ಗ್ಯಾಂಗ್‌ಸ್ಟರ್ ಲಾರೆನ್ಸ್ ಬಿಷ್ಣೋಯ್ ಸಹೋದರ ಅನ್ಮೋಲ್ ಅಮೆರಿಕದಲ್ಲಿ ಬಂಧನ

2022ರಲ್ಲಿ ಪಂಜಾಬಿ ಗಾಯಕ ಸಿಧು ಮೂಸೆವಾಲಾ ಅವರ ಹತ್ಯೆ ಮತ್ತು ಈ ವರ್ಷದ ಜೂನ್‌ನಲ್ಲಿ ನಟ ಸಲ್ಮಾನ್ ಖಾನ್ ಅವರ ಮುಂಬೈ ಮನೆಯ ಹೊರಗೆ ನಡೆದ ಗುಂಡಿನ ದಾಳಿ ಸೇರಿದಂತೆ ಅನೇಕ ಹೈಪ್ರೊಫೈಲ್‌ ಪ್ರಕರಣಗಳಿಗೆ ಸಂಬಂಧಿಸಿದಂತೆ ಅನ್ಮೋಲ್ ಭಾರತೀಯ ಪೊಲೀಸರಿಗೆ ಬೇಕಾಗಿದ್ದಾನೆ .;

Update: 2024-11-18 16:13 GMT
Gangster Lawrence Bishnoi's younger brother Anmol arrested in US: Reports

ಕುಖ್ಯಾತ ದರೋಡೆಕೋರ ಲಾರೆನ್ಸ್ ಬಿಷ್ಣೋಯ್ ಅವರ ಕಿರಿಯ ಸಹೋದರ ಅನ್ಮೋಲ್ ಬಿಷ್ಣೋಯ್‌ನನ್ನು ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿ ಬಂಧಿಸಲಾಗಿದೆ ಎಂದು ಸೋಮವಾರ (ನವೆಂಬರ್ 18) ಮಾಧ್ಯಮಗಳ ವರದಿಗಳು ತಿಳಿಸಿವೆ.

2022ರಲ್ಲಿ ಪಂಜಾಬಿ ಗಾಯಕ ಸಿಧು ಮೂಸೆವಾಲಾ ಹತ್ಯೆ ಮತ್ತು ಈ ವರ್ಷದ ಜೂನ್‌ನಲ್ಲಿ ನಟ ಸಲ್ಮಾನ್ ಖಾನ್ ಅವರ ಮುಂಬೈ ಮನೆಯ ಹೊರಗೆ ನಡೆದ ಗುಂಡಿನ ದಾಳಿ ಸೇರಿದಂತೆ ಅನೇಕ ಹೈಪ್ರೊಫೈಲ್‌ ಪ್ರಕರಣಗಳಿಗೆ ಸಂಬಂಧಿಸಿದಂತೆ ಅನ್ಮೋಲ್ ಭಾರತೀಯ ಪೊಲೀಸರಿಗೆ ಬೇಕಾಗಿದ್ದಾನೆ.



ಪ್ರಸ್ತುತ 18 ಕ್ರಿಮಿನಲ್ ಪ್ರಕರಣಗಳಲ್ಲಿ ಆರೋಪಗಳನ್ನು ಎದುರಿಸುತ್ತಿರುವ ಈತನನ್ನು ಸೆರೆಹಿಡಿದವರಿಗೆ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) 10 ಲಕ್ಷ ರೂ.ಗಳ ಬಹುಮಾನವನ್ನು ಘೋಷಿಸಿದೆ.

ಎನ್‌ಸಿಪಿ (ಅಜಿತ್ ಪವಾರ್) ನಾಯಕ ಬಾಬಾ ಸಿದ್ದಿಕಿ ಅವರ ಹತ್ಯೆಯಲ್ಲಿ ಆತ ಭಾಗಿಯಾಗಿದ್ದಾರೆ ಎಂದು ನಂಬಲಾಗಿದೆ. ಪೊಲೀಸ್ ತನಿಖೆಯು ಅವನು ದಾಳಿಗೆ ವ್ಯವಸ್ಥೆ ಮತ್ತು ಆರ್ಥಿಕ ಬೆಂಬಲ ಒದಗಿಸಿದ್ದಾನೆ ಎಂದು ಸೂಚಿಸುತ್ತದೆ.

ಬಾಡಿಗೆ ಬಂದೂಕುಧಾರಿಗಳೊಂದಿಗೆ ಅನ್ಮೋಲ್ ಸಿದ್ದೀಕ್ ಮತ್ತು ಅವರ ಮಗ ಜೀಶಾನ್ ಅವರ ಛಾಯಾಚಿತ್ರಗಳನ್ನು ಸ್ನ್ಯಾಪ್‌ಚಾಟ್‌ ಮೂಲಕ ಹಂಚಿಕೊಂಡಿದ್ದ ಎಂದು ವಿವರಗಳು ಸೂಚಿಸಿವೆ. ಕೊಲೆಗೆ ಒಂದು ತಿಂಗಳ ಮೊದಲು ಶೂಟರ್ ಗಳು ಈ ಪ್ರದೇಶದ ಪರಿಶೀಲನೆ ನಡೆಸಿದ್ದಾರೆ ಎಂದು ವರದಿಯಾಗಿದೆ.

ಬಾಬಾ ಸಿದ್ದಿಕಿ ಹತ್ಯೆಯಲ್ಲಿ ಭಾಗಿಯಾಗಿರುವ ಶೂಟರ್‌ಗಳು ಅಪರಾಧಕ್ಕೆ ಮೊದಲು ಅನ್ಮೋಲ್ ಬಿಷ್ಣೋಯ್ ಜತೆಗೆ ಸಂಪರ್ಕದಲ್ಲಿದ್ದ ಎಂದು ಮುಂಬೈ ಅಪರಾಧ ವಿಭಾಗ ಈ ಹಿಂದೆ ಹೇಳಿತ್ತು. ಅಧಿಕಾರಿಗಳ ಪ್ರಕಾರ, ಮೂವರು ಶಂಕಿತ ಶೂಟರ್‌ಗಳು ಅನ್ಮೋಲ್ ಸ್ನ್ಯಾಪ್ಚಾಟ್ ಮೂಲಕ ಸಂದೇಶಗಳನ್ನು ವಿನಿಮಯ ಮಾಡಿಕೊಂಡರು, ಅವರು ಕೆನಡಾ ಮತ್ತು ಅಮೆರಿಕದಲ್ಲಿದ್ದ.  

Tags:    

Similar News