ಬ್ರೆಜಿಲ್‌ನಲ್ಲಿ ಪ್ರಧಾನಿ ಮೋದಿಗೆ ಭಾರತೀಯ ಸಮುದಾಯದಿಂದ 'ಸಿಂದೂರ ಸ್ವಾಗತ'

ಪಾಕಿಸ್ತಾನ ಮೂಲದ ಭಯೋತ್ಪಾದಕ ಗುಂಪುಗಳ ವಿರುದ್ಧದ ಈ ಧೈರ್ಯಶಾಲಿ ಕಾರ್ಯಾಚರಣೆಯನ್ನು ಚಿತ್ರಿಸಿದ ಈ ಪ್ರದರ್ಶನವು ಪ್ರಧಾನಿಗೆ ವರ್ಣರಂಜಿತ ಸ್ವಾಗತ ನೀಡಿತು.;

Update: 2025-07-06 07:21 GMT

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಭಾನುವಾರ ಬ್ರೆಜಿಲ್‌ಗೆ ತೆರಳಿದ್ದು, , ಭಾರತದ ಭಯೋತ್ಪಾದನಾ ವಿರೋಧಿ ಕಾರ್ಯಾಚರಣೆ 'ಆಪರೇಷನ್ ಸಿಂಧೂರ್' ಗೆ ಸಂಬಂಧಿಸಿದ ಪ್ರಬಲ ಸಾಂಸ್ಕೃತಿಕ ಪ್ರದರ್ಶನದೊಂದಿಗೆ ಭಾರತೀಯ ಮೂಲದ ನಿವಾಸಿಗಳು ಅದ್ಧೂರಿ ಸ್ವಾಗತ ಕೋರಿದ್ದಾರೆ.

ಪಾಕಿಸ್ತಾನ ಮೂಲದ ಭಯೋತ್ಪಾದಕ ಗುಂಪುಗಳ ವಿರುದ್ಧದ ಈ ಧೈರ್ಯಶಾಲಿ ಕಾರ್ಯಾಚರಣೆಯನ್ನು ಚಿತ್ರಿಸಿದ ಈ ಪ್ರದರ್ಶನವು ಪ್ರಧಾನಿಗೆ ವರ್ಣರಂಜಿತ ಸ್ವಾಗತ ನೀಡಿತು. ಈ ಪ್ರದರ್ಶನ ತಮ್ಮನ್ನು ಅತೀವವಾಗಿ ಸೆಳೆದಿದೆ ಎಂದು ಪ್ರಧಾನಿ ಮೋದಿ ತಿಳಿಸಿದ್ದಾರೆ.

ಬ್ರೆಜಿಲಿಯನ್ ಭಾರತೀಯ ನಿವಾಸಿಗಳು ಕಲಾವಿದರು ಪ್ರದರ್ಶಿಸಿದ ಈ ಕಾರ್ಯಕ್ರಮದಲ್ಲಿ ಭಾರತೀಯ ಭದ್ರತಾ ಪಡೆಗಳು ಭಯೋತ್ಪಾದಕ ಬೆದರಿಕೆಗಳನ್ನು ಹಿಮ್ಮೆಟ್ಟಿಸುವ ದೃಶ್ಯಗಳು ಸೇರಿದ್ದವು, ನಂತರ ದೇಶಭಕ್ತಿಯ ಸಂಗೀತ ಗೌರವ ಸಲ್ಲಿಸಲಾಯಿತು.

ಐದು ರಾಷ್ಟ್ರಗಳ ಪ್ರವಾಸದ ನಾಲ್ಕನೇ ಹಂತದಲ್ಲಿರುವ ಪ್ರಧಾನಿ ಮೋದಿ, ಭಾನುವಾರ ಮುಂಜಾನೆ ಗಲೇಯೊ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿ, ಸಾಂಪ್ರದಾಯಿಕ ಸ್ವಾಗತವನ್ನು ಸ್ವೀಕರಿಸಿದರು. ಪ್ರಧಾನಿ ಮೋದಿ ಅವರು 17ನೇ ಬ್ರಿಕ್ಸ್ ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ರಿಯೊ ಡಿ ಜನೈರೊದಲ್ಲಿ ಬೀಡುಬಿಟ್ಟಿದ್ದಾರೆ.

ಪ್ರಧಾನಿ ಹೋಟೆಲ್‌ಗೆ ಆಗಮಿಸುತ್ತಿದ್ದಂತೆ, ಭಾರತೀಯ ಸಮುದಾಯದ ನೂರಾರು ಸದಸ್ಯರು ಅವರನ್ನು ಸ್ವಾಗತಿಸಲು ಜಮಾಯಿಸಿದ್ದರು. ಈ ವೇಳೆ "ಭಾರತ್ ಮಾತಾ ಕಿ ಜೈ" ಎಂದು ಘೋಷಣೆಗಳನ್ನು ಕೂಗುತ್ತಾ ತ್ರಿವರ್ಣ ಧ್ವಜವನ್ನು ಹಾರಿಸಿದರು.

ಬ್ರೆಜಿಲ್‌ನಲ್ಲಿ ತಮ್ಮ ನಾಲ್ಕು ದಿನಗಳ ವಾಸ್ತವ್ಯದ ಅವಧಿಯಲ್ಲಿ, ಪ್ರಧಾನಿ ಮೋದಿ ಜುಲೈ 6-7 ರಂದು ಬ್ರಿಕ್ಸ್ ಶೃಂಗಸಭೆಯಲ್ಲಿ ಭಾಗವಹಿಸಲಿದ್ದಾರೆ. ನಂತರ ಬ್ರೆಸಿಲಿಯಾಗೆ ತೆರಳಿ ಅಧಿಕೃತ ಭೇಟಿ ನೀಡಲಿದ್ದಾರೆ. ಸುಮಾರು ಆರು ದಶಕಗಳಲ್ಲಿ ಭಾರತದ ಪ್ರಧಾನಿಯೊಬ್ಬರು ಬ್ರೆಸಿಲಿಯಾಗೆ ಭೇಟಿ ನೀಡುತ್ತಿರುವುದು ಇದೇ ಮೊದಲು.

ಬ್ರೆಜಿಲ್, ರಷ್ಯಾ, ಭಾರತ, ಚೀನಾ ಮತ್ತು ದಕ್ಷಿಣ ಆಫ್ರಿಕಾವನ್ನು ಒಳಗೊಂಡಿರುವ ಬ್ರಿಕ್ಸ್ ಗುಂಪು ಇತ್ತೀಚೆಗೆ ಐದು ಹೊಸ ಸದಸ್ಯರನ್ನು (ಈಜಿಪ್ಟ್, ಇಥಿಯೋಪಿಯಾ, ಇರಾನ್, ಸೌದಿ ಅರೇಬಿಯಾ ಮತ್ತು ಯುಎಇ) ಸೇರಿಸಿಕೊಂಡಿದೆ. ಪ್ರಧಾನಿ ಮೋದಿ ಅವರು ಬ್ರೆಜಿಲ್‌ಗೆ ಆಗಮಿಸಿರುವ ಸಂದರ್ಭದಲ್ಲಿ ಈ ವಿಸ್ತರಣೆಯು ಮಹತ್ವ ಪಡೆದಿದೆ.

ಮೋದಿಯವರ ಕಾರ್ಯಕ್ರಮಗಳಲ್ಲಿ ಬ್ರಿಕ್ಸ್ ನಾಯಕರೊಂದಿಗೆ ಉನ್ನತ ಮಟ್ಟದ ದ್ವಿಪಕ್ಷೀಯ ಸಭೆಗಳು ಸೇರಿವೆ. ಬ್ರೆಜಿಲ್ ಭೇಟಿಗೆ ಮೊದಲು ಘಾನಾ, ಟ್ರಿನಿಡಾಡ್ ಮತ್ತು ಟೊಬಾಗೊ, ಹಾಗೂ ಅರ್ಜೆಂಟೀನಾ ದೇಶಗಳಿಗೆ ಭೇಟಿ ನೀಡಿದ್ದರು. ಅವರ ರಾಜತಾಂತ್ರಿಕ ಪ್ರವಾಸದ ಅಂತಿಮ ನಿಲುಗಡೆ ನಮೀಬಿಯಾ ಆಗಲಿದೆ.

Tags:    

Similar News