Hardeep Singh Nijjar: ನಿಜ್ಜರ್ ಹತ್ಯೆ ಪ್ರಕರಣದ ನಾಲ್ವರು ಭಾರತೀಯರಿಗೆ ಕೆನಡಾದಲ್ಲಿ ಜಾಮೀನು

Hardeep Singh Nijjar ನಾಲ್ವರು ಭಾರತೀಯ ಪ್ರಜೆಗಳಿಗೆ ಜಾಮೀನು ನೀಡಿದ್ದರಿಂದ, ವಿಚಾರಣೆಯನ್ನು ಬ್ರಿಟಿಷ್ ಕೊಲಂಬಿಯಾ ಸುಪ್ರೀಂ ಕೋರ್ಟ್‌ಗೆ ಸ್ಥಳಾಂತರಿಸಲಾಗಿದೆ. ಮುಂದಿನ ವಿಚಾರಣೆ ಫೆಬ್ರವರಿ 11 ಕ್ಕೆ ನಿಗದಿಪಡಿಸಲಾಗಿದೆ.;

Update: 2025-01-09 11:03 GMT
ಹರ್‌ದೀಪ್‌ ಸಿಂಗ್‌ ನಿಜ್ಜರ್‌.

ಖಲಿಸ್ತಾನಿ ಪ್ರತ್ಯೇಕತಾವಾದಿ ನಾಯಕ ಹರ್ದೀಪ್ ಸಿಂಗ್ ನಿಜ್ಜರ್ (Hardeep Singh Nijjar) ಹತ್ಯೆ ಪ್ರಕರಣದ ಆರೋಪಿಗಳಾದ ನಾಲ್ವರು ಭಾರತೀಯರಿಗೆ ಕೆನಡಾ ನ್ಯಾಯಾಲಯ ಜಾಮೀನು ನೀಡಿದೆ. ಖಲಿಸ್ತಾನಿ ನಾಯಕ ಹಾಗೂ ಪ್ರತ್ಯೇಕತಾವಾದಿ ನಿಜ್ಜರ್ ನನ್ನು 2023ರ ಜೂನ್‌ನಲ್ಲಿ ಬ್ರಿಟಿಷ್ ಕೊಲಂಬಿಯಾದ ಸರ್ರೆಯಲ್ಲಿ ಹತ್ಯೆ ಮಾಡಲಾಗಿತ್ತು. ಕರಣ್ ಬ್ರಾರ್, ಅಮನ್ದೀಪ್ ಸಿಂಗ್, ಕಮಲ್‌ಪ್ರೀತ್‌ ಸಿಂಗ್ ಮತ್ತು ಕರಣ್‌ಪ್ರೀತ್ ಸಿಂಗ್ ಜಾಮೀನು ಪಡೆದ ಭಾರತೀಯರು. ಅವರನ್ನು ರಾಯಲ್ ಕೆನಡಿಯನ್ ಮೌಂಟೆಡ್ ಪೊಲೀಸ್ (ಆರ್‌ಸಿಎಂಪಿ) ಮೇ 2024ರಲ್ಲಿ ಕೆನಡಾದ ವಿವಿಧ ಭಾಗಗಳಿಂದ ಬಂಧಿಸಿತ್ತು.

ನಿಜ್ಜರ್‌ ಹತ್ಯೆಯಲ್ಲಿ ಭಾರತೀಯ ಸರ್ಕಾರಿ ಏಜೆಂಟರು ಭಾಗಿಯಾಗಿದ್ದಾರೆ ಎಂದು ಕೆನಡಾ ಪ್ರಧಾನಿ ಜಸ್ಟಿನ್‌ ಟ್ರುಡೊ ಆರೋಪಿಸಿದ ನಂತರ ಭಾರತದೊಂದಿಗಿನ ಕೆನಡಾದ ಸಂಬಂಧವನ್ನು ಹದಗೆಟ್ಟಿತ್ತು. ಭಾರತವು ಆರೋಪಗಳನ್ನು "ಆಧಾರರಹಿತ" ಎಂದು ಕರೆದಿದ್ದು ಇಲ್ಲಿಯವರೆಗೆ, ಆ ನಿಟ್ಟಿನಲ್ಲಿ ಹೆಚ್ಚಿನ ಪುರಾವೆಗಳು ಸಾರ್ವಜನಿಕವಾಗಿ ಹೊರಬಂದಿಲ್ಲ ಎಂದು ಸಮರ್ಥಿಸಿಕೊಂಡಿದೆ.

ಪ್ರಾಥಮಿಕ ವಿಚಾರಣೆಯ ಸಮಯದಲ್ಲಿ ಬಂಧಿತ ನಾಲ್ವರು ಭಾರತೀಯ ಪ್ರಜೆಗಳ ವಿರುದ್ಧ ಸಾಕ್ಷ್ಯಗಳನ್ನು ಪ್ರಸ್ತುತಪಡಿಸುವಲ್ಲಿನ ತನಿಖಾಧಿಕಾರಿಗಳು ವಿಳಂಬ ಮಾಡಿರುವುದು ಟೀಕೆಗೆ ಗುರಿಯಾಗಿದೆ.

ಜಾಮೀನು ನೀಡಿದ್ದರಿಂದ, ವಿಚಾರಣೆಯನ್ನು ಬ್ರಿಟಿಷ್ ಕೊಲಂಬಿಯಾ ಸುಪ್ರೀಂ ಕೋರ್ಟ್‌ಗೆ ಸ್ಥಳಾಂತರಿಸಲಾಯಿತು, ಅಲ್ಲಿ ಮುಂದಿನ ವಿಚಾರಣೆಯನ್ನು ಫೆಬ್ರವರಿ 11ಕ್ಕೆ ನಡೆಯಲಿದೆ.

ಕೆನಡಾದ ಪ್ರಧಾನಿ ಸ್ಥಾನಕ್ಕೆ ಟ್ರುಡೊ ರಾಜೀನಾಮೆ ನೀಡಿದ ಎರಡು ದಿನಗಳಲ್ಲಿ ಈ ಬೆಳವಣಿಗೆ ನಡೆದಿದೆ. ಈ ಪ್ರಕರಣವನ್ನು ಮತ್ತು ಭಾರತದೊಂದಿಗಿನ ಸಂಬಂಧವನ್ನು ನಿಭಾಯಿಸುವ ವಿಚಾರದಲ್ಲಿ ಈಗಾಗಲೇ ಟೀಕೆಗೆ ಗುರಿಯಾಗಿರುವ ಕೆನಡಾ ಸರ್ಕಾರಕ್ಕೆ ಮತ್ತೊಂದು ಹಿನ್ನಡೆಯಾಗಿದೆ.

Tags:    

Similar News