ಭಾರತದ ಮೇಲಿನ ಅಮೆರಿಕದ ಸುಂಕ: ಚೀನಾ ಗರಂ; 'ಇದು ಸಂಪೂರ್ಣ ದಬ್ಬಾಳಿಕೆ' ಎಂದು ಕಿಡಿ

ಗುರುವಾರ, ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ ಕ್ಸು ಫೀಹಾಂಗ್, "ಒಬ್ಬ ದಾಳಿಕೋರನಿಗೆ ಒಂದು ಇಂಚು ಜಾಗ ಕೊಟ್ಟರೆ, ಅವನು ಒಂದು ಮೈಲಿ ಆಕ್ರಮಿಸುತ್ತಾನೆ" ಎಂಬ ಗಾದೆ ಮಾತನ್ನು ಉಲ್ಲೇಖಿಸಿ ಟ್ರಂಪ್ ಅವರ ನಡೆಯನ್ನು ಖಂಡಿಸಿದರು.;

Update: 2025-08-08 07:10 GMT

ಗುರುವಾರ, ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ ಕ್ಸು ಫೀಹಾಂಗ್, "ಒಬ್ಬ ದಾಳಿಕೋರನಿಗೆ ಒಂದು ಇಂಚು ಜಾಗ ಕೊಟ್ಟರೆ, ಅವನು ಒಂದು ಮೈಲಿ ಆಕ್ರಮಿಸುತ್ತಾನೆ" ಎಂಬ ಗಾದೆ ಮಾತನ್ನು ಉಲ್ಲೇಖಿಸಿ ಟ್ರಂಪ್ ಅವರ ನಡೆಯನ್ನು ಖಂಡಿಸಿದರು.

ಭಾರತದ ಮೇಲೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ವಿಧಿಸಿರುವ ಭಾರೀ ಸುಂಕದ ಕುರಿತು ಚೀನಾ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ರಷ್ಯಾದಿಂದ ತೈಲ ಆಮದು ಮಾಡಿಕೊಳ್ಳುವುದನ್ನು ಮುಂದುವರಿಸಿದ ಕಾರಣಕ್ಕೆ ಭಾರತದ ಸರಕುಗಳ ಮೇಲೆ ಟ್ರಂಪ್ ಅವರು ಶೇ 50ರಷ್ಟು ಸುಂಕ ವಿಧಿಸಿದ್ದು, ಇದನ್ನು ಚೀನಾ ರಾಯಭಾರಿ ಕ್ಸು ಫೀಹಾಂಗ್ "ದಬ್ಬಾಳಿಕೆ" ಎಂದು ಕರೆದಿದ್ದಾರೆ.

ಗುರುವಾರ, ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ ಕ್ಸು ಫೀಹಾಂಗ್, "ಒಬ್ಬ ದಾಳಿಕೋರನಿಗೆ ಒಂದು ಇಂಚು ಜಾಗ ಕೊಟ್ಟರೆ, ಅವನು ಒಂದು ಮೈಲಿ ಆಕ್ರಮಿಸುತ್ತಾನೆ" ಎಂಬ ಗಾದೆ ಮಾತನ್ನು ಉಲ್ಲೇಖಿಸಿ ಟ್ರಂಪ್ ಅವರ ನಡೆಯನ್ನು ಖಂಡಿಸಿದರು. "ಇತರೆ ದೇಶಗಳನ್ನು ನಿಯಂತ್ರಿಸಲು ಸುಂಕಗಳನ್ನು ಬಳಸಿಕೊಳ್ಳುವುದು ವಿಶ್ವಸಂಸ್ಥೆಯ ನಿಯಮಗಳ ಉಲ್ಲಂಘನೆಯಾಗಿದೆ. ಇದು ವಿಶ್ವ ವ್ಯಾಪಾರ ಸಂಘಟನೆ (WTO) ನಿಯಮಗಳನ್ನು ದುರ್ಬಲಗೊಳಿಸುತ್ತದೆ ಮತ್ತು ಇಂತಹ ಕ್ರಮಗಳು ಸ್ವೀಕಾರಾರ್ಹವಲ್ಲ," ಎಂದು ಅವರು ತಿಳಿಸಿದರು.

ಬುಧವಾರ, ಟ್ರಂಪ್ ಅವರು ಭಾರತದ ಸರಕುಗಳ ಮೇಲೆ ಹೆಚ್ಚುವರಿ ಶೇ 25 ಸುಂಕ ವಿಧಿಸಿದ್ದರು, ಇದರಿಂದಾಗಿ ಒಟ್ಟು ಸುಂಕ ಶೇ 50ಕ್ಕೆ ಏರಿಕೆಯಾಗಿದೆ. ಇದಾದ ಬೆನ್ನಲ್ಲೇ ಚೀನಾದಿಂದ ಈ ಪ್ರತಿಕ್ರಿಯೆ ಬಂದಿದೆ.

ಟ್ರಂಪ್ ಅವರ ಹೇಳಿಕೆಯ ಪ್ರಕಾರ, ಚೀನಾ ಸೇರಿದಂತೆ ರಷ್ಯಾದ ತೈಲ ಆಮದುದಾರರ ಮೇಲೆ ಇದೇ ರೀತಿಯ ಸುಂಕಗಳನ್ನು ವಿಧಿಸುವ ಸಾಧ್ಯತೆ ಇದೆ. "ಬಹುಶಃ ಚೀನಾ ಸೇರಿದಂತೆ ಇನ್ನೂ ಕೆಲವು ದೇಶಗಳ ಮೇಲೆ ಕ್ರಮ ಕೈಗೊಳ್ಳಬಹುದು," ಎಂದು ಟ್ರಂಪ್ ಶ್ವೇತಭವನದಲ್ಲಿ ತಿಳಿಸಿದ್ದರು. ಪ್ರಸ್ತುತ, ಭಾರತ, ಚೀನಾ ಮತ್ತು ಟರ್ಕಿ ರಷ್ಯಾದ ತೈಲವನ್ನು ಅತಿ ಹೆಚ್ಚು ಆಮದು ಮಾಡಿಕೊಳ್ಳುವ ರಾಷ್ಟ್ರಗಳಾಗಿವೆ.

ಹಿಂದೆ ಅಮೆರಿಕ ಮತ್ತು ಚೀನಾ ನಡುವೆ ತೀವ್ರ ಸುಂಕ ಸಮರ ನಡೆದಿತ್ತು. ಅಮೆರಿಕವು ಚೀನಾ ಸರಕುಗಳ ಮೇಲೆ ಶೇ 145 ರಷ್ಟು ಮತ್ತು ಚೀನಾ ಪ್ರತಿಯಾಗಿ ಶೇ 125 ರಷ್ಟು ಸುಂಕ ವಿಧಿಸಿತ್ತು. ಈ ಉದ್ವಿಗ್ನತೆಯ ಹೊರತಾಗಿಯೂ, ಈ ವರ್ಷಾಂತ್ಯದಲ್ಲಿ ಹೊಸ ವ್ಯಾಪಾರ ಒಪ್ಪಂದಕ್ಕಾಗಿ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರನ್ನು ಭೇಟಿಯಾಗುವುದಾಗಿ ಟ್ರಂಪ್ ಹೇಳಿದ್ದಾರೆ. 

Tags:    

Similar News