Modi-Trump Meet : ಮೋದಿ-ಟ್ರಂಪ್ ಭೇಟಿ; ರಾಣಾ ಹಸ್ತಾಂತರ, F-35 ಜೆಟ್‌ಗಳು ಮತ್ತಿತರ ಒಪ್ಪಂದಗಳ ವಿವರ ಇಲ್ಲಿದೆ

Modi-Trump Meet : ಅಮೆರಿಕಾ ಭಾರತಕ್ಕೆ F-35 ಫೈಟರ್ ಜೆಟ್‌ಗಳನ್ನು ಒದಗಿಸಲು ತೀರ್ಮಾನ ಮಾಡಿದೆ. ಮಿಲಿಟರಿ ಪೂರೈಕೆ ಕೊಟ್ಯಂತರ ಡಾಲರ್‌ಗಳಿಗೆ ಹೆಚ್ಚಳ ಆಗಲಿದೆ.;

Update: 2025-02-14 07:09 GMT
ಫೋಟೋಗಳಿಗೆ ಫೋಸ್​ ನೀಡಿದ ನರೇಂದ್ರ ಮೋದಿ ಮತ್ತು ಟ್ರಂಪ್.​

ಅಮೆರಿಕ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಗುರುವಾರ (ಫೆಬ್ರವರಿ 14) ಅಮೆರಿಕದ ಅಧ್ಯಕ್ಷ ಡೊನಾಲ್ಡ್​ ಟ್ರಂಪ್ ಅವರನ್ನು ಭೇಟಿಯಾಗಿ ಹಲವು ವಿಚಾರಗಳ ಬಗ್ಗೆ ಚರ್ಚೆ ನಡೆಸಿದ್ದಾರೆ. ಈ ವೇಳೆ ಭಾರತ ಮತ್ತು ಅಮೆರಿಕ ನಡುವಿನ ಕೆಲವು ಒಪ್ಪಂದಗಳಿಗೆ ಸಹಿ ಹಾಕಲಾಯಿತು. ರಕ್ಷಣಾ ಮತ್ತು ಇಂಧನ ಸಹಕಾರ ಒಪ್ಪಂದಗಳು, ಅಕ್ರಮ ವಲಸಿಗರ ಕರೆಸಿಕೊಳ್ಳುವುದು. 26/11 ದಾಳಿಯ ಸಂಚುಕೋರ ತಹಾವ್ವುರ್ ರಾಣಾನ ಹಸ್ತಾಂತರ ಸೇರಿದಂತೆ ಹಲವು ಪ್ರಮುಖ ತೀರ್ಮಾನಗಳಿಗೆ ಅಂಕಿತ ಹಾಕಲಾಯಿತು.

F-35 ಸ್ಟೆಲ್ತ್ ಫೈಟರ್‌ಗಳ ಪೂರೈಕೆ

ಮಿಲಿಟರಿ ಸಾಮಗ್ರಿಗಳ ಮಾರಾಟ ಹೆಚ್ಚಿಸುವ ಯೋಜನೆಯಡಿ, ಅಮೆರಿಕಾ ಭಾರತಕ್ಕೆ F-35 ಸ್ಟೆಲ್ತ್ ಫೈಟರ್ ಜೆಟ್‌ಗಳನ್ನು ಒದಗಿಸುವುದಾಗಿ ಭರವಸೆ ಕೊಟ್ಟಿದೆ. ಇದು ಅತ್ಯಾಧುನಿಕ ಯುದ್ಧವಿಮಾನವಾಗಿದ್ದು ಭಾರತದ ವಾಯುಪಡೆಗೆ ಇದರಿಂದ ಬಲ ಬರಲಿದೆ. ನೆರೆಯ ಚೀನಾ ಆರನೇ ಪೀಳಿಗೆಯ ಯುದ್ಧ ವಿಮಾನಗಳನ್ನು ಹೊಂದಿರುವ ಕಾರಣ ಭಾರತದ ಪಾಲಿಗೆ ಇದು ಅತ್ಯಂತ ಭರವಸೆಯ ಒಪ್ಪಂದ ಎನಿಸಕೊಳ್ಳಲಿದೆ.   "ಈ ವರ್ಷದಿಂದ, ನಾವು ಮಿಲಿಟರಿ ಪೂರೈಕೆಯನ್ನು ಕೊಟ್ಯಂತರ ಡಾಲರ್‌ಗಳಿಗೆ ಹೆಚ್ಚಿಸುತ್ತಿದ್ದೇವೆ. ಭಾರತಕ್ಕೆ F-35 ಸ್ಟೆಲ್ತ್ ಫೈಟರ್‌ಗಳನ್ನು ಒದಗಿಸಲು ಮುಂದಾಗಿದ್ದೇವೆ ಎಂದು ಟ್ರಂಪ್ ಹೇಳಿದ್ದಾರೆ. 




''ಭಾರತಕ್ಕೆ ಅಮೆರಿಕಾದಿಂದ ಇಂಧನ ಪೂರೈಕೆ ಹೆಚ್ಚಿಸಲು ಟ್ರಂಪ್ ಒಪ್ಪಿಕೊಂಡಿ್ದ್ದಾರೆ.. "ಭಾರತದ ಇಂಧನ ಸುರಕ್ಷತೆಗಾಗಿ ನಮ್ಮ ನಡುವಿನ  ವ್ಯಾಪಾರ ಬಲಪಡಿಸುತ್ತೇವೆ. ಇಂಧನ ಮೂಲಸೌಕರ್ಯದಲ್ಲಿ ಹೂಡಿಕೆ ಹೆಚ್ಚಾಗಲಿದೆ. ಪರಮಾಣು ಇಂಧನದ ಕ್ಷೇತ್ರದಲ್ಲಿ ಸಹಯೋಗ ವಿಸ್ತರಿಸುತ್ತೇವೆ." ಎಂದು  ಮೋದಿ ಹೇಳಿದ್ದಾರೆ. 

ರಾಣಾ ಹಸ್ತಾಂತರ

26/11 ಮುಂಬೈ ದಾಳಿ ಸಂಚುಕೋರ ತಹಾವ್ವುರ್ ರಾಣಾ ಹಸ್ತಾಂತರ ಮಾಡುವುದಾಗಿ ಟ್ರಂಪ್ ಘೋಷಿಸಿದರು, " ಒಬ್ಬ ಅತ್ಯಂತ ಅಪಾಯಕಾರಿ ವ್ಯಕ್ತಿಯನ್ನು ಭಾರತಕ್ಕೆ ಹಸ್ತಾಂತರಿಸಲು ನನ್ನ ಆಡಳಿತ ಅನುಮೋದಿಸಿದೆ. 26/11 ಮುಂಬೈ ಉಗ್ರ ದಾಳಿಯ ಪ್ರಮುಖ ಆರೋಪಿ ರಾಣಾ ಈಗ ಭಾರತಕ್ಕೆ ಹಸ್ತಾಂತರಗೊಳ್ಳಲಿದ್ದಾನೆ." ಎಂದು ಟ್ರಂಪ್ ಹೇಳಿದರು. ರಹ್ಮಾನ್​ ಅಮೆರಿಕದಲ್ಲಿ ಹಲವು ವರ್ಷಗಳಿಂದ ಅಡಗಿದ್ದ. ಆತನಿಗೆ ಯಾವುದೇ ರಕ್ಷಣೆ ಒದಗಿಸಬೇಕಾಗಿಲ್ಲ ಮತ್ತು ಭಾರತಕ್ಕೆ ಹಸ್ತಾಂತರ ಮಾಡಬಹುದು ಎಂಬುದಾಗಿ ಅಮೆರಿಕದ ಸುಪ್ರೀಂ ಕಳೆದ ತಿಂಗಳು ಆದೇಶ ಹೊರಡಿಸಿತ್ತು. ಅದಕ್ಕೆ ಪೂರಕವಾಗಿ ಟ್ರಂಪ್​ ಆಡಳಿತ ಈಗ ಮೋದಿ ಭೇಟಿಯ ವೇಳೆ ಹಸ್ತಾಂತರ ಒಪ್ಪಂದ ಮಾಡಿಕೊಂಡಿದೆ.



ಈ ಕುರಿತು ಮೋದಿ ಪ್ರತಿಕ್ರಿಯಿಸಿ , "ಭಾರತ ಮತ್ತು ಅಮೆರಿಕಾ ಉಗ್ರರ ವಿರುದ್ಧ ಕಠಿಣ ಹೋರಾಟ ನಡೆಸುತ್ತಿದೆ. ಉಗ್ರರನ್ನು ಬೆಂಬಲಿಸುವ ಮೂಲಗಳನ್ನು ನಾಶಪಡಿಸಲು ಉಭಯ ದೇಶಗಳು ಗಟ್ಟಿ ಕ್ರಮ ತೆಗೆದುಕೊಳ್ಳುತ್ತಿವೆ." ಎಂದು ಹೇಳಿದರು.

ಹೊಸ ತೆರಿಗೆ ನೀತಿ

ಟ್ರಂಪ್ ಅಮೆರಿಕಾದ ಹೊಸ ತೆರಿಗೆ ನೀತಿ ಪ್ರಕಟಿಸಿದ್ದಾರೆ. ಭಾರತ- ಅಮೆರಿಕಾ ವ್ಯಾಪಾರ ಸಂಬಂಧವನ್ನು ಬಲಪಡಿಸಲು ಹೊಸ ವ್ಯವಹಾರ ಒಪ್ಪಂದ ಮಾಡಲಾಗಿದೆ "ಭಾರತಕ್ಕಾಗಿ ಅಮೆರಿಕವು ಇತಿಹಾಸದ ಅತ್ಯುತ್ತಮ ವ್ಯಾಪಾರ ಒಪ್ಪಂದಗಳನ್ನು ಸಿದ್ಧಪಡಿಸಿದೆ.  ಭಾರತ- ಮಧ್ಯಪ್ರಾಚ್ಯ-ಯುರೋಪ್ ಆರ್ಥಿಕ ಮಾರ್ಗ ನಿರ್ಮಿಸಲು ಭಾರತ ಮತ್ತು ಅಮೆರಿಕಾ ಸಮ್ಮತಿಸಿವೆ." ಎಂದು ಟ್ರಂಪ್​ ಹೇಳಿದ್ದಾರೆ. 

ಅಕ್ರಮ ವಲಸಿಗರು ವಾಪಸ್​

ಅಕ್ರಮ ವಲಸಿಗರನ್ನು ಅಮೆರಿಕದಿಂದ ಹಿಂದಕ್ಕೆ ಕಳುಹಿಸುವ ಕುರಿತು ಮಾತನಾಡಿದ ಮೋದಿ, "ಇತರ ದೇಶಗಳಲ್ಲಿ ಅಕ್ರಮವಾಗಿ ವಾಸಿಸುತ್ತಿರುವವರಿಗೆ ಯಾವುದೇ ಕಾನೂನಿನ ನೆರವು ಇರುವುದಿಲ್ಲ. ಅಕ್ರಮ ವಲಸಿಗರಲ್ಲಿ ಭಾರತೀಯರು ಇದ್ದರೆ ಹಾಗೂ ಅವರನ್ನು ನಾವು ಖಚಿತಪಡಿಸಿದರೆ, ಎಲ್ಲರನ್ನೂ ಮರಳಿ ಕರೆಸುತ್ತೇವೆ," ಎಂದು ಹೇಳಿದರು. 



" ಕೇವಲ ವಲಸಿಗರನ್ನು ವಾಪಸ್​ ಕರೆಸುವುದು ಮಾತ್ರ ಭಾರತದ ಉದ್ದೇಶವಲ್ಲ. ಜತೆಗೆ ಮಾನವ ಕಳ್ಳಸಾಗಣೆ ವ್ಯವಸ್ಥೆಯನ್ನೂ ಸಂಪೂರ್ಣವಾಗಿ ನಾಶಪಡಿಸುವ ಗುರಿಯನ್ನೂ ಹೊಂದಲಾಗಿದೆ " ಎಂದು ಮೋದಿ ಹೇಳಿದ್ದಾರೆ.

ಅಮೆರಿಕದಲ್ಲಿರುವ ಭಾರತೀಯ ಅಕ್ರಮವಾಸಿಗಳು, ಮೋಸದ ಟ್ರಾವೆಲ್​ ಏಜೆನ್ಸಿಗಳ ಮೂಲಕ ಅಲ್ಲಿಗೆ ತಲುಪಿದ್ದಾರೆ. ಹೀಗಾಗಿ ಮಾನವ ಕಳ್ಳಸಾಗಣೆ ಮಾಡಿದವರನ್ನು ಪತ್ತೆ ಹಚ್ಚಿ ಶಿಕ್ಷಿಸುತ್ತೇವೆ,'' ಎಂದು ಮೋದಿ ಭರವಸೆ ನೀಡಿದ್ದಾರೆ.    

ಶಾಂತಿಯ ಪರ

ರಷ್ಯಾ-ಉಕ್ರೇನ್  ವಿಚಾರದಲ್ಲಿ ಟ್ರಂಪ್​ ನಿಲುವಿನ ಬಗ್ಗೆ ಮಾತನಾಡಿದ ಮೋದಿ, "ಭಾರತ ಯಾವತ್ತಿಗೂ ಶಾಂತಿ ಸ್ಥಾಪನೆಗಾಗಿ ಕೆಲಸ ಮಾಡಿದೆ. ರಷ್ಯಾ ಮತ್ತು ಉಕ್ರೇನ್ ನಡುವಿನ ಸಮಾಲೋಚನೆಗೆ ಭಾರತ ಸಾಕಷ್ಟು ಪ್ರಯತ್ನಿಸಿದೆ. ಪರ್ಯಾಯ ಮಾತುಕತೆಯಲ್ಲೇ ಪರಿಹಾರ ಕಂಡುಕೊಳ್ಳುವುದು ಅನಿವಾರ್ಯ. ಈ ನಿಟ್ಟಿನಲ್ಲಿ ಟ್ರಂಪ್ ಪ್ರಯತ್ನಗಳನ್ನು ನಾನು ಬೆಂಬಲಿಸುತ್ತೇನೆ." ಎಂದು ಹೇಳಿದರು.

ಮಗಾ- ಮಿಗಾ ಸಂಬಂಧ

"ಅಮೆರಿಕದ ಜನರು MAGA - Make America Great Again ಅನ್ನು ಚೆನ್ನಾಗಿ ಬಲ್ಲರು. ಭಾರತೀಯರು 2047ರ ವಿಕಸಿತ ಭಾರತವನ್ನು ಗುರಿಯಾಗಿಟ್ಟುಕೊಂಡಿದ್ದಾರೆ. ಇದನ್ನು 'MIGA - Make India Great Again' ಎಂದು ಕರೆಯಬಹುದು. MAGA + MIGA ಸೇರಿ ಅದು 'ಮೆಗಾ ಅಭಿವೃದ್ಧಿಯಾಗಲಿದೆ,'' ಎಂದು ಹೇಳಿದರು.

Tags:    

Similar News