ದೀಪಾವಳಿ, ಬಂಡಿ ಚೋರ್ ದಿವಸ್ ಆಚರಿಸಿದ ಆಸ್ಟ್ರೇಲಿಯಾ ಪ್ರಧಾನಿ ಆಲ್ಬನೀಸ್
"ಬಂಡಿ ಚೋರ್ ದಿವಸ್ ಶುಭಾಶಯಗಳು! ಇಂದು ಗುರುದ್ವಾರ ಸಾಹಿಬ್ ಗ್ಲೆನ್ವುಡ್‌ನಲ್ಲಿ ಹಬ್ಬ ಆಚರಿಸಿಕೊಂಡೆ, ಹೊಸದಾಗಿ ನಿರ್ಮಿಸಲಾದ ಅಡುಗೆಮನೆಯನ್ನೂ ಉದ್ಥಾಟಿಸಿರುವುದು ಪವಿತ್ರ ಅನುಭವʼʼ ಎಂದು ಅಲ್ಬನೀಸ್ ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ.
ಕ್ಯಾನ್ಬೆರಾ: ದೀಪಾವಳಿ ಮತ್ತು ಬಂಡಿ ಚೋರ್ ದಿವಸ್ ಹಬ್ಬಗಳ ಹಿನ್ನೆಲೆಯಲ್ಲಿ ಆಸ್ಟ್ರೇಲಿಯಾ ಪ್ರಧಾನಿ ಆಂಥೋನಿ ಅಲ್ಬನಿಸ್ ಶುಕ್ರವಾರ ಹಿಂದೂ ದೇವಾಲಯ ಮತ್ತು ಸಿಖ್ಖರ ಪವಿತ್ರ ಸ್ಥಾನ ಗುರುದ್ವಾರಕ್ಕೆ ಭೇಟಿ ನೀಡಿದರು.
61 ವರ್ಷದ ಆಸ್ಟ್ರೇಲಿಯಾದ ಪ್ರಧಾನಿ ಕಿತ್ತಳೆ ಬಣ್ಣದ ಪೇಟ ಧರಿಸಿ ಸಿಡ್ನಿಯ ಉಪನಗರದಲ್ಲಿರುವ ಗ್ಲೆನ್ವುಡ್‌ನಲ್ಲಿರುವ ಗುರುದ್ವಾರಕ್ಕೆ ಭೇಟಿ ನೀಡಿದ ಫೋಟೋಗಳನ್ನು ಎಕ್ಸ್‌ನಲ್ಲಿ ಹಂಚಿಕೊಂಡಿದ್ದಾರೆ. ಅಲ್ಬನೀಸ್ ಗುರುದ್ವಾರದಲ್ಲಿ ತೆರೆಯಲಾದ ಅಡುಗೆಮನೆಯನ್ನುಸಹ ಉದ್ಘಾಟಿಸಿದರು.
"ಬಂಡಿ ಚೋರ್ ದಿವಸ್ ಶುಭಾಶಯಗಳು! ಇಂದು ಗುರುದ್ವಾರ ಸಾಹಿಬ್ ಗ್ಲೆನ್ವುಡ್‌ನಲ್ಲಿ ಹಬ್ಬ ಆಚರಿಸಿಕೊಂಡೆ, ಹೊಸದಾಗಿ ನಿರ್ಮಿಸಲಾದ ಅಡುಗೆಮನೆಯನ್ನೂ ಉದ್ಥಾಟಿಸಿರುವುದು ಪವಿತ್ರವಾದ ಅನುಭವ. ಪ್ರತಿ ವಾರ ಸಾವಿರಾರು ಜನರಿಗೆ ಇಲ್ಲಿ ಸೇವೆ ನೀಡಲಾಗುತ್ತದೆ,ʼʼ ಎಂದು ಅಲ್ಬನೀಸ್ ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ.
ಆಸ್ಟ್ರೇಲಿಯಾದ ಪ್ರಧಾನಿ ಅಲ್ಲಿನ ಭಕ್ತ ಸಮುದಾಯದೊಂದಿಗೆ ಸೆಲ್ಫಿಗೆ ಪೋಸ್ ನೀಡಿದರು. ಅದೇ ರೀತಿ ಉತ್ಸಾಹಿಗಳೊಂದಿಗೆ ಫೋಟೋಗಳು ತೆಗಿಸಿಕೊಂಡರು.
"ದೀಪಾವಳಿ ಕತ್ತಲೆಯ ಮೇಲೆ ಬೆಳಕಿನ ವಿಜಯವನ್ನು ಆಚರಿಸುತ್ತದೆ. ಇಂದು ಸಿಡ್ನಿಯ ಮುರುಗನ್ ದೇವಸ್ಥಾನದಲ್ಲಿ ತಮಿಳುನಾಡು ಆಸ್ಟ್ರೇಲಿಯಾದ ಸಮುದಾಯದ ಜತೆ ಸೇರಲು ಖುಷಿ ಎನಿಸಿತು. ಈ ದೇವಾಲಯವು ಪ್ರತಿದಿನ ಎಲ್ಲಾ ವರ್ಗದ ಜನರನ್ನು ಆಕರ್ಷಿಸುತ್ತದೆ. ಇಲ್ಲಿನ ಜನರಿಗೆ ಅಭಯ ನೀಡುತ್ತದೆ" ಎಂದು ಅಲ್ಬನೀಸ್ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
ಇದಕ್ಕೂ ಮುನ್ನ, ಆಸ್ಟ್ರೇಲಿಯಾದ ಪ್ರಧಾನಿ "ಮುಂಬರುವ ದಿನಗಳಲ್ಲಿ ಆಚರಿಸುವ ಎಲ್ಲರಿಗೂ ದೀಪಗಳ ಹಬ್ಬದ ಶುಭಾಶಯಗಳು" ಎಂದು ಹಾರೈಸಿದ್ದರು.
"ಸಂತೋಷ, ಭರವಸೆ ಮತ್ತು ಒಗ್ಗಟ್ಟಿನ ಈ ವಾರ್ಷಿಕ ಹಬ್ಬವು ನಂಬಿಕೆ ಮತ್ತು ಸಂಸ್ಕೃತಿಯ ಅಸಾಧಾರಣ ಸುಂದರ ಆಚರಣೆ. ಇದು ಆಸ್ಟ್ರೇಲಿಯಾದ ವೈವಿಧ್ಯಮಯ ಸಮಾಜದಿಂದ ಸ್ವೀಕೃತಗೊಂಡಿದೆ" ಎಂದು ಅವರು ಎಕ್ಸ್‌ನಲ್ಲಿ ಅವರು ಹೇಳಿದ್ದಾರೆ.
ಬಂಡಿ ಚೋರ್ ದಿವಸ್ ಮೊಘಲ್ ಚಕ್ರವರ್ತಿ ಜಹಾಂಗೀರ್ ಆಳ್ವಿಕೆಯ ಸಮಯದಲ್ಲಿ ಗ್ವಾಲಿಯರ್ ಕೋಟೆಯಿಂದ ಆರನೇ ಸಿಖ್ ಗುರು ಗುರು ಹರ್ಗೋಬಿಂದ್ ಅವರ ಬಿಡುಗಡೆಯ ಸ್ಮರಣೆಯ ದಿನವಾಗಿದೆ.
ಸಿಡ್ನಿಯ ಮುರುಗನ್ ದೇವಸ್ಥಾನಕ್ಕೆ ಭೇಟಿ ನೀಡಿದ ಅವರು ತಮಿಳು ಆಸ್ಟ್ರೇಲಿಯನ್ ಸಮುದಾಯದೊಂದಿಗೆ ದೀಪಾವಳಿ ಆಚರಿಸಿದರು.
ಕತ್ತಲೆಯ ಮೇಲೆ ಬೆಳಕು ಮತ್ತು ಅಜ್ಞಾನದ ಮೇಲೆ ಜ್ಞಾನದ ವಿಜಯದ ಆಚರಣೆಯಾಗಿದ್ದು, ಜೀವನದ ಎಲ್ಲಾ ಹಂತಗಳಲ್ಲಿ ಆಸ್ಟ್ರೇಲಿಯನ್ನರನ್ನು ಪ್ರೇರೇಪಿಸುವ ಆದರ್ಶಗಳನ್ನು ದೃಢಪಡಿಸುತ್ತದೆ. ದೀಪಾವಳಿಯ ಆಚರಣೆಗಳು ಮತ್ತು ಸಂಪ್ರದಾಯಗಳು ಎಲ್ಲಾ ರೀತಿಯಲ್ಲಿ ಸಮುದಾಯ, ಸಂಸ್ಕೃತಿ ಮತ್ತು ಪರಂಪರೆಯ ಅಭಿವ್ಯಕ್ತಿ. ಪ್ರೀತಿಪಾತ್ರರೊಂದಿಗೆ ಇರಲು ಶತಮಾನಗಳ ಸಂಪ್ರದಾಯದ ಪರಂಪರೆಯನ್ನು ಪ್ರತಿಬಿಂಬಿಸಲು ಇದು ಉತ್ತಮ ಕ್ಷಣ" ಎಂದು ಅಲ್ಬನೀಸ್ ಹೇಳಿದರು.