ಸಿರಿಯಾ ತೊರೆಯಿರಿ ! ಭಾರತೀಯರಿಗೆ ಕೇಂದ್ರ ಸರ್ಕಾರದ ಸೂಚನೆ
ಪ್ರಸ್ತುತ ಸಿರಿಯಾದಲ್ಲಿರುವ ಭಾರತೀಯರಿಗೆ ಡಮಾಸ್ಕಸ್ನಲ್ಲಿರುವ ಭಾರತೀಯ ರಾಯಭಾರ ಕಚೇರಿಯೊಂದಿಗೆ ಸಂಪರ್ಕದಲ್ಲಿರಲು ಮನವಿ ಮಾಡಿದೆ. ವಿದೇಶಾಂಗ ಸಚಿವಾಲಯ (ಎಂಇಎ) ತುರ್ತು ಸಹಾಯವಾಣಿ ಸಂಖ್ಯೆ ಮತ್ತು ಇಮೇಲ್ ಐಡಿಯನ್ನು ಒದಗಿಸುವ ಹೇಳಿಕೆ ಬಿಡುಗಡೆ ಮಾಡಿದೆ.;
ಸಿರಿಯಾದಲ್ಲಿ ಆಡಳಿತ ಪರಿಸ್ಥಿತಿ ಹದಗೆಡುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರವು ಎಲ್ಲಾ ಭಾರತೀಯ ನಾಗರಿಕರಿಗೆ ಮುಂದಿನ ಸೂಚನೆ ಬರುವವರೆಗೆ ಸಿರಿಯಾಕ್ಕೆ ಪ್ರಯಾಣಿಸುವುದನ್ನು ಸಂಪೂರ್ಣವಾಗಿ ತಪ್ಪಿಸಿ ಎಂದು ಹೇಳಿದೆ. ಜತೆಗೆ ಅಲ್ಲಿದ್ದವರು ತಕ್ಷಣ ವಾಪಸ್ ಬರಬೇಕು ಎಂದೂ ಹೇಳಿದೆ.
ಪ್ರಸ್ತುತ ಸಿರಿಯಾದಲ್ಲಿರುವ ಭಾರತೀಯರಿಗೆ ಡಮಾಸ್ಕಸ್ನಲ್ಲಿರುವ ಭಾರತೀಯ ರಾಯಭಾರ ಕಚೇರಿಯೊಂದಿಗೆ ಸಂಪರ್ಕದಲ್ಲಿರಲು ಮನವಿ ಮಾಡಿದೆ. ವಿದೇಶಾಂಗ ಸಚಿವಾಲಯ (ಎಂಇಎ) ತುರ್ತು ಸಹಾಯವಾಣಿ ಸಂಖ್ಯೆ ಮತ್ತು ಇಮೇಲ್ ಐಡಿಯನ್ನು ಒದಗಿಸುವ ಹೇಳಿಕೆ ಬಿಡುಗಡೆ ಮಾಡಿದೆ.
ಸಿರಿಯಾವನ್ನು ತೊರೆಯಲು ಸಾಧ್ಯವಿರುವವರು ವಾಣಿಜ್ಯ ವಿಮಾನಗಳ ಮೂಲಕ ಸಾಧ್ಯವಾದಷ್ಟು ಬೇಗ ಭಾರತ ಸೇರಿಕೊಳ್ಳಬೇಕು ಎಂದು ಸಲಹೆ ಶಿಫಾರಸು ಮಾಡಿದೆ. ನಿರ್ಗಮಿಸಲು ಸಾಧ್ಯವಾಗದವರಿಗೆ, ಗರಿಷ್ಠ ಎಚ್ಚರಿಕೆ ವಹಿಸಲು, ಓಡಾಟ ಕಡಿಮೆ ಮಾಡಲು ಮತ್ತು ವೈಯಕ್ತಿಕ ಸುರಕ್ಷತೆಗೆ ಆದ್ಯತೆ ನೀಡುವಂತೆ ಎಂಇಎ ಸಲಹೆ ನೀಡಿದೆ.
ತುರ್ತು ಸಂಪರ್ಕ ವಿವರಗಳು: ಸಹಾಯವಾಣಿ ಸಂಖ್ಯೆ (ವಾಟ್ಸ್ಆ್ಯಪ್ನಲ್ಲಿಯೂ ಲಭ್ಯವಿದೆ): +963 993385973
ತುರ್ತು ಇಮೇಲ್ ಐಡಿ: hoc.damascus@mea.gov.in
ಪರಿಸ್ಥಿತಿ ಚಿಂತಾಜನಕ
ಅಧ್ಯಕ್ಷ ಬಷರ್ ಅಲ್-ಅಸ್ಸಾದ್ ಅವರ ರಷ್ಯಾ ಮತ್ತು ಇರಾನ್ ಬೆಂಬಲಿತ ಆಡಳಿತವು ಟರ್ಕಿ ಬೆಂಬಲಿತ ಬಂಡುಕೋರ ಗುಂಪುಗಳಿಂದ ದಾಳಿ ಎದುರಿಸುತ್ತಿರುವುದರಿಂದ ಸಿರಿಯಾ ರಾಜಕೀಯ ಪ್ರಕ್ಷುಬ್ಧತೆಯನ್ನು ಎದುರಿಸುತ್ತಿದೆ. ರಾಯಿಟರ್ಸ್ ವರದಿಯ ಪ್ರಕಾರ, ವಿರೋಧ ಪಡೆಗಳು ಕ್ಷಿಪ್ರ ದಾಳಿ ಪ್ರಾರಂಭಿಸಿವೆ, ಅಲೆಪ್ಪೊ ಮತ್ತು ಹಮಾದಂತಹ ಪ್ರಮುಖ ನಗರಗಳನ್ನು ವಶಪಡಿಸಿಕೊಂಡಿವೆ. ಇದೀಗ ಹೋಮ್ಸ್ ಕಡೆಗೆ ಮುನ್ನಡೆಯುತ್ತಿವೆ.
ವಿಶ್ವಸಂಸ್ಥೆಯ ಪ್ರಕಾರ, ನವೆಂಬರ್ 27ರಿಂದ ನಡೆಯುವ ಕ್ಷಿಪ್ರ ದಾಳಿಯಿಂದಾಗಿ ಸರಿಸುಮಾರು 280,000 ಜನರನ್ನು ಸ್ಥಳಾಂತರಿಸಲಾಗಿದೆ.