ಟ್ರಂಪ್ ನಿರಾಳ: ಸುಂಕ ಸಂಗ್ರಹ ಮುಂದುವರಿಸಲು ಅಪೀಲ್ಸ್ ಕೋರ್ಟ್ ಅನುಮತಿ
ಈ ಆದೇಶದ ಒಂದು ದಿನ ಮೊದಲು ಅಂದರೆ ಬುಧವಾರ, ಫೆಡರಲ್ ಟ್ರೇಡ್ ಕೋರ್ಟ್, ಟ್ರಂಪ್ ಅವರ ಸುಂಕಗಳು IEEPA ಅಡಿಯಲ್ಲಿ ಕೊಡಲಾದ ಅಧಿಕಾರದ ವ್ಯಾಪ್ತಿ ಮೀರಲಾಗಿದೆ ತೀರ್ಪು ನೀಡಿತ್ತು.;
ತೆರಿಗೆ ಸಂಗ್ರಹ ವಿಚಾರದಲ್ಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ಗೆ ಮಹತ್ವದ ತಾತ್ಕಾಲಿಕ ಜಯ ದೊರೆತಿದೆ. ಗುರುವಾರ (ಮೇ 29ರಂದು) ಫೆಡರಲ್ ಅಪೀಲ್ಸ್ ಕೋರ್ಟ್, 1977ರ ಇಂಟರ್ನ್ಯಾಷನಲ್ ಎಮರ್ಜೆನ್ಸಿ ಇಕನಾಮಿಕ್ ಪವರ್ಸ್ ಆಕ್ಟ್ (International Emergency Economic Powers Act ) ಅಡಿಯಲ್ಲಿ ಸುಂಕ ಸಂಗ್ರಹ ಮುಂದುವರಿಸಲು ಅನುಮತಿ ನೀಡಿದೆ. ಈ ಆದೇಶವು ಟ್ರಂಪ್ ಆಡಳಿತದ ಬಹುಪಾಲು ಆರ್ಥಿಕ ನೀತಿಗಳನ್ನು ರದ್ದುಗೊಳಿಸಿದ್ದ ವಿಚಾರಣಾ ನ್ಯಾಯಾಲಯದ ಆದೇಶವನ್ನು ತಾತ್ಕಾಲಿಕವಾಗಿ ತಡೆಹಿಡಿದಿದೆ.
ಫೆಡರಲ್ ಸರ್ಕ್ಯೂಟ್ಗಾಗಿ ಕೋರ್ಟ್ ಆಫ್ ಅಪೀಲ್ಸ್, ಟ್ರಂಪ್ ಆಡಳಿತದ ತುರ್ತು ಮನವಿ ಅಂಗೀಕರಿಸಿತು. ಸುಂಕ ಸಂಗ್ರಹ ತಡೆಯುವುದು "ದೇಶದ ರಾಷ್ಟ್ರೀಯ ಭದ್ರತೆಗೆ ಅಪಾಯ ಎಂದು ಟ್ರಂಪ್ ಸರ್ಕಾರ ವಾದ ಮಾಡಿತ್ತು. ಈ ಮೂಲಕ ಟ್ರಂಪ್ ಆಡಳಿತವು ತನ್ನ ವಿವಾದಾತ್ಮಕ ಸುಂಕ ನೀತಿಗಳನ್ನು ಸಮರ್ಥಿಸಿಕೊಳ್ಳಲು ರಾಷ್ಟ್ರೀಯ ಭದ್ರತೆಯನ್ನು ಮುಂದಿಟ್ಟು ಯಶಸ್ಸು ಪಡೆಯಿತು.
ಕೆಳ ಕೋರ್ಟ್ ಆದೇಶಕ್ಕೆ ತಾತ್ಕಾಲಿಕ ತಡೆ
ಈ ಆದೇಶದ ಒಂದು ದಿನ ಮೊದಲು ಅಂದರೆ ಬುಧವಾರ, ಫೆಡರಲ್ ಟ್ರೇಡ್ ಕೋರ್ಟ್, ಟ್ರಂಪ್ ಅವರ ಸುಂಕಗಳು IEEPA ಅಡಿಯಲ್ಲಿ ಕೊಡಲಾದ ಅಧಿಕಾರದ ವ್ಯಾಪ್ತಿ ಮೀರಲಾಗಿದೆ ತೀರ್ಪು ನೀಡಿತ್ತು. ಇದರಿಂದ ಟ್ರಂಪ್ಗೆ ಆರ್ಥಿಕ ಕ್ಷೇತ್ರದಲ್ಲಿ ದೊಡ್ಡ ಹಿನ್ನಡೆಯಾಗಿತ್ತು, ಏಕೆಂದರೆ ಅವರ ಅನಿಯಮಿತ ವ್ಯಾಪಾರ ನೀತಿಗಳು ಮಾರುಕಟ್ಟೆಗಳನ್ನು ತಲ್ಲಣಗೊಳಿಸಿತ್ತು. ಇದರಿಂದ ಬೆಲೆ ಏರಿಕೆ ಮತ್ತು ಆರ್ಥಿಕ ಬೆಳವಣಿಗೆಯ ಕುಂಠಿತಗೊಳಿಸುವ ಭೀತಿಯನ್ನು ಹುಟ್ಟುಹಾಕಿದ್ದವು.
ಈ ಕೆಳ ಕೋರ್ಟ್ ಆದೇಶವನ್ನು ಅಪೀಲ್ಸ್ ಕೋರ್ಟ್ ತಾತ್ಕಾಲಿಕವಾಗಿ ತಡೆಹಿಡಿದಿದೆ., ಅರ್ಜಿದಾರರಿಗೆ ಜೂನ್ 5ರೊಳಗೆ ಮತ್ತು ಟ್ರಂಪ್ ಆಡಳಿತಕ್ಕೆ ಜೂನ್ 9ರೊಳಗೆ ತಮ್ಮ ಪ್ರತಿಕ್ರಿಯೆ ಸಲ್ಲಿಸುವಂತೆ ಕೋರ್ಟ್ ಸೂಚಿಸಿದೆ.
ಟ್ರಂಪ್ ಅವರು ಅಮೆರಿಕಾದ ಬೃಹತ್ ಮತ್ತು ದೀರ್ಘಕಾಲೀನ ವ್ಯಾಪಾರ ಕೊರತೆ 'ರಾಷ್ಟ್ರೀಯ ತುರ್ತುಸ್ಥಿತಿ' ಎಂದು ವಾದಿಸುತ್ತಾ, IEEPA ಅಡಿಯಲ್ಲಿ ತಮಗೆ ಸುಂಕ ವಿಧಿಸಲು ಅಧಿಕಾರವಿದೆ ಎಂದು ಪ್ರತಿಪಾದಿಸುತ್ತಿದ್ದಾರೆ. ಅವರು ಕೆನಡಾ, ಚೀನಾ, ಮತ್ತು ಮೆಕ್ಸಿಕೊ ಸೇರಿದಂತೆ ವಿಶ್ವದ ಬಹುತೇಕ ದೇಶಗಳಿಂದ ಆಮದುಗಳ ಮೇಲೆ ಸುಂಕಗಳನ್ನು ವಿಧಿಸಿದ್ದಾರೆ.