Justin Trudeau : ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೊ ರಾಜೀನಾಮೆ: ವರದಿ
Justin Trudeau : ಬುಧವಾರ ಕೆನಡಾ ರಾಜಧಾನಿ ಒಟ್ಟಾವೊದಲ್ಲಿ ಲಿಬರಲ್ ಪಕ್ಷದ ಸಮಿತಿ ಸಭೆ ನಡೆಯಲಿದೆ. ಇದಕ್ಕೂ ಮೊದಲೇ ಅವರು ರಾಜೀನಾಮೆ ಸಲ್ಲಿಸಲಿದ್ದಾರೆ ಎಂದು ಹಲವು ಅಂತಾರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.;
ಭಾರತ ಜತೆಗಿನ ಕೆನಡಾ ಸಂಬಂಧ ಹಳಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೊ ಅವರು ತಮ್ಮ ಹುದ್ದೆಗೆ ರಾಜೀನಾಮೆ ನೀಡಲಿದ್ದಾರೆ ಎಂದು ವರದಿಗಳು ತಿಳಿಸಿವೆ. ಇದೇ ವೇಳೆ ಅವರು ತಮ್ಮ ಪಕ್ಷ ಲೀಬರಲ್ ಪಾರ್ಟಿಯ ನಾಯಕ ಸ್ಥಾನಕ್ಕೂ ರಾಜೀನಾಮೆ ಸಲ್ಲಿಸಲಿದ್ದಾರೆ ಎಂದು ತಿಳಿದು ಬಂದಿದೆ.
ಬುಧವಾರ ಕೆನಡಾ ರಾಜಧಾನಿ ಒಟ್ಟಾವೊದಲ್ಲಿ ಲಿಬರಲ್ ಪಕ್ಷದ ಸಮಿತಿ ಸಭೆ ನಡೆಯಲಿದೆ. ಇದಕ್ಕೂ ಮೊದಲೇ ಅವರು ರಾಜೀನಾಮೆ ಸಲ್ಲಿಸಲಿದ್ದಾರೆ ಎಂದು ಹಲವು ಅಂತಾರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.
ಟ್ರುಡೊ ಅವರ ನಾಯಕತ್ವಕ್ಕೆ ಅವರ ಪಕ್ಷದ ಸಂಸದರಿಂದಲೇ ಅಪಸ್ವರ ವ್ಯಕ್ತವಾಗಿತ್ತು. ಒಂದು ತಿಂಗಳಿಂದ ಅದು ಗಂಭೀರವಾಗಿತ್ತು. ಟ್ರುಡೊ ಮೇಲಿನ ಅಸಹಕಾರಕ್ಕೆ ಹಣಕಾಸು ಸಚಿವೆ ಕ್ರಿಸ್ಟಿನಾ ಫ್ರಿಲ್ಯಾಂಡ್ ಅವರು ಸ್ಥಾನ ತ್ಯಜಿಸಿದ್ದರು. ಇದರಿಂದ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಿತ್ತು.
ಖಲಿಸ್ತಾನ್ ಉಗ್ರರ ಪರವಾಗಿ ಮಾತನಾಡುವ ಮೂಲಕ ಟ್ರುಡೋಸ್ ಭಾರತದ ಕೆಂಗಣ್ಣಿಗೂ ಗುರಿಯಾಗಿದ್ದರು. ಎರಡೂ ದೇಶಗಳ ಸಂಬಂಧ ಹಾಳಾಗಲು ಇದುವೆ ಪ್ರಮುಖ ಕಾರಣವಾಗಿತ್ತು. ಕೆನಾಡ ಹೌಸ್ ಆಫ್ ಕಾಮನ್ಸ್‌ನಲ್ಲಿ ಲಿಬರಲ್ ಪಕ್ಷದ 153 ಸಂಸದರಿದ್ದಾರೆ. ಅವರಲ್ಲಿ 20 ಕ್ಕೂ ಹೆಚ್ಚು ಸಂಸದರು ಟ್ರುಡೊ ವಿರುದ್ಧ ಧ್ವನಿ ಎತ್ತಿದ್ದಾರೆ. ಈ ಎಲ್ಲ ಬೆಳವಣಿಗೆಯಿಂದ ಸಂಭವನೀಯ ಮುಜುಗರ ತಪ್ಪಿಸಿಕೊಳ್ಳಲು ಟ್ರುಡೋ ಈ ನಿರ್ಧಾರ ತೆಗೆದುಕೊಂಡಿದ್ದಾರೆ.
ಟ್ರುಡೊ ರಾಜೀನಾಮೆ ನೀಡಿದರೆ ಕೆನಡಾದಲ್ಲಿ ಅವಧಿಗೆ ಮುನ್ನವೇ ಚುನಾವಣೆ ನಡೆಯುವ ಸಾಧ್ಯತೆಗಳಿವೆ. ನಿಗದಿತ ವೇಳಾಪಟ್ಟಿಯಂತೆ ಸಾರ್ವತ್ರಿಕ ಚುನಾವಣೆ ಅಕ್ಟೋಬರ್‌ನಲ್ಲಿ ನಡೆಯಬೇಕು. ಆದರೆ ತಕ್ಷಣದಲ್ಲೇ ಚುನಾವಣೆ ನಡೆಯುವ ಸಾಧ್ಯತೆಗಳಿವೆ.