Washington DC: ವಾಷಿಂಗ್ಟನ್ ಬಳಿ ಸೇನಾ ಹೆಲಿಕಾಪ್ಟರ್‌ಗೆ ವಿಮಾನ ಡಿಕ್ಕಿ: 18 ಮಂದಿ ಸಾವು

Washington DC : ಯುಎಸ್ ಸೇನಾ ಅಧಿಕಾರಿಯೊಬ್ಬರು ಹೆಲಿಕಾಪ್ಟರ್‌ನಲ್ಲಿ ಇದ್ದರು. ತರಬೇತಿ ನೀಡಲು ಹಾರಾಟ ನಡೆಸಲಾಗುತ್ತಿತ್ತು. . ಅದರಲ್ಲಿ ಅಧಿಕಾರಿ ಜತೆಗೆ ಮೂವರು ವಾಯುಪಡೆಯ ಸಿಬ್ಬಂದಿ ಇದ್ದರು.;

Update: 2025-01-30 05:51 GMT

ವಾಷಿಂಗ್ಟನ್ (Washington DC) ಬಳಿಯ ರೊನಾಲ್ಡ್ ರೇಗನ್ ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಳಿಯಲು ಮುಂದಾಗುತ್ತಿದ್ದ ಪ್ರಯಾಣಿಕರ ಜೆಟ್ ಯುಎಸ್ ಸೇನೆಯ ಬ್ಲ್ಯಾಕ್‌ಹಾಕ್‌ ಹೆಲಿಕಾಪ್ಟರ್‌ಗೆ ಡಿಕ್ಕಿ ಹೊಡೆದಿದೆ.

ಅಮೆರಿಕನ್ ಏರ್‌ಲೈನ್‌ಗೆ ಸೇರಿದ ವಿಮಾನವು ಯುಎಸ್ ಸೇನಾ ಹೆಲಿಕಾಪ್ಟರ್‌ಗೆ ಡಿಕ್ಕಿ ಹೊಡೆದು ಪೊಟೊಮ್ಯಾಕ್ ನದಿಗೆ ಬಿದ್ದಿದೆ. 64 ಮಂದಿ ಪ್ರಯಾಣಿಕರು ವಿಮಾನದಲ್ಲಿ ಇದ್ದರು ಎಂದು ಹೇಳಲಾಗಿದೆ. ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿರುವ ಅಧಿಕಾರಿಗಳು ಹದಿನೆಂಟು ಶವಗಳನ್ನು ನದಿಯಿಂದ ಹೊರತೆಗೆದಿದ್ದಾರೆ.

ಕಾನ್ಸಾಸ್‌ನ ವಿಚಿತಾದಿಂದ ವಾಷಿಂಗ್ಟನ್‌ಗೆ ತೆರಳುತ್ತಿದ್ದ ಪ್ಯಾಸೆಂಜರ್ ಜೆಟ್‌ನಲ್ಲಿ 60 ಪ್ರಯಾಣಿಕರು ಮತ್ತು 4 ಸಿಬ್ಬಂದಿ ಇದ್ದರು ಎಂದು ಅಮೆರಿಕನ್ ಏರ್‌ಲೈನ್ಸ್‌ ತಿಳಿಸಿದೆ. ಈ ವಿಮಾನವನ್ನು ಪಿಎಸ್ಎ ಏರ್‌ಲೈನ್ಸ್‌ ನಿರ್ವಹಿಸುತ್ತಿತ್ತು.

ಘಟನೆಯ ಹಿನ್ನೆಲೆಯಲ್ಲಿ ವಾಷಿಂಗ್ಟನ್ ಬಳಿಯ ವಿಮಾನ ನಿಲ್ದಾಣದಿಂದ ಎಲ್ಲಾ ಟೇಕ್ ಆಫ್ ಮತ್ತು ಲ್ಯಾಂಡಿಂಗ್‌ಗಳನ್ನು ನಿಲ್ಲಿಸಲಾಗಿದೆ . ಶ್ವೇತಭವನ ಮತ್ತು ಕ್ಯಾಪಿಟಲ್‌ ಹಿಲ್‌ನಿಂದ ಕೇವಲ ಐದು ಕಿಲೋಮೀಟರ್ ದೂರದಲ್ಲಿ ಈ ನಿಲ್ದಾಣವಿದೆ. ಹೀಗಾಗಿ ವಿಶ್ವದ ಅತ್ಯಂತ ಬಿಗಿಯಾದ ನಿಯಂತ್ರಿತ ವಿಮಾನ ನಿಲ್ದಾಣವಾಗಿದೆ.

ಯುಎಸ್ ಸೇನಾ ಅಧಿಕಾರಿಯೊಬ್ಬರು ಹೆಲಿಕಾಪ್ಟರ್‌ನಲ್ಲಿ ಇದ್ದರು. ತರಬೇತಿ ನೀಡಲು ಹಾರಾಟ ನಡೆಸಲಾಗುತ್ತಿತ್ತು. . ಅದರಲ್ಲಿ ಅಧಿಕಾರಿ ಜತೆಗೆ ಮೂವರು ವಾಯುಪಡೆಯ ಸಿಬ್ಬಂದಿ ಇದ್ದರು.

ಹತ್ತಿರದ ಕೆನಡಿ ಸೆಂಟರ್‌ ವೀಕ್ಷಣಾ ಕ್ಯಾಮೆರಾದ ವೀಡಿಯೊದಲ್ಲಿ ವಿಮಾನವು ಡಿಕ್ಕಿ ಹೊಡೆದು ಬೆಂಕಿಯುಂಡೆಯಂತಾಗಿ ಉರುಳುವುದನ್ನು ಕಾಣಬಹುದು.

ಟ್ರಂಪ್‌ ವಿವರಣೆ

ರೇಗನ್ ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸಂಭವಿಸಿದ ಭೀಕರ ಅಪಘಾತದ ಬಗ್ಗೆ ಮಾಹಿತಿ ದೊರಕಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. "ಅಧಿಕಾರಿಗಳು ಪರಿಸ್ಥಿತಿಯನ್ನು ಮೇಲ್ವಿಚಾರಣೆ ಮಾಡುತ್ತಿದ್ದಾರೆ" ಎಂದು ಹೇಳಿದರು.

ರೇಡಿಯೋ ಟ್ರಾನ್ಸ್ ಪಾಂಡರ್‌ನ ದತ್ತಾಂಶದ ಪ್ರಕಾರ ಅಪಘಾತದ ವೇಳೆ ವಿಮಾನವು ಸುಮಾರು 400 ಅಡಿ ಎತ್ತರದಲ್ಲಿತ್ತು ಮತ್ತು ಗಂಟೆಗೆ ಸುಮಾರು 140 ಮೈಲಿ ವೇಗದಲ್ಲಿತ್ತು.

ಫೆಡರಲ್ ಏವಿಯೇಷನ್ ಅಥಾರಿಟಿ (ಎಫ್ಎಎ) ತನಿಖೆಯನ್ನು ಪ್ರಾರಂಭಿಸಿದೆ ಮತ್ತು ರಾಷ್ಟ್ರೀಯ ಸಾರಿಗೆ ಸುರಕ್ಷತಾ ಮಂಡಳಿ ಘಟನೆಯ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಸಂಗ್ರಹಿಸುತ್ತಿದೆ. 

Tags:    

Similar News