Bigg Boss Grand Finale| ಈ ಬಾರಿ ಹನುಮಂತ ಲಮಾಣಿಗೆ ಬಿಗ್‌ಬಾಸ್ ಕಿರೀಟ?
BigBossKannada: ಈ ಬಾರಿಯ ಬಿಗ್‌ಬಾಸ್ ಸೀಸನ್‌ನಲ್ಲಿ ಅಂತಿಮ ಕ್ಷಣದಲ್ಲಿ ಬಿಗ್ ಬಾಸ್ ಟ್ರೋಫಿ ಯಾರ ಪಾಲಾಗಲಿದೆ ಎಂಬ ಲೆಕ್ಕಾಚಾರಗಳು ಇದೀಗ ಗರಿಗೆದರಿವೆ;
BiggBossKannada : ಪ್ರೀತಿ, ಸ್ನೇಹ, ಸಂಬಂಧ, ಭಾವನೆಗಳ ಬುತ್ತಿ ಬಿಚ್ಚಿದ ಮೇಲೆ ಬಿಗ್ ಬಾಸ್ ಮನೆಯಲ್ಲಿ ಕಪ್ ಗೆಲ್ಲುವ ಅಂತಿಮ ರೇಸ್ ಆರಂಭವಾಗಿದೆ.
ಕನ್ನಡದ ಬಿಗ್ ರಿಯಾಲಿಟಿ ಶೋ ಅಂತಿಮ ಹಂತವನ್ನು ತಲುಪಿದೆ. ಈ ಬಾರಿಯ ಬಿಗ್‌ಬಾಸ್ ಸೆಪ್ಟೆಂಬರ್ 29ರಂದು ಆರಂಭವಾಗಿದ್ದು, ಇದೀಗ 96 ದಿನಗಳನ್ನು ಪೂರೈಸಿ ಫಿನಾಲೆಗೆ ಸಮೀಪಿಸುತ್ತಿದೆ. ಗ್ರಾಂಡ್ ಫಿನಾಲೆಯನ್ನು ಜನವರಿ 26ಕ್ಕೆ ನಡೆಸಲು ಬಿಗ್‌ಬಾಸ್ ತಂಡ ತೀರ್ಮಾನಿಸಿದೆ ಎನ್ನಲಾಗಿದೆ.
ಈ ಬಾರಿಯ ಬಿಗ್‌ಬಾಸ್ ರಿಯಾಲಿಟಿ ಶೋ ಮನರಂಜನೆಯ ಜೊತೆಗೆ ಕೆಲವೊಂದು ಡ್ರಾಮಗಳಿಗೂ ಸಾಕ್ಷಿಯಾಗಿತ್ತು. ಬಿಗ್‌ಬಾಸ್ ಆರಂಭವಾದಾಗ ಒಟ್ಟು 17 ಜನ ಸ್ಪರ್ಧಿಗಳು ಇದ್ದರು. ಈಗ ಉಳಿದುಕೊಂಡಿರುವವರು ಕೇವಲ 9 ಜನ ಮಾತ್ರ. ರಂಜಿತ್ ಹಾಗೂ ಜಗದೀಶ್ ಹೊಡೆದಾಡಿಕೊಂಡು ಮನೆಯಿಂದ ಔಟ್ ಆದರೆ, ಗೋಲ್ಡ್ ಸುರೇಶ್ ಅವರು ಅನಿವಾರ್ಯ ಕಾರಣಗಳಿಂದ ಬಿಗ್‌ಬಾಸ್ ಮನೆಯಿಂದ ಹೊರ ಬಂದರು. ಶೋಭಾ ಶೆಟ್ಟಿ ಕೂಡ ಅರ್ಧಕ್ಕೆ ಬಿಗ್‌ಬಾಸ್ ಮನೆಯಿಂದ ಹೊರಬಂದಿದ್ದಾರೆ.
ಹಾಡುಹಕ್ಕಿ ಹನುಮಂತಗೆ ಒಲಿಯುವುದೇ ಅದೃಷ್ಟ?
ಫಿನಾಲೆ ಸಮೀಪಿಸುತ್ತಿದ್ದಂತೆ ಬಿಗ್ ಬಾಸ್ ಮನೆಯಲ್ಲಿ ಉಳಿದಿರುವ 9 ಸ್ಪರ್ಧಿಗಳಲ್ಲಿ ಪೈಪೋಟಿ ಜೋರಾಗಿದೆ. ವಿನ್ನರ್ ಯಾರಾಗಬಹುದು ಎಂಬ ಕುತೂಹಲ ಸದ್ಯ ಎಲ್ಲರಲ್ಲೂ ಮನೆ ಮಾಡಿದೆ.
ಈಗಾಗಲೇ ಅನೇಕ ಸೋಶಿಯಲ್ ಮೀಡಿಯಾ ಸಮೀಕ್ಷೆಗಳು ನಡೆದಿವೆ. ಕೆಲ ಸಮೀಕ್ಷೆ ಪ್ರಕಾರ ತ್ರಿವಿಕ್ರಮ್ ಈ ಬಾರಿಯ ವಿನ್ನರ್ ಆಗಬಹುದು ಎಂದು ಹೇಳಲಾಗುತ್ತಿದೆ. ಆದರೆ ಇವರಿಗೆ ರಜತ್ ಮತ್ತು ಉಗ್ರಂ ಮಂಜು ಕೂಡ ಭರ್ಜರಿ ಪೈಪೋಟಿ ನೀಡುತ್ತಿದ್ದಾರೆ. ಈ ವಿನ್ನರ್ ಪಟ್ಟಿಯಲ್ಲಿ ಹಾಡುಗಾರ ಹನುಮಂತ ಅವರ ಹೆಸರೂ ಕೇಳಿಬರುತ್ತಿದ್ದು, ತ್ರಿವಿಕ್ರಮ್ ಹೆಸರು ಎರಡನೇ ಸ್ಥಾನ, 3ನೇ ಹೆಸರು ಉಗ್ರ ಮಂಜು ಮತ್ತು 4ನೇ ಹೆಸರು ರಜತ್ ಹಾಗೂ ಐದನೇ ಹೆಸರು ಭವ್ಯಾ ಗೌಡ ಎನ್ನಲಾಗುತ್ತಿದೆ. ಆದರೆ ಅಂತಿಮ ಕ್ಷಣದಲ್ಲಿ ಯಾರು ಬಿಗ್ ಬಾಸ್ ಟ್ರೋಫಿ ಎತ್ತಿ ಹಿಡಿಯುತ್ತಾರೆ ಎಂದು ಇನ್ನಷ್ಟೆ ಗೊತ್ತಾಗಬೇಕಾಗಿದೆ.
ಈ ವಾರ ಹೊರಹೋಗುತ್ತಿರುವವರು ಯಾರು?
ಸದ್ಯ ಬಿಗ್ ಬಾಸ್ ಮನೆಯಲ್ಲಿ ಉಗ್ರಂ ಮಂಜು, ಚೈತ್ರಾ ಕುಂದಾಪುರ, ರಜತ್ ಕಿಶನ್, ತ್ರಿವಿಕ್ರಮ್, ಭವ್ಯಾ ಗೌಡ, ಮೋಕ್ಷಿತಾ ಪೈ, ಗೌತಮಿ ಜಾದವ್, ಧನರಾಜ್ ಆಚಾರ್ ಹಾಗೂ ಹನುಮಂತು ಸೇರಿ ಒಟ್ಟು 9 ಮಂದಿ ಸ್ಪರ್ಧಿಗಳಿದ್ದಾರೆ.
ಇಂದು(ಜ.4) ಶನಿವಾರ ವೀಕೆಂಡ್‌ನಲ್ಲಿ ಯಾರು ಎಲಿಮಿನೇಟ್ ಆಗಬಹುದು ಎಂಬ ಕುತೂಹಲ ಕೂಡ ಮನೆ ಮಾಡಿದೆ. ಬಿಗ್ ಬಾಸ್ ಮನೆಯಲ್ಲಿ ಸದ್ಯ ಈ ವಾರ ಯಾರೂ ನಾಮಿನೇಟ್ ಆಗಿಲ್ಲ. ಹೀಗಾಗಿ ಈ ವಾರದ ಎಲಿಮಿನೇಷನ್ ಇರುವ ಬಗ್ಗೆಯೂ ಅನುಮಾನ ವ್ಯಕ್ತವಾಗಿದೆ. ಸದ್ಯ ಒಂಬತ್ತು ಜನರ ಪೈಕಿ ಐವರು ಬಿಗ್‌ಬಾಸ್ ಫಿನಾಲೆಗೆ ತಲುಪುತ್ತಾರೆ. ಉಳಿದ ನಾಲ್ವರ ಪೈಕಿ ಒಂದು ಡಬಲ್ ಎಲಿಮಿನೇಷನ್ ನಡೆಯುತ್ತದೆ. ಮತ್ತಿಬ್ಬರು ಒಂದೊಂದು ವಾರ ಎಲಿಮಿನೇಟ್ ಆಗುವ ಸಾಧ್ಯತೆ ಇದೆ ಎಂಬ ಲೆಕ್ಕಾಚಾರಗಳು ನಡೆಯುತ್ತಿವೆ.
ಬಿಗ್‌ಬಾಸ್ ಫಿನಾಲೆ ಹಂತಕ್ಕೆ ತಲುಪುತ್ತಿದ್ದಂತೆ ಮನರಂಜನೆ ಹೆಚ್ಚುತ್ತಿದೆ. ಬಿಗ್ ಬಾಸ್ ಮನೆಯಲ್ಲಿ ಈ ವಾರ ಎಲ್ಲಾ ಸ್ಪರ್ಧಿಗಳ ಕುಟುಂಬಸ್ಥರು ಬಿಗ್ ಬಾಸ್ ಮನೆಗೆ ಭೇಟಿ ನೀಡಿ ಒಂದು ದಿನ ಕಳೆದಿದ್ದಾರೆ. 90 ದಿನ ಮನೆಯವರನ್ನು ಬಿಟ್ಟು ಬಿಗ್ ಬಾಸ್ ಮನೆಯಲ್ಲಿದ್ದ ಸ್ಪರ್ಧಿಗಳು ತಮ್ಮ ಮನೆಯವರನ್ನು ನೋಡಿ ಖುಷಿಯಾಗಿದ್ದಾರೆ.
ಸುದೀಪ್ ಕೈರುಚಿ ಸವಿದ ಸ್ಪರ್ಧಿಗಳು
ಕಿಚ್ಚ ಸುದೀಪ್ ಅವರು ಬಿಗ್ ಬಾಸ್ ಸ್ಪರ್ಧಿಗಳಿಗಾಗಿ ವಿಶೇಷವಾಗಿ ಅಡುಗೆ ಮಾಡಿ ಕಳಿಸಿದ್ದಾರೆ. ಎಲ್ಲರಿಗೂ ಪ್ರತ್ಯೇಕ ಊಟವನ್ನು ಪ್ಯಾಕ್ ಮಾಡಿದ್ದು ಅದರ ಮೇಲೆ ಯಾರ ಊಟ ಎಂದು ಹೆಸರು ಕೂಡ ಬರೆಯಲಾಗಿತ್ತು. ಎಲ್ಲಾ ಸ್ಪರ್ಧಿಗಳು ಸುದೀಪ್ ಕೈರುಚಿಗೆ ಮನಸೋತು ಬಿಗ್ ಬಾಸ್ ಮನೆಗೆ ಬಂದಿದ್ದಕ್ಕೆ ಸಾರ್ಥಕವಾಯಿತು ಎಂದು ಹೇಳಿದ್ದಾರೆ.
ಬಿಗ್‌ಬಾಸ್ ಅವಧಿ ವಿಸ್ತರಣೆ
ಈ ಬಾರಿ ಬಿಗ್‌ಬಾಸ್ ಫಿನಾಲೆ ಎರಡು ವಾರ ಮುಂದೂಡುವ ಯೋಜನೆಯಲ್ಲಿ ಬಿಗ್‌ಬಾಸ್ ಇದೆ. ಯಾಕೆಂದರೆ ಈ ಬಾರಿ ಬಿಗ್‌ಬಾಸ್ ಸೀಸನ್ 11 ಹೊಸ ಟೈಟಲ್ ನೊಂದಿಗೆ ಶುರುವಾಗಿತ್ತು. ಹೀಗಾಗಿ ಈ ಬಾರಿಯ ಬಿಗ್‌ಬಾಸ್ ಅನ್ನು 120 ದಿನಗಳ ಕಾಲ ನಡೆಸಬೇಕು ಎಂದು ಬಿಗ್‌ಬಾಸ್ ತಂಡ ಯೋಚಿಸುತ್ತಿದ್ದು, ಒಂದು ವಾರ ಹೆಚ್ಚಾಗಿಯೇ ಬಿಗ್‌ಬಾಸ್ ನಡೆದರೆ ಜನವರಿ 26ಕ್ಕೆ ಫಿನಾಲೆ ನಡೆಯಲಿದೆ ಎಂದು ಹೇಳಲಾಗುತ್ತಿದೆ. ಟಿಆರ್‌ಪಿ ವಿಚಾರದಲ್ಲಿ ಕೂಡ ಬಿಗ್‌ಬಾಸ್ ಶೋ ಈ ಬಾರಿಯೂ ಟಾಪ್‌ನಲ್ಲಿದೆ.
ಗ್ರ್ಯಾಂಡ್ ಫಿನಾಲೆಗೆ ವೇದಿಕೆ ಸಜ್ಜು
ಬಿಗ್‌ಬಾಸ್ ಕನ್ನಡ ಸೀಸನ್ 11 ಗ್ರ್ಯಾಂಡ್ ಫಿನಾಲೆಗೆ ವೇದಿಕೆ ಸಜ್ಜಾಗುತ್ತಿದೆ. ಪ್ರತೀ ಬಾರಿಯಂತೆ ಈ ಬಾರಿಯೂ ಬಿಗ್‌ಬಾಸ್ ಗ್ರ್ಯಾಂಡ್ ಫಿನಾಲೆಗೆ ಸ್ಪರ್ಧಿಗಳ ಕುಟುಂಬಸ್ಥರು ಹಾಗೂ ಆತ್ಮೀಯರು ಮಾತ್ರ ಭಾಗವಹಿಸಲು ಅವಕಾಶವಿರುತ್ತದೆ. ಇದಕ್ಕಾಗಿ ವೇದಿಕೆ ಕೂಡ ಸಜ್ಜಾಗುತ್ತಿದೆ. ಜೊತೆಗೆ ಬಿಗ್‌ಬಾಸ್ ಸ್ಪರ್ಧಿಗಳು ನೃತ್ಯ ಕೂಡ ಮಾಡಲಿದ್ದಾರೆ. ಬಿಗ್‌ಬಾಸ್ ಮನೆಯಿಂದ ಹೊರ ಬಂದ ಸ್ಪರ್ಧಿಗಳು ನೃತ್ಯ ಮಾಡುವ ಮೂಲಕ ಟಾಪ್ ಸ್ಪರ್ಧಿಗಳನ್ನು ರಂಜಿಸಲಿದ್ದಾರೆ. ಅಲ್ಲದೆ ಹನುಮಂತ ಲಂಬಾಣಿ ಅವರ ಹಾಡು, ಧನ್‌ರಾಜ್ ಕಾಮಿಡಿ, ಮಂಜು ಡೈಲಾಗ್ ಇದಲ್ಲದೆ ಮೋಕ್ಷಿತಾ, ಗೌತಮಿ ಅವರ ನೃತ್ಯ ಕೂಡ ಇರಲಿದೆ ಎಂದು ಹೇಳಲಾಗುತ್ತಿದೆ.