ಬಾಂಗ್ಲಾದಲ್ಲಿ ಚಿನ್ಮಯ್ ಕೃಷ್ಣ ದಾಸ್ ಸೇರಿ 500ಕ್ಕೂ ಹೆಚ್ಚು ಮಂದಿ ಮೇಲೆ ಕೇಸ್ ದಾಖಲು
ಬಾಂಗ್ಲಾದೇಶದ ಉದ್ಯಮಿ ಮತ್ತು ಹೆಫಾಜತ್-ಇ-ಇಸ್ಲಾಂ ಕಾರ್ಯಕರ್ತ ಎನಾಮುಲ್ ಹಕ್ ಅವರು ಚಟ್ಟೊಗ್ರಾಮ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಮೊಹಮ್ಮದ್ ಅಬು ಬಕರ್ ಸಿದ್ದಿಕಿ ಅವರ ನ್ಯಾಯಾಲಯದಲ್ಲಿ ದೂರು ದಾಖಲಿಸಿದ್ದಾರೆ.;
ಚಟ್ಟೊಗ್ರಾಮದ ನ್ಯಾಯಾಲಯದ ಆವರಣದಲ್ಲಿ ಇಸ್ಕಾನ್ ಸಂತ ಚಿನ್ಮಯ್ ಕೃಷ್ಣ ದಾಸ್ ಅವರ ಅನುಯಾಯಿಗಳು ಮತ್ತು ಪೊಲೀಸರ ನಡುವೆ ನಡೆದ ಘರ್ಷಣೆಗೆ ಸಂಬಂಧಿಸಿದಂತೆ ಭಾನುವಾರ ಪ್ರಕರಣ ದಾಖಲಿಸಲಾಗಿದೆ ಎಂದು ಮಾಧ್ಯಮ ವರದಿಯೊಂದು ತಿಳಿಸಿದೆ.
ದೇಶದ್ರೋಹದ ಆರೋಪದ ಮೇಲೆ ಬಂಧನಕ್ಕೆ ಒಳಗಾಗಿದ್ದ ಸಂತನನ್ನು ಈ ಪ್ರಕರಣದಲ್ಲಿ ಪ್ರಮುಖ ಆರೋಪಿ ಎಂದು ಹೆಸರಿಸಲಾಗಿದೆ. ಜೊತೆಗೆ 164 ವ್ಯಕ್ತಿಗಳು ಮತ್ತು 400 ರಿಂದ 500 ಅಪರಿಚಿತರ ಮೇಲೆ ಕೇಸ್ ದಾಖಲಾಗಿದೆ ಎಂದು ಢಾಕಾ ಟ್ರಿಬ್ಯೂನ್ ಹೇಳಿದೆ.
ಬಾಂಗ್ಲಾದೇಶದ ಉದ್ಯಮಿ ಮತ್ತು ಹೆಫಾಜತ್-ಇ-ಇಸ್ಲಾಂ ಕಾರ್ಯಕರ್ತ ಎನಾಮುಲ್ ಹಕ್ ಅವರು ಚಟ್ಟೊಗ್ರಾಮ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಮೊಹಮ್ಮದ್ ಅಬು ಬಕರ್ ಸಿದ್ದಿಕಿ ಅವರ ನ್ಯಾಯಾಲಯದಲ್ಲಿ ದೂರು ದಾಖಲಿಸಿದ್ದಾರೆ.
ನವೆಂಬರ್ 26ರಂದು ನ್ಯಾಯಾಲಯದಲ್ಲಿ ಭೂ ನೋಂದಣಿ ಕೆಲಸವನ್ನು ಮುಗಿಸಿ ಮನೆಗೆ ಹಿಂದಿರುಗುತ್ತಿದ್ದಾಗ ಚಿನ್ಮಯ್ ಕೃಷ್ಣ ದಾಸ್ ಅವರ ಅನುಯಾಯಿಗಳು ತಮ್ಮ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಹಕ್ ದೂರಿನಲ್ಲಿ ಆರೋಪಿಸಿದ್ದಾರೆ. ತಮ್ಮ ಬಲಗೈ ಮತ್ತು ತಲೆಗೆ ಗಾಯಗಳಾಗಿವೆ ಎಂದು ಉದ್ಯಮಿ ಹೇಳಿದ್ದಾರೆ.
ಸ್ಥಳದಲ್ಲಿದ್ದವರು ಅವರನ್ನು ರಕ್ಷಿಸಿ ಚಿತ್ತಗಾಂಗ್ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಿದ್ದಾರೆ ಎಂದು ಪತ್ರಿಕೆ ತಿಳಿಸಿದೆ. ದಾಳಿಯಿಂದ ದೀರ್ಘಕಾಲದ ಅನಾರೋಗ್ಯಕ್ಕೆ ಒಳಗಾಗಿದ್ದೆ. ಹೀಗಾಗಿ ಪ್ರಕರಣ ದಾಖಲಿಸಲು ವಿಳಂಬವಾಗಿದೆ ಎಂದು ಹಕ್ ಹೇಳಿದರು.
ನವೆಂಬರ್ 26ರಂದು ನಡೆದ ಘಟನೆ
ನವೆಂಬರ್ 26ರಂದು ಚಿನ್ಮಯ್ ಕೃಷ್ಣ ಅವರ ಅನುಯಾಯಿಗಳು ನ್ಯಾಯಾಲಯದ ಆವರಣದಲ್ಲಿ ಹಕ್ ಮೇಲೆ ಹಲ್ಲೆ ನಡೆಸಿದ್ದರು. ಅವರ ಬಲಗೈ ಮುರಿದಿದೆ ಮತ್ತು ಅವರ ತಲೆಗೆ ಗಾಯಗಳಾಗಿವೆ. ಈ ಪ್ರಕರಣದಲ್ಲಿ ಚಿನ್ಮಯ್ ಕೃಷ್ಣ ಪ್ರಮುಖ ಆರೋಪಿಯಾಗಿದ್ದು, 164 ವ್ಯಕ್ತಿಗಳನ್ನು ಹೆಸರಿಸಲಾಗಿದೆ" ಎಂದು ಅವರ ವಕೀಲರು ಹೇಳಿದ್ದಾರೆ.
ಬಾಂಗ್ಲಾದೇಶದ ಸೊಮ್ಮಿಲಿಟೊ ಸನಾತನ ಜಾಗರಣ್ ಜೋಟೆ ವಕ್ತಾರ ಚಿನ್ಮಯ್ ಕೃಷ್ಣ ಅವರ ಬಂಧನಕ್ಕೆ ಸಂಬಂಧಿಸಿದ ಹಲವಾರು ಘರ್ಷಣೆಗಳ ನಂತರ ಈ ಘಟನೆ ನಡೆದಿದೆ.
ನವೆಂಬರ್ 26 ರಂದು ರಂಗಂ ಸಿನೆಮಾ ಹಾಲ್ ಬಳಿ ಗುಂಪೊಂದು ಹಲ್ಲೆ ನಡೆಸಿದೆ ಎಂದು ಆರೋಪಿಸಿ ಉದ್ಯಮಿಯೊಬ್ಬರು ಮಂಗಳವಾರ ಮತ್ತೊಂದು ಪ್ರಕರಣವನ್ನು ದಾಖಲಿಸಿದ್ದಾರೆ.
ದೂರಿನಲ್ಲಿ ರಾಜಕೀಯ ಸಂಘಟನೆಗಳು ಮತ್ತು ಇಸ್ಕಾನ್ ಸದಸ್ಯರು ಸೇರಿದಂತೆ 29 ವ್ಯಕ್ತಿಗಳು ಮತ್ತು 40 ರಿಂದ 50 ಅಪರಿಚಿತ ವ್ಯಕ್ತಿಗಳ ಹೆಸರನ್ನು ಉಲ್ಲೇಖಿಸಲಾಗಿದೆ ಎಂದು ವರದಿ ತಿಳಿಸಿದೆ.
ಭಾರತ- ಬಾಂಗ್ಲಾ ಸಂಬಂಧಕ್ಕೆ ಹುಳಿ
ವಿದ್ಯಾರ್ಥಿ ನೇತೃತ್ವದ ಪ್ರತಿಭಟನೆಯ ನಂತರ ಆಗಸ್ಟ್ 5 ರಂದು ಪದಚ್ಯುತ ಪ್ರಧಾನಿ ಶೇಖ್ ಹಸೀನಾ ದೇಶದಿಂದ ಪಲಾಯನ ಮಾಡಿದ ನಂತರ ಮುಹಮ್ಮದ್ ಯೂನುಸ್ ನೇತೃತ್ವದ ಮಧ್ಯಂತರ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಭಾರತ ಮತ್ತು ಬಾಂಗ್ಲಾದೇಶದ ನಡುವಿನ ಸಂಬಂಧವು ಬಿಗಡಾಯಿಸಿತ್ತು.
ಇತ್ತೀಚಿನ ವಾರಗಳಲ್ಲಿ ಹಿಂದೂಗಳ ಮೇಲಿನ ನಿರಂತರ ದಾಳಿಗಳ ಬಗ್ಗೆ ಮತ್ತು ವಿಶೇಷವಾಗಿ ಇಸ್ಕಾನ್ ಬಾಂಗ್ಲಾದೇಶದ ಮಾಜಿ ಸದಸ್ಯ ಹಿಂದೂ ಸನ್ಯಾಸಿಯ ಬಂಧನದ ನಂತರ ಸಂಬಂಧಗಳು ಮತ್ತಷ್ಟು ಹದಗೆಟ್ಟಿದ್ದವು.
ದೇಶದ್ರೋಹ ಪ್ರಕರಣದಲ್ಲಿ ದಾಸ್ ಅವರನ್ನು ನವೆಂಬರ್ 25ರಂದು ಢಾಕಾದ ಹಜರತ್ ಶಹಜಲಾಲ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಬಂಧಿಸಲಾಗಿತ್ತು. ನವೆಂಬರ್ 26 ರಂದು ಸನ್ಯಾಸಿಗೆ ಜಾಮೀನು ನಿರಾಕರಿಸಿದ ನಂತರ ಚಟ್ಟೋಗ್ರಾ,ಮದಲ್ಲಿ ನಡೆದ ಪ್ರತಿಭಟನೆ ನಡೆದಿತ್ತು.
ಡಿಸೆಂಬರ್ 3 ರಂದು, ಬಾಂಗ್ಲಾದೇಶದ ನ್ಯಾಯಾಲಯವು ಚಿನ್ಮಯ್ ಕೃಷ್ಣ ಅವರ ಪರವಾಗಿ ಯಾವುದೇ ವಕೀಲರು ಹಾಜರಾಗದ ಕಾರಣ ಸರ್ಕಾರದ ಮನವಿಯ ಮೇರೆಗೆ ಅವರ ಜಾಮೀನು ಅರ್ಜಿಯ ವಿಚಾರಣೆಯನ್ನು ಜನವರಿ 2 ಕ್ಕೆ ಮುಂದೂಡಿದೆ.