ಅಮೆರಿಕ ಮಾಜಿ ಅಧ್ಯಕ್ಷ ಟ್ರಂಪ್‌ ಗೆ ಗುಂಡಿನ ದಾಳಿ; ನಿಜಕ್ಕೂ ಆದದ್ದೇನು?

Update: 2024-07-14 10:21 GMT

ಅಮೆರಿಕಾ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಶನಿವಾರ (ಜುಲೈ 13) ಸಂಜೆ 6:02 ಕ್ಕೆ ಪೆನ್ಸಿಲ್ವೇನಿಯಾ ಫೇರ್‌ಗ್ರೌಂಡ್ಸ್‌ನಲ್ಲಿ ನಡೆದ "ಗಾಡ್ ಬ್ಲೆಸ್ ದಿ ಯುಎಸ್ಎ" ಎಂಬ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಅವರು ವೇದಿಕೆ ಮೇಲೆ ಪ್ರವೇಶಿಸುತ್ತಿದ್ದಂತೆ ಹರ್ಷೋದ್ಗಾರದ ಜನಸಮೂಹದತ್ತ ಕೈ ಬೀಸಿದರು ಮತ್ತು ಸುಡುವ ಬಿಸಿಯ ಬೇಸಿಗೆಯ ಸೂರ್ಯನ ಕೆಳಗೆ ತಮ್ಮ ಎಂದಿನ ಅಧ್ಯಕ್ಷೀಯ ಚುನಾವಣಾ ಭಾಷಣ ಪ್ರಾರಂಭಿಸಿದರು.

ಕೆಲವು ನಿಮಿಷಗಳ ನಂತರ, ಟ್ರಂಪ್ ಅವರು ಅಧ್ಯಕ್ಷ ಜೋ ಬೈಡನ್ ವಿರುದ್ಧ ವಾಗ್ದಾಳಿ ಆರಂಭಿಸಿ ಬೈಡನ್‌ ಆಡಳಿತದಲ್ಲಿ ಅಕ್ರಮ ಗಡಿ ದಾಟುವಿಕೆಗಳ ಹೆಚ್ಚಳವನ್ನು ತೋರಿಸುವ ಚಾರ್ಟ್‌ನ್ನು ಪ್ರದರ್ಶಿಸಿದರು. "ಆ ಚಾರ್ಟ್ ಒಂದೆರಡು ತಿಂಗಳ ಹಳೆಯದು" ಎಂದು ಟ್ರಂಪ್ ಪ್ರೇಕ್ಷಕರಿಗೆ ಹೇಳಿದರು. ಆ ಸಂದರಭದಲ್ಲೇ  ಶಂಕಿತ ಬಂದೂಕುಧಾರಿ ಏಕಾಏಕಿ ಗುಂಡಿನ ದಾಳಿ ನಡೆಸಿದರನು.

ಡಾರ್ಕ್ ಸೂಟ್  ಸೀಕ್ರೆಟ್ ಸರ್ವಿಸ್ ಏಜೆಂಟ್‌ಗಳು ಬಂದೂಕುದಾರಿಯತ್ತ ಧಾವಿಸುತ್ತಿದ್ದಂತೆ ಟ್ರಂಪ್ ಕಿವಿಯನ್ನು ಹಿಡಿದುಕೊಂಡರು. ಏಜೆಂಟರು "ಕೆಳಗೆ ಇಳಿಯಿರಿ" ಎಂದು ಕೂಗುತ್ತಿದ್ದಂತೆ ಟ್ರಂಪ್‌ ವೇದಿಕೆಯ ಕೆಳಗೆ ಕುಳಿತರು. ಆದರೂ ಅವರ ಬಲ ಕಿವಿಯ ಭಾಗಕ್ಕೆ ಗುಂಡೇಟು ತಗುಲಿತು. ವೇದಿಕೆಯ ಮುಂದಿದ್ದ ಜನರು ಸ್ವಲ್ಪ ಹೊತ್ತು ಕಿರುಚಾಡಿದ ಬಳಿಕ ಎಲ್ಲವೂ ಶಾಂತವಾಯಿತು.

ಕೆಲವು ಕ್ಷಣಗಳ ನಂತರ, ಅಮೆರಿಕದ ಸೀಕ್ರೆಟ್‌ ಸರ್ವಿಸ್‌ ಏಜೆಂಟ್‌ಗಳು ಟ್ರಂಪ್ ಅವರನ್ನು ಸುತ್ತುವರೆದು ರಕ್ಷಣೆ ಮಾಡಿದರು. ನಂತರ ವೇದಿಕೆಯ ಹೊರಗೆ ಅವರನ್ನು ಕರೆತರಲು ಪ್ರಯತ್ನಿಸಿದರು ಆಗ ಟ್ರಂಪ್ ಕಿವಿಯಿಂದ ರಕ್ತ ಹರಿಯಿತು. "ನೋಡಿ ನೋಡಿ, ಇಲ್ಲಿ.." ಎಂದು ಟ್ರಂಪ್ ಹೇಳಿದರು. ಜನಸಮೂಹವು  ಅವರತ್ತ ಪ್ರೋತ್ಸಾಹಕಾರಿ ಘೋಷಣೆ ಕೂಗುತ್ತಿದ್ದಂತೆ ಟ್ರಂಪ್‌ ತಮ್ಮ ಮುಷ್ಟಿಯನ್ನು ಮೇಲೆತ್ತಿ ಜನರನ್ನು ಮತ್ತಷ್ಟು ಹುರುದುಂಬಿಸಿದರು. ಏಜೆಂಟರು (ರಕ್ಷಕರು) ಅವರನ್ನು ಮೆಟ್ಟಿಲುಗಳ ಕೆಳಗೆ ಕರೆದುಕೊಂಡು ಬಂದು ಕಪ್ಪು SUV ಕಾರ್‌ನೊಳಗೆ ಹತ್ತಿಸುವಾಗಲೂ ಟ್ರಂಪ್‌ ಮುಷ್ಟಿ ಮೇಲೆತ್ತಿ ʼಹೋರಾಟʼ ಎಂದು ಕೂಗಿದರು.

ಈ ವೇಳೆ ಶೂಟರ್ ಮತ್ತು ಒಬ್ಬ ಸಭಾ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ವ್ಯಕ್ತಿಯೊಬ್ಬ ಸಾವನ್ನಪ್ಪಿದ್ದಾರೆ ಎಂದು ಸ್ಥಳೀಯ ಜಿಲ್ಲಾಧಿಕಾರಿ ಹೇಳಿದ್ದಾರೆ. ದಾಳಿಯ ಸ್ವಲ್ಪ ಸಮಯದ ನಂತರ ಬಿಡುಗಡೆಯಾದ ಹೇಳಿಕೆಯಲ್ಲಿ, ʻʻಇದು ಒಂದು ಸ್ಪಷ್ಟವಾದ ಹತ್ಯೆಯ ಪ್ರಯತ್ನʼʼ ಎಂದು ಅಧಿಕಾರಿಗಳು ಹೇಳಿದರು. 

 ಗುಂಡು ಹಾರಿಸಿದ ಆಕ್ರಮಣಕಾರ ಪೆನ್ಸಿಲ್ವೇನಿಯಾದ 20 ವರ್ಷದ ವ್ಯಕ್ತಿ ಎಂದು ಕಾನೂನು ಜಾರಿ ಅಧಿಕಾರಿಗಳು ಅಸೋಸಿಯೇಟೆಡ್ ಪ್ರೆಸ್‌ಗೆ ತಿಳಿಸಿದ್ದಾರೆ. ಅವರು ಇನ್ನೂ ಸಾರ್ವಜನಿಕವಾಗಿ ಆತನ ವಿವರಗಳನ್ನು ಬಿಡುಗಡೆ ಮಾಡದೇ, ಅನಾಮಧೇಯತೆಯ ವ್ಯಕ್ತಿ ಎಂದು ಮಾತನಾಡಿದರು.

ಶನಿವಾರ ಮಧ್ಯಾಹ್ನದ ಮುಂಚೆಯೇ ಬಟ್ಲರ್‌ ನಗರದ ಈ  ಕಾರ್ಯಕ್ರಮದಲ್ಲಿ ಭಾಗಿಯಾಗುವ ಸಾಕಷ್ಟು ಜನರು ಒಟ್ಟುಗೂಡಿದ್ದರಿಂದ  ಘಟನೆಯ ಬಗ್ಗೆ  ಯಾವುದೇ ಸುಳಿವು ಇರಲಿಲ್ಲ.

ಬಟ್ಲರ್ ನಗರವು 13,000 ಜನಸಂಕ್ಯೆಯನ್ನು ಹೊಂದಿದ್ದು,, ಪಶ್ಚಿಮ ಪೆನ್ಸಿಲ್ವೇನಿಯಾದ ಪಿಟ್ಸ್‌ಬರ್ಗ್‌ನ ಉತ್ತರಕ್ಕೆ 33 ಮೈಲುಗಳಷ್ಟು ದೂರದಲ್ಲಿದೆ,  ಇದು 2016 ರಲ್ಲಿ ಟ್ರಂಪ್ ಅನ್ನು ಅಧ್ಯಕ್ಷರನ್ನಾಗಿ ಮಾಡಲು ಸಹಾಯ ಮಾಡಿದ ಗ್ರಾಮೀಣ ರಸ್ಟ್ ಬೆಲ್ಟ್ ಪ್ರದೇಶವಾಗಿದೆ. ಟ್ರಂಪ್ ಬಟ್ಲರ್ ಕೌಂಟಿಯನ್ನು ಶೇಕಡಾ 32 ಮತಗಳಿಂದ ಗೆದ್ದಿದ್ದರು.

ತಾಪಮಾನವು 90 ಡಿಗ್ರಿ ಫ್ಯಾರನ್‌ಹೀಟ್‌ಗೆ ಏರುತ್ತಿದ್ದಂತೆ ಮೈದಾನದ ಹಸಿರು ಹುಲ್ಲು ನಿಧಾನವಾಗಿ ಕೆಂಪು ಬಣ್ಣಕ್ಕೆ ತಿರುಗಿತ್ತು. ಅಲ್ಲಿದ್ದ ಕೆಲವ  ರಾಜಕಾರಣಿಗಳು ಸಾಂದರ್ಭಿಕವಾಗಿ ಮಾತನಾಡುತ್ತಾ ಕಾರ್ಯಕ್ರಮ ನಡೆಸುವವರು ತಾಳ್ಮೆಯಿಂದ ಗಂಟೆಗಳ ಕಾಲ ಕಾಯುತ್ತಿದ್ದರು, ಸಾಂದರ್ಭಿಕವಾಗಿ “ಟ್ರಂಪ್! ಟ್ರಂಪ್! ಟ್ರಂಪ್!” ಎಂದು ಕೂಗುತ್ತಿದ್ದರು. ಘಟನೆ ನಡೆದಾಗ ವೇದಿಕೆಯ ಮೇಲೆ ನೇತಾಡುತ್ತಿದ್ದ ಭಾರೀ ಗಾತ್ರದ ಅಮೆರಿಕನ್‌ ರಾಷ್ಟ್ರ ಧ್ವಜವು ನೆಲಕ್ಕೆ ಬೀಳುವಂತಾಗಿತ್ತು, ಹಾಗಾಗಿ ಅದನ್ನು ಬಿಚ್ಚಿಡಲಾಯಿತು.

ಆವರಣದ ಹೊರಗೆ, ಇಂತಹ ಕಾರ್ಯಕ್ರಮಗಳಲ್ಲಿ ಸಾಮಾನ್ಯವಾಗಿರುವಂತೆ ಆಹಾರ, ಪಾನೀಯಗಳು ಮತ್ತು ಸಾಮಾನುಗಳನ್ನು ಮಾರಾಟ ಮಾಡುವ ಸ್ಟ್ಯಾಂಡ್‌ಗಳು ಇದ್ದವು. ವೇದಿಕೆಯ ಹಿಂದೆ, ಸೊಂಟದ ಎತ್ತರದ ಲೋಹದ ತಡೆಗಳಿಂದ ಮೈದಾನ ವೇದಿಕೆ  ಬೇರ್ಪಟ್ಟಿದೆ,  ದಿ ವಿಲೇಜ್ ಪೀಪಲ್‌ ತಂಡದ "YMCA" ಗಾಯನದೊಂದಿಗೆ ಪ್ರಾರಂಭವಾದ ಬಳಿಕ  ಟ್ರಂಪ್ ಅವರ  ಕಾರ್ಯಕ್ರಮ ಆರಂಭವಾಗಿತ್ತು.   ನಂತರ  ತನ್ನ ಎಂದಿನ ಕೆಂಪು ಟೋಪಿ, ಕಪ್ಪು ಸೂಟ್, ಕುತ್ತಿಗೆಯಲ್ಲಿ ಗುಂಡಿ ಬಿಚ್ಚಿದ  ಮತ್ತು ಟೈ ಇಲ್ಲದ  ಶರ್ಟ್‌ ಧರಿಸಿದ್ದ ಟ್ರಂಪ್‌  ವೇದಿಕೆಯತ್ತ ನಡೆದರು.

ಅವರು ಮುಗುಳ್ನಗುತ್ತಾ ಜನಸಮೂಹವನ್ನು   ಹುರಿದುಂಬಿಸುತ್ತಾಚ ಕೈಬೀಸಿದರು.  ಅವರು ಭಾಷಣ ಆರಂಭ ಮಾಡುವ ಮುನ್ನ ಲೀ ಗ್ರೀನ್‌ವುಡ್ ಹಾಡು ಹಾಡಲಾಯಿತು. "ಇದು ದೊಡ್ಡ ಗುಂಪು" ಎಂದು ಟ್ರಂಪ್ ಹೇಳಿದರು. "ಇದು ದೊಡ್ಡ, ದೊಡ್ಡ ಸುಂದರ ಗುಂಪು." ಪೆನ್ಸಿಲ್ವೇನಿಯಾದ ಡೆಮಾಕ್ರಟಿಕ್ ಸೆನ್. ಬಾಬ್ ಕೇಸಿ ವಿರುದ್ಧ ಸ್ಪರ್ಧಿಸುತ್ತಿರುವ ರಿಪಬ್ಲಿಕನ್ ಡೇವಿಡ್ ಮೆಕ್‌ಕಾರ್ಮಿಕ್ ಹೆಸರನ್ನು ಹೇಳಿ ಅವರನ್ನು ವೇದಿಕೆಗೆ ಕರೆತರುವುದಾಗಿ ಭರವಸೆ ನೀಡಿದ ನಂತರ, ಟ್ರಂಪ್ ಅವರು ಬೈಡನ್‌ ವಿರುದ್ಧ ಟೀಕೆಗಳನ್ನು ಆರಂಭಿಸಿದರು. "ನಮ್ಮ ದೇಶದಲ್ಲಿ ಲಕ್ಷಾಂತರ ಜನರಿದ್ದಾರೆ, ಅವರು ಇಲ್ಲಿ ಇರಬಾರದು" ಎಂದು ಅವರು ಹೇಳಿದರು. "ಅಪಾಯಕಾರಿ ಜನರು" ಇದ್ದಾರೆ ಇಲ್ಲಿ ಎಂದು ಹೇಳುತ್ತಾ, ಅವರು ಗಡಿ ದಾಟುವಿಕೆಗಳ ಕುರಿತಾದ ಸಿದ್ಧಪಡಿಸಿದ  ಚಾರ್ಟ್‌ಗಳನ್ನು  ಪ್ರದರ್ಶಿಸಿದರು.

ಪ್ರಚಾರ ಸಭೆಯಲ್ಲಿ ಅವ್ಯವಸ್ಥೆ

ಆಗ ಗುಂಡಿನ ದಾಳಿ ಆರಂಭವಾಯಿತು.  ಆನಂತರ  ಗಾಯಗೊಂಡ ಟ್ರಂಪ್ ವೇದಿಕೆಯಿಂದ ಹೊರನಡೆದರು,  ಅಮೆರಿಕನ್‌ ಸೀಕ್ರೆಟ್‌ ಸರ್ವಿಸಸ್‌ನ  ಕೌಂಟರ್-ಅಸಾಲ್ಟ್ ತಂಡದ ರೈಫಲ್‌ಗಳನ್ನು ಹೊತ್ತ ಕಪ್ಪು ಸಮವಸ್ತ್ರದ ಸಿಬಂದಿ ವೇದಿಕೆಯ ಮೇಲೆ ಬಂದರು.ಗುಂಡೇಟಿನ ಶಬ್ದಗಳ ವೇಳೆ ಅಲ್ಲಿದ್ದ  ಜನರ ಗುಂಪು ಆ ವೇದಿಕೆಯಲ್ಲೇ ಬಗ್ಗಿ ಕುಳಿತುಕೊಂಡಿತು. 

ಬೀವರ್ ಕೌಂಟಿಯ ರಿಪಬ್ಲಿಕನ್ ಪಾರ್ಟಿಯ ಉಪಾಧ್ಯಕ್ಷ ರಿಕೊ ಎಲ್ಮೋರ್ ಅವರು ವಿಶೇಷ ಅತಿಥಿಗಳಿಗಾಗಿ ಒಂದು ಕಡೆ ಟ್ರಂಪ್‌ಗೆ ಎದುರಾಗಿ ಕುಳಿತಿದ್ದರು, ಆಗ ಅವರು ಅದು ಪಟಾಕಿಯಂತೆ ಶಬ್ದ ಕೇಳಿಸಿತು ಎಂದರು. "ಆಗ ಎಲ್ಲರೂ ಇಲ್ಲ, ಇದು ನಿಜವಾದ ಗುಂಡಿನ ದಾಳಿ" ಎಂದು ಹೇಳಿದ್ದನ್ನು ಅವರು  ಸಂದರ್ಶನವೊಂದರಲ್ಲಿ ವಿವರಿಸಿದ್ದಾರೆ. ಎಲ್ಮೋರ್ ಅವರ ಎಡಭಾಗದಿಂದ ಯಾರೋ ವೈದ್ಯರಿಗೆ ಕರೆ ಮಾಡುತ್ತಿದ್ದರು.. ಎಲ್ಮೋರ್ ಒಬ್ಬ ವೈದ್ಯನಲ್ಲದಿದ್ದರೂ, ಅವರು ಮಿಲಿಟರಿಯಲ್ಲಿದ್ದ ಸಮಯದಿಂದ ಪ್ರಥಮ ಚಿಕಿತ್ಸೆ ಬಗ್ಗೆ ಅವರಿಗೆ  ಗೊತ್ತಿತ್ತು. ಅವರು ಬ್ಯಾರಿಕೇಡ್ ಅನ್ನು ಹಾರಿದರು, ಆದರೆ ಅವರು  ಬಂದೂಕುಧಾರಿ ವ್ಯಕ್ತಿಯನ್ನು ತಲುಪಿದಾಗ,  ಆತನ ತಲೆಗೆ ರಕ್ಷಣಾಧಿಕಾರಿಗಳ ಗುಂಡು ತಗುಲಿ ಸಾವನ್ನಪ್ಪಿದ ದೃಶ್ಯ ಅವರ ಎದುರಲ್ಲೇ ನಡೆಯಿತು.

ಟ್ರಂಪ್ ಅವರನ್ನು ಅಲ್ಲಿಂದ ಕಳುಹಿಸಲಾಯಿತು, ಆಗ ಅಲ್ಲಿ ರ್ಯಾಲಿಯಲ್ಲಿ ಭಾಗವಹಿಸಿದ್ದ ಜನರೂ ಕಡಿಮೆ ಇದ್ದರು. ಪೊಲೀಸರು ಮತ್ತು ನಂತರ ರಹಸ್ಯ ಸೇವಾ ತಂಡಗಳು ಒಂದು ಗಂಟೆಯ ನಂತರ ವಿಶಾಲವಾದ ಜಾಗವನ್ನು ಅಪರಾಧ ಘಟನಾ  ಸ್ಥಳವೆಂದು ಘೋಷಿಸಿದರು.  ಕೆಲವು ಗಂಟೆಗಳ ಬಳಿಕ ಇದು ಖಾಲಿ ಪ್ಲಾಸ್ಟಿಕ್ ನೀರಿನ ಬಾಟಲಿಗಳು ಮತ್ತು ಒಮ್ಮೆ ಚೀಸ್ ಫ್ರೈಗಳ ರಟ್ಟಿನ ಪೊಟ್ಟಣಗಳು ಬಿದ್ದಿದ್ದ ಪ್ರದೇಶವಾಗಿ ಮಾರ್ಪಟ್ಟಿತು. ಈ ನಡುವೆ ಅಮೆರಿಕದ ಪ್ರತಿಷ್ಠಿತ ತನಿಖಾ ಏಜೆನ್ಸಿ ಎಫ್‌ಬಿಐ (ಫೆಡರಲ್‌ ಬ್ಯೂರೋ ಆಫ್‌ ಇನವೆಸ್ಟಿಗೇಷನ್‌) ಸಿಬ್ಬಂದಿ ಪೆನ್ಸಿಲ್ವೇನಿಯಾದ ಬಟ್ಲರ್‌ನಲ್ಲಿ ಘಟನಾ ಸ್ಥಳದಲ್ಲಿದ್ದಾರೆ ಮತ್ತು ತನಿಖೆಯಲ್ಲಿ ಯುಎಸ್ ರಹಸ್ಯ ಸೇವೆಯೊಂದಿಗೆ ಜಂಟಿಯಾಗಿ ಕೆಲಸ ಮಾಡುತ್ತಾರೆ ಎಂದು ಅಮೆರಿಕ ಹೇಳಿದೆ.

Tags:    

Similar News