ಉತ್ತರ ಬಾಂಗ್ಲಾದೇಶದಲ್ಲಿ ಹಿಂದೂಗಳ ಆಸ್ತಿಗೆ ಹಾನಿ: 170 ಮಂದಿ ವಿರುದ್ಧ ಕೇಸ್​, ನಾಲ್ವರ ಬಂಧನ

ಡಿಸೆಂಬರ್ 3 ರಂದು ಸುನಮ್​​ಗಂಜ್​ ಜಿಲ್ಲೆಯ ನಿವಾಸಿ ಆಕಾಶ್ ದಾಸ್ ಅವರ ಫೇಸ್ಬುಕ್ ಪೋಸ್ಟ್ ಜಿಲ್ಲೆಯಲ್ಲಿ ಉದ್ವಿಗ್ನತೆ ಹುಟ್ಟುಹಾಕಿತ್ತು. ಅವರು ಪೋಸ್ಟ್ ಅನ್ನು ಅಳಿಸಿದರೂ, ಸ್ಕ್ರೀನ್​ಶಾಟ್ಗಳು ವ್ಯಾಪಕವಾಗಿ ಹರಿದಾಡಿದ್ದವು.;

Update: 2024-12-14 14:30 GMT
ಬಾಂಗ್ಲಾದೇಶದಲ್ಲಿ ಹಿಂದೂಗಳ ಪ್ರತಿಭಟನೆ

ಉತ್ತರ ಬಾಂಗ್ಲಾದೇಶದ ಸುನಾಮ್​ಗಂಜ್​ ಜಿಲ್ಲೆಯಲ್ಲಿ ಹಿಂದೂ ಸಮುದಾಯದ ಮನೆಗಳು ಮತ್ತು ಅಂಗಡಿಗಳು ಮತ್ತು ಸ್ಥಳೀಯ ಲೋಕನಾಥ ದೇವಾಲಯವನ್ನು ಧ್ವಂಸಗೊಳಿಸಿದ ಮತ್ತು ಹಾನಿಗೊಳಿಸಿದ ನಾಲ್ವರನ್ನು ಪೊಲೀಸರು ಸಂಸ್ಥೆಗಳು ಶನಿವಾರ ಬಂಧಿಸಿದ್ದಾರೆ.

ಪೊಲೀಸರು 150-170 ಜನರ ವಿರುದ್ಧ ಪ್ರಕರಣ ದಾಖಲಿಸಿದ್ದು, ಅವರಲ್ಲಿ 12 ಜನರ ಹೆಸರುಗಳನ್ನು ಉಲ್ಲೇಖಿಸಿದ್ದಾರೆ. ಈ ತಿಂಗಳ ಆರಂಭದಲ್ಲಿ ಸುನಮ್​ಗಂಜ್​ ಜಿಲ್ಲೆಯ ದೋರಾಬಜಾರ್ ಪ್ರದೇಶದಲ್ಲಿ ವಿಧ್ವಂಸಕ ಕೃತ್ಯ ಎಸಗಿದ ಆರೋಪದ ಮೇಲೆ ಅಲಿಮ್ ಹುಸೇನ್ (19), ಸುಲ್ತಾನ್ ಅಹ್ಮದ್ ರಾಜು (20), ಇಮ್ರಾನ್ ಹುಸೇನ್ (31) ಮತ್ತು ಶಹಜಹಾನ್ ಹುಸೇನ್ (20) ಅವರನ್ನು ಬಂಧಿಸಲಾಗಿದೆ ಎಂದು ಮುಖ್ಯ ಸಲಹೆಗಾರರ ಪತ್ರಿಕಾ ವಿಭಾಗದ ಪತ್ರಿಕಾ ಪ್ರಕಟಣೆ ತಿಳಿಸಿದೆ.

ಡಿಸೆಂಬರ್ 3 ರಂದು ಸುನಮ್​​ಗಂಜ್​ ಜಿಲ್ಲೆಯ ನಿವಾಸಿ ಆಕಾಶ್ ದಾಸ್ ಅವರ ಫೇಸ್ಬುಕ್ ಪೋಸ್ಟ್ ಜಿಲ್ಲೆಯಲ್ಲಿ ಉದ್ವಿಗ್ನತೆ ಹುಟ್ಟುಹಾಕಿತ್ತು. ಅವರು ಪೋಸ್ಟ್ ಅನ್ನು ಅಳಿಸಿದರೂ, ಸ್ಕ್ರೀನ್​ಶಾಟ್ಗಳು ವ್ಯಾಪಕವಾಗಿ ಹರಿದಾಡಿದ್ದವು.

ಘಟನೆ ಬಳಿಕ ಪೊಲೀಸರು ತಕ್ಷಣ ದಾಸ್ ಅವರನ್ನು ಬಂಧಿಸಿದ್ದರು. ಆದರೆ, ಅವರ ಸುರಕ್ಷತೆಯ ಬಗ್ಗೆ ಕಳವಳದ ನಡುವೆ ಅವರನ್ನು ಮತ್ತೊಂದು ಠಾಣೆಗೆ ವರ್ಗಾಯಿಸಿದರು. ಅದೇ ದಿನ, ಜನಸಮೂಹವು ಹಿಂದೂ ಸಮುದಾಯದ ಮನೆಗಳು, ಅಂಗಡಿಗಳು ಮತ್ತು ಸ್ಥಳೀಯ ಲೋಕನಾಥ ದೇವಾಲಯವನ್ನು ಧ್ವಂಸಗೊಳಿಸಲಾಗಿತ್ತು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಜಿಲ್ಲಾಧಿಕಾರಿ ಮತ್ತು ಸೇನಾ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದಿದ್ದರು. ಘಟನೆಯಲ್ಲಿ ಭಾಗಿಯಾಗಿರುವ ಆರೋಪಿಗಳನ್ನು ಪೊಲೀಸರು ಗುರುತಿಸಿದ್ದಾರೆ ಮತ್ತು 150-170 ಜನರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ, ಶನಿವಾರ 12 ಜನರ ಹೆಸರುಗಳನ್ನು ಉಲ್ಲೇಖಿಸಿದ್ದಾರೆ ಎಂದು ಮೂಲಗಳು ತಿಳಿಸಿದೆ.

ಆಗಸ್ಟ್​ನಲ್ಲಿ ಹಿಂದಿನ ಪ್ರಧಾನಿ ಶೇಖ್ ಹಸೀನಾ ಅವರನ್ನು ಪದಚ್ಯುತಗೊಳಿಸಿದ ನಂತರ ಅಲ್ಪಸಂಖ್ಯಾತರ ವಿರುದ್ಧ, ಮುಖ್ಯವಾಗಿ ಹಿಂದೂಗಳ ವಿರುದ್ಧ 88 ಕೋಮು ಹಿಂಸಾಚಾರದ ಘಟನೆಗಳು ನಡೆದಿರುವುದನ್ನು ಬಾಂಗ್ಲಾದೇಶ ಮಂಗಳವಾರ ಒಪ್ಪಿಕೊಂಡಿದೆ. 

Tags:    

Similar News