ಪಾಕಿಸ್ತಾನ: ಬಲೂಚಿಸ್ತಾನದಲ್ಲಿ ಬಂದೂಕುದಾರಿಗಳಿಂದ 23 ಪ್ರಯಾಣಿಕರ ಹತ್ಯೆ

ಬಂದೂಕುದಾರಿಗಳು ಪ್ರಯಾಣಿಕರನ್ನು ಬಸ್‌ಗಳಿಂದ ಕೆಳಗಿಳಿಸಿ, ಗುರುತುಗಳನ್ನು ಪರಿಶೀಲಿಸಿದರು; ಆನಂತರ, ಪಂಜಾಬ್ ಪ್ರಾಂತ್ಯದವರನ್ನು ಗುಂಡಿಕ್ಕಿ ಕೊಲ್ಲಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.

Update: 2024-08-26 07:35 GMT

ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಬಲೂಚಿಸ್ತಾನದಲ್ಲಿ ಬಂದೂಕುಧಾರಿಗಳು ಕನಿಷ್ಠ 23 ಜನರನ್ನು ಬಸ್‌ಗಳಿಂದ ಕೆಳಗಿಳಿಸಿ, ಅವರ ಗುರುತುಗಳನ್ನು ಪರಿಶೀಲಿಸಿದ ನಂತರ ಗುಂಡಿಕ್ಕಿ ಕೊಂದಿದ್ದಾರೆ ಎಂದು ವರದಿಯಾಗಿದೆ. ಬಲೂಚಿಸ್ತಾನದ ಮುಸಾಖೇಲ್ ಪ್ರಾಂತ್ಯದ ರಾರಶಮ್‌ ಜಿಲ್ಲೆಯಲ್ಲಿ ಸೋಮವಾರ (ಆಗಸ್ಟ್ 26) ಘಟನೆ ನಡೆದಿದೆ. 

ಸಹಾಯಕ ಕಮಿಷನರ್ ಮುಸಖೈಲ್ ನಜೀಬ್ ಕಾಕರ್ ಅವರ ಪ್ರಕಾರ, ಶಸ್ತ್ರಧಾರಿ ಪುರುಷರು ರಾರಶಮ್ ಜಿಲ್ಲೆಯ ಅಂತರ್ ಪ್ರಾಂತೀಯ ಹೆದ್ದಾರಿಯಲ್ಲಿ ಬಸ್‌ಗಳನ್ನು ತಡೆದು, ಪ್ರಯಾಣಿಕರನ್ನು ಕೆಳಗಿಳಿಸಿ ಹತ್ಯೆಗೈದರು ಎಂದು ಡಾನ್ ಪತ್ರಿಕೆ ವರದಿ ಮಾಡಿದೆ. ಮೃತರರು ಪಂಜಾಬ್ ಪ್ರಾಂತ್ಯಕ್ಕೆ ಸೇರಿದವರು ಎನ್ನಲಾಗಿದೆ. ಇದುವರೆಗೆ ಯಾವುದೇ ಗುಂಪು ದಾಳಿಯ ಹೊಣೆ ಹೊತ್ತುಕೊಂಡಿಲ್ಲ. ವಾಹನಗಳಿಗೆ ಬೆಂಕಿ: ಶಸ್ತ್ರಸಜ್ಜಿತ ವ್ಯಕ್ತಿಗಳು 10 ವಾಹನಗಳಿಗೆ ಬೆಂಕಿ ಹಚ್ಚಿದರು. ಪೊಲೀಸರು ಮೃತದೇಹಗಳನ್ನು ಆಸ್ಪತ್ರೆಗೆ ರವಾನಿಸಿದ್ದಾರೆ ಎಂದು ಹೇಳಿದರು.

ಬಲೂಚಿಸ್ತಾನ ಮುಖ್ಯಮಂತ್ರಿ ಸರ್ಫರಾಜ್ ಬುಗ್ತಿ ಭಯೋತ್ಪಾದನೆ ಘಟನೆಯನ್ನು ತೀವ್ರವಾಗಿ ಖಂಡಿಸಿದ್ದಾರೆ. ʻಹೇಡಿತನದʼ ಕೃತ್ಯದಿಂದ ಮಡಿದವರ ಕುಟುಂಬಗಳಿಗೆ ಸಂತಾಪ ವ್ಯಕ್ತಪಡಿಸಿದ್ದಾರೆ. ʻಭಯೋತ್ಪಾದಕರು ಮತ್ತು ಅವರ ಸಹಾಯಕರು ತಮ್ಮ ಅಂತ್ಯ ಕಾಣುತ್ತಾರೆ. ಬಲೂಚಿಸ್ತಾನ್ ಸರ್ಕಾರ ಭಯೋತ್ಪಾದಕರ ಬೆನ್ನು ಹತ್ತಲಿದೆ ಎಂದು ಹೇಳಿದರು. 

ಪಂಜಾಬ್‌ನ ಜನರನ್ನು ಗುರಿಯಾಗಿಸಿಕೊಂಡು ಕಳೆದ ಏಪ್ರಿಲ್‌ನಲ್ಲಿ ಇಂಥದ್ದೇ ಹತ್ಯಾಕಾಂಡ ನಡೆದಿತ್ತು. ಒಂಬತ್ತು ಪ್ರಯಾಣಿಕರನ್ನು ನೋಶ್ಕಿ ಬಳಿ ಬಸ್‌ನಿಂದ ಇಳಿಸಿ, ಗುರುತಿನ ಚೀಟಿಗಳನ್ನು ಪರಿಶೀಲಿಸಿದ ನಂತರ ಗುಂಡಿಕ್ಕಿ ಕೊಂದಿದ್ದರು. ಕಳೆದ ಅಕ್ಟೋಬರ್‌ನಲ್ಲಿ ಬಲೂಚಿಸ್ತಾನದ ಕೆಚ್ ಜಿಲ್ಲೆಯ ಟರ್ಬತ್‌ನಲ್ಲಿ ಪಂಜಾಬಿನಿಂದ ಬಂದಿದ್ದ ಆರು ಕಾರ್ಮಿಕರನ್ನು ಕೊಲ್ಲಲಾಗಿತ್ತು. ಪೊಲೀಸರ ಪ್ರಕಾರ, ಬಲಿಪಶುಗಳು ದಕ್ಷಿಣ ಪಂಜಾಬಿನ ವಿವಿಧ ಪ್ರದೇಶಗಳಿಗೆ ಸೇರಿದವರಾಗಿದ್ದು, ಜನಾಂಗೀಯ ಹಿನ್ನೆಲೆಯಿಂದ ಆಯ್ಕೆ ಮಾಡಲಾಗಿದೆ ಎಂದು ಹೇಳಿದರು. 

2015 ರಲ್ಲಿ ಟರ್ಬತ್ ಬಳಿಯ ಕಾರ್ಮಿಕರ ಶಿಬಿರದ ಮೇಲೆ ಮುಂಜಾನೆ ದಾಳಿ ನಡೆಸಿದ ಬಂದೂಕುಧಾರಿಗಳು 20 ಕಟ್ಟಡ ಕಾರ್ಮಿಕರನ್ನು ಕೊಂದು, ಮೂವರನ್ನು ಗಾಯಗೊಳಿಸಿದ್ದರು. 

Tags:    

Similar News