ಉತ್ತರಕಾಂಡ'ದ ವೀರವ್ವ ಆಗಿ ಭಾವನಾ ಮೆನನ್
ಉತ್ತರಕಾಂಡ ಚಿತ್ರತಂಡ ಇದೀಗ ಭಾವನಾ ಅವರ ಜನ್ಮದಿನದ ಅಂಗವಾಗಿ ಅವರ ಪಾತ್ರವನ್ನು ಪರಿಚಯಿಸಿದ್ದು, ನಟಿ ವೀರವ್ವ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ.;
ಡಾಲಿ ಧನಂಜಯ್ ಮತ್ತು ಶಿವರಾಜಕುಮಾರ್ ಅಭಿನಯದ ಉತ್ತರಕಾಂಡ ಸದ್ಯ ನಿರ್ಮಾಣ ಹಂತದಲ್ಲಿದ್ದು, ಈ ಚಿತ್ರದ ಮೂಲಕ ತಮಿಳು ನಟಿ ಐಶ್ವರ್ಯಾ ರಾಜೇಶ್ ಅವರು ಕನ್ನಡಕ್ಕೆ ಪದಾರ್ಪಣೆ ಮಾಡುತ್ತಿದ್ದಾರೆ. ಇದರೊಂದಿಗೆ ನಟಿ ಭಾವನಾ ಮೆನನ್ ಅವರು ನಿರ್ಣಾಯಕ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಆಕ್ಷನ್-ಪ್ಯಾಕ್ಡ್ ಕಮರ್ಷಿಯಲ್ ಎಂಟರ್‌ಟೈನರ್ ಎಂದು ಬಿಂಬಿತವಾಗಿರುವ ಉತ್ತರಕಾಂಡ ಚಿತ್ರತಂಡ ಇದೀಗ ಭಾವನಾ ಅವರ ಜನ್ಮದಿನದ ಅಂಗವಾಗಿ ಅವರ ಪಾತ್ರವನ್ನು ಪರಿಚಯಿಸಿದ್ದು, ನಟಿ ವೀರವ್ವ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ.
ಚಿತ್ರದಲ್ಲಿ ಉಮಾಶ್ರೀ, ದಿಗಂತ್ ಮಂಚಾಲೆ, ಚೈತ್ರ ಜೆ ಆಚಾರ್, ರಂಗಾಯಣ ರಘು, ವಿಜಯ್ ಬಾಬು, ಮತ್ತು ಗೋಪಾಲ ಕೃಷ್ಣ ದೇಶಪಾಂಡೆ ಪ್ರಮುಖ ಪಾತ್ರಗಳಲ್ಲಿದ್ದಾರೆ.
KRG ಸ್ಟುಡಿಯೋಸ್ ಬ್ಯಾನರ್ ಅಡಿಯಲ್ಲಿ ಕಾರ್ತಿಕ್ ಗೌಡ ಮತ್ತು ಯೋಗಿ ಜಿ ರಾಜ್ ಜಂಟಿಯಾಗಿ ನಿರ್ಮಿಸಿರುವ ಉತ್ತರಕಾಂಡ ಚಿತ್ರದ ಮೂಲಕ ಬಾಲಿವುಡ್ ಸಂಗೀತ ನಿರ್ದೇಶಕ ಅಮಿತ್ ತ್ರಿವೇದಿ ಅವರು ಕನ್ನಡಕ್ಕೆ ಪದಾರ್ಪಣೆ ಮಾಡುತ್ತಿದ್ದಾರೆ. ಚಿತ್ರಕ್ಕೆ ಅದ್ವೈತ ಗುರುಮೂರ್ತಿ ಅವರು ಛಾಯಾಗ್ರಾಹಕರಾಗಿದ್ದಾರೆ.