ ಚುನಾವಣೆ| ಹಿಂದೆ ಸರಿದ ಜೋ ಬೈಡನ್; ಚೆನ್ನೈ ಮೂಲದ ಕಮಲಾ ಹ್ಯಾರಿಸ್ ಹೆಸರು ಮುನ್ನೆಲೆಗೆ
ಅಚ್ಚರಿಯ ನಿರ್ಧಾರದಲ್ಲಿ ಅಮೆರಿಕ ಅಧ್ಯಕ್ಷ ಜೋ ಬೈಡನ್ ಭಾನುವಾರ (ಜುಲೈ 21) ತಾವು ಅಧ್ಯಕ್ಷೀಯ ಚುನಾವಣೆಯಿಂದ ಹಿಂದೆ ಸರಿಯುವುದಾಗಿ ಘೋಷಿಸಿದ್ದಾರೆ ಮತ್ತು ಡೆಮಾಕ್ರಟಿಕ್ ಪಕ್ಷದ ಹೊಸ ಅಭ್ಯರ್ಥಿಯಾಗಿ ಕಮಲಾ ಹ್ಯಾರಿಸ್ ಅವರನ್ನು ಹೆಸರಿಸಿದ್ದಾರೆ
ಅಚ್ಚರಿಯ ನಿರ್ಧಾರದಲ್ಲಿ ಅಮೆರಿಕ ಅಧ್ಯಕ್ಷ ಜೋ ಬೈಡನ್ ಭಾನುವಾರ (ಜುಲೈ 21) ತಾವು ಅಧ್ಯಕ್ಷೀಯ ಚುನಾವಣೆಯಿಂದ ಹಿಂದೆ ಸರಿಯುವುದಾಗಿ ಘೋಷಿಸಿದ್ದಾರೆ ಮತ್ತು ಡೆಮಾಕ್ರಟಿಕ್ ಪಕ್ಷದ ಹೊಸ ಅಭ್ಯರ್ಥಿಯಾಗಿ ಉಪಾಧ್ಯಕ್ಷೆ ಹಾಗೂ ಭಾರತೀಯ ಮೂಲದ ಕಮಲಾ ಹ್ಯಾರಿಸ್ ಅವರನ್ನು ಹೆಸರಿಸಿದ್ದಾರೆ.
ಆ ಮೂಲಕ ಒಂದು ವೇಳೆ ಕಮಲಾ ಹ್ಯಾರಿಸ್ ಚುನಾವಣೆಯಲ್ಲಿ ಗೆದ್ದಿದ್ದೇ ಆದಲ್ಲಿ ಮೊದಲ ಮಹಿಳೆ ಹಾಗೂ ಎರಡನೇ ಕಪ್ಪು ವರ್ಣೀಯ ಅಭ್ಯರ್ಥಿಯೊಬ್ಬರು ಅಮೆರಿಕದ ಅಧ್ಯಕ್ಷರಾದಂತಾಗುತ್ತದೆ. ಭಾರತೀಯ ಮತ್ತು ಆಫ್ರಿಕನ್ ಮೂಲದ ಹ್ಯಾರಿಸ್ ಅವರನ್ನು ನಾಮನಿರ್ದೇಶನ ಮಾಡುವ ಬೈಡನ್ ಅವರ ನಿರ್ಧಾರವು ಕಳೆದ ತಿಂಗಳು ಅವರ ರಿಪಬ್ಲಿಕನ್ ಪ್ರತಿಸ್ಪರ್ಧಿ ಮತ್ತು ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿರುದ್ಧ ಒತ್ತಡ ಹೇರಿದಂತಾಗಿದೆ.
"ಈ ವರ್ಷ ಕಮಲಾ ನಮ್ಮ ಪಕ್ಷದ ಅಭ್ಯರ್ಥಿಯಾಗಲು ನನ್ನ ಸಂಪೂರ್ಣ ಬೆಂಬಲ ಮತ್ತು ಅನುಮೋದನೆಯನ್ನು ನೀಡಲು ನಾನು ಬಯಸುತ್ತೇನೆ. ಡೆಮೋಕ್ರಾಟ್‌ಗಳು - ಒಗ್ಗೂಡಿ ಟ್ರಂಪ್‌ರನ್ನು ಸೋಲಿಸುವ ಸಮಯ. ಇದನ್ನು ಮಾಡೋಣ” ಎಂದು ಬಿಡೆನ್ ಎಕ್ಸ್‌ನಲ್ಲಿನ ಪೋಸ್ಟ್‌ನಲ್ಲಿ ಹೇಳಿದ್ದಾರೆ.
ಮೊದಲ ಮಹಿಳೆ, ಕಪ್ಪು ವರ್ಣೀಯ ಉಪಾಧ್ಯಕ್ಷೆ
ಕಮಲಾ ಹ್ಯಾರಿಸ್ ಅವರು 2021 ರಿಂದ ಯುಎಸ್ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ, ಅವರು ಅಮೆರಿಕದ ಮೊದಲ ಮಹಿಳೆ, ಮೊದಲ ಕಪ್ಪು ಮತ್ತು ಮೊದಲ ದಕ್ಷಿಣ ಏಷ್ಯಾದ ಉಪಾಧ್ಯಕ್ಷರಾದರು.
"ಸದ್ಯಕ್ಕೆ ನನ್ನನ್ನು ಮರು ಆಯ್ಕೆ ಮಾಡಲು ಶ್ರಮಿಸಿದ ಎಲ್ಲರಿಗೂ ನನ್ನ ಆಳವಾದ ಕೃತಜ್ಞತೆಯನ್ನು ವ್ಯಕ್ತಪಡಿಸುತ್ತೇನೆ. ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಅವರು ಈ ಎಲ್ಲಾ ಕೆಲಸಗಳಲ್ಲಿ ಅಸಾಧಾರಣ ಪಾಲುದಾರರಾಗಿದ್ದಕ್ಕಾಗಿ ನಾನು ಅವರಿಗೆ ಧನ್ಯವಾದ ಹೇಳಲು ಬಯಸುತ್ತೇನೆ. ಮತ್ತು ನೀವು ನನ್ನ ಮೇಲೆ ಇಟ್ಟಿರುವ ನಂಬಿಕೆ ಮತ್ತು ನಂಬಿಕೆಗಾಗಿ ಅಮೆರಿಕದ ಜನರಿಗೆ ನನ್ನ ಹೃತ್ಪೂರ್ವಕ ಮೆಚ್ಚುಗೆಯನ್ನು ವ್ಯಕ್ತಪಡಿಸುತ್ತೇನೆ, ”ಎಂದು ಬೈಡನ್ ಹೇಳಿದರು.
ಕಮಲಾ ಹ್ಯಾರಿಸ್
ಜೋ ಬೈಡನ್ ಅವರು ಭಾರತ ಮೂಲದ ಕಮಲಾ ಹ್ಯಾರಿಸ್ ಅವರನ್ನು ಅಧ್ಯಕ್ಷ ಸ್ಥಾನದ ಅಭ್ಯರ್ಥಿಯನ್ನಾಗಿ ಆರಿಸುವ ಮೂಲಕ ಅಮೆರಿಕ ಅಧ್ಯಕ್ಷೀಯ ಚುನಾವಣೆಯ ಕಾವನ್ನು ಮತ್ತಷ್ಟು ಹೆಚ್ಚಿಸಿದ್ದಾರೆ. ಭಾರತ ಮೂಲದವರಾಗಿರುವುದರಿಂದ ಕಮಲಾ ಹ್ಯಾರಿಸ್ ಅವರ ಆಯ್ಕೆಯನ್ನು ಅಮೆರಿಕದಲ್ಲಿನ ಭಾರತೀಯ ಸಮುದಾಯಗಳು ಸ್ವಾಗತಿಸಿವೆ, ಅಮೆರಿಕದ ಯಾವುದೇ ಪ್ರಮುಖ ಪಕ್ಷಗಳ
ಅಧ್ಯಕ್ಷೀಯ ಸ್ಪರ್ಧೆಗೆ ಇಳಿಯುತ್ತಿರುವ ಮೊಟ್ಟಮೊದಲ ಕಪ್ಪುವರ್ಣೀಯ ಮಹಿಳೆ ಎಂಬ ಹೆಗ್ಗಳಿಕೆಗೆ ಅವರು ಪಾತ್ರರಾಗಿದ್ದಾರೆ.
ತಾಯಿ ಚೆನ್ನೈ ಮೂಲದವರು
ಕಮಲ ಹ್ಯಾರಿಸ್ ಜನಿಸಿದ್ದು 1964ರಲ್ಲಿ. ಅವರ ತಂದೆ ಜಮೈಕಾದವರಾದರೆ, ತಾಯಿ ಭಾರತದವರು. ಅವರ ಬಾಲ್ಯದ ಜೀವನ ಹೆಚ್ಚು ಕಳೆದಿದ್ದು ಕ್ಯಾಲಿಪೋರ್ನಿಯಾದ ಬರ್ಕೆಲಿಯಲ್ಲಿ. ತಮ್ಮ ತಾಯಿಯ ಜತೆಗಿನ ಬಾಂಧವ್ಯದ ಬಗ್ಗೆ ಅವರು ಅನೇಕ ಬಾರಿ ಹೇಳಿಕೊಂಡಿದ್ದರು. ಆಕೆಯೇ ತಮ್ಮ ಅತಿ ದೊಡ್ಡ ಸ್ಫೂರ್ತಿ ಎಂದು ತಿಳಿಸಿದ್ದರು. ಅದಂಹಾಗೆ, ಕಮಲಾ ಅವರ ತಾಯಿ ಚೆನ್ನೈ ಮೂಲದವರು.
ತಾಯಿ ಕ್ಯಾನ್ಸರ್ ಸಂಶೋಧಕಿ
ಕಮಲಾ ಅವರ ತಾಯಿ ಶ್ಯಾಮಲಾ ಗೋಪಾಲನ್ ಹ್ಯಾರಿಸ್ ಕ್ಯಾನ್ಸರ್ ಸಂಶೋಧಕರಾಗಿದ್ದರು. 2009ರಲ್ಲಿ ಅವರು ನಿಧನರಾಗಿದ್ದರು. ಜಮೈಕಾ ಮೂಲದ ತಂದೆ ಡೊನಾಲ್ಡ್ ಹ್ಯಾರಿಸ್ ಸ್ಟ್ಯಾ ನ್ ಫೋರ್ಡ್. ಕಮಲಾ ಹ್ಯಾರಿಸ್ 2016ರಲ್ಲಿ ಸೆನೆಟ್ ಆಯ್ಕೆಯಾಗುವವರೆಗೂ ಕಾನೂನು ವಲಯದಲ್ಲಿ ಕೆಲಸ ಮಾಡುತ್ತಿದ್ದರು. ಕ್ಯಾಲಿಫೋರ್ನಿಯಾದ ಮಾಜಿ ಅಟಾರ್ನಿ ಜನರಲ್ ಮತ್ತು ಸ್ಯಾನ್ ಫ್ರಾನ್ಸಿಸ್ಕೋ ದ ಜಿಲ್ಲಾ ಅಟಾರ್ನಿಯಾಗಿಯೂ ಕಾರ್ಯನಿರ್ವಹಿಸಿದ್ದರು. ವಲಸಿಗರು ಮತ್ತು ಸಮಾನಹಕ್ಕುಗಳ ವಿಚಾರದಲ್ಲಿ ಕಮಲಾ ಅನೇಕ ಹೋರಾಟ ನಡೆಸಿದ್ದಾರೆ.