Bigg Boss Kannada | ಇಲ್ಲೇ ಸ್ವರ್ಗ, ಇಲ್ಲೇ ನರಕ ಎಂದು ವಾರ್ನಿಂಗ್ ಕೊಟ್ಟ ಕಿಚ್ಚ ಸುದೀಪ್‌

ಬಿಗ್ ಬಾಸ್ ಸೀಸನ್ 11ರಲ್ಲಿ ನಟ ಕಿಚ್ಚ ಸುದೀಪ್, ಸ್ವರ್ಗ, ನರಕದ ಕಥೆ ಹೇಳಿದ್ದಾರೆ. ಬೆಳಕು, ಸಂತೋಷ, ಸುಖ, ನೆಮ್ಮದಿ ಸ್ವರ್ಗ. ಕತ್ತಲು, ನೋವು, ಕಷ್ಟ, ಹಿಂಸೆ ನರಕ. ಸ್ವರ್ಗದಲ್ಲಿ ಇರಬೇಕಾದವರು ನರಕದಲ್ಲಿ ಇರಬಹುದು, ನರಕದಲ್ಲಿ ಇರಬೇಕಾದವರು ಸ್ವರ್ಗದಲ್ಲಿ ಇರಬಹುದು, ಬೆನ್ನಿಗೆ ಚೂರಿ ಹಾಕೋರು ಎಂದು ಕೊಂಡವರೇ ಮುಂದೆ ಸ್ನೇಹಿತರಾಗಬಹುದು. ಸ್ನೇಹಿತರೇ ಹಿಂದೆ ಹೋಗಿ ಚೂರಿ ಹಾಕ್ಬೋದು ಎಂದಿದ್ದಾರೆ;

Update: 2024-09-22 06:38 GMT
ಬಿಗ್‌ ಬಾಸ್‌
Click the Play button to listen to article

ಕನ್ನಡ ಕಿರುತೆರೆಯ ರಿಯಾಲಿಟಿ ಶೋ ಬಿಗ್‌ ಬಾಸ್‌ ಕನ್ನಡ ಸೀಸನ್ 11 ಸೆಪ್ಟೆಂಬರ್ 29 ರಿಂದ ಆರಂಭವಾಗಲಿದೆ. ಕಲರ್ಸ್‌ ಕನ್ನಡ, ಇದೀಗ ಹೊಸ ಪ್ರೋಮೋ ಹೊರತಂದಿದೆ. ಈ ಪ್ರೋಮೋದಲ್ಲಿ ಇಲ್ಲೇ ಸ್ವರ್ಗ, ಇಲ್ಲೇ ನರಕ ಎಂದ ಕಿಚ್ಚ ಸುದೀಪ್, ಹೊಸ ಅಧ್ಯಾಯದಲ್ಲೂ ಅದೇ ಕಿಚ್ಚು ಅಂತಿದ್ದಾರೆ. ಬಿಗ್ ಬಾಸ್ ಪ್ರಸಾರದ ಟೈಮ್ ಕೂಡ ತಿಳಿಸಿದ್ದಾರೆ.

ಬಿಗ್ ಬಾಸ್ ಸೀಸನ್ 11ರಲ್ಲಿ ನಟ ಕಿಚ್ಚ ಸುದೀಪ್, ಸ್ವರ್ಗ, ನರಕದ ಕಥೆ ಹೇಳಿದ್ದಾರೆ. ಬೆಳಕು, ಸಂತೋಷ, ಸುಖ, ನೆಮ್ಮದಿ ಸ್ವರ್ಗ. ಕತ್ತಲು, ನೋವು, ಕಷ್ಟ, ಹಿಂಸೆ ನರಕ. ಸ್ವರ್ಗದಲ್ಲಿ ಇರಬೇಕಾದವರು ನರಕದಲ್ಲಿ ಇರಬಹುದು, ನರಕದಲ್ಲಿ ಇರಬೇಕಾದವರು ಸ್ವರ್ಗದಲ್ಲಿ ಇರಬಹುದು, ಬೆನ್ನಿಗೆ ಚೂರಿ ಹಾಕೋರು ಎಂದುಕೊಂಡವರೇ ಮುಂದೆ ಸ್ನೇಹಿತರಾಗಬಹುದು. ಸ್ನೇಹಿತರೇ ಹಿಂದೆ ಹೋಗಿ ಚೂರಿ ಹಾಕ್ಬೋದು. ಇದು ಬಿಗ್ ಬಾಸ್ ಹೊಸ ಅಧ್ಯಾಯ ಎಂದು ಸುದೀಪ್ ಹೇಳಿದ್ದು ಪ್ರೋಮೋದಲ್ಲಿ ಕಾಣಬಹದು.

Full View

ಸೆಪ್ಟೆಂಬರ್ 29ರಂದು ಬಿಗ್ ಬಾಸ್ 11ರ ಗ್ರ್ಯಾಂಡ್ ಓಪನ್ನಿಂಗ್ ನಡೆಯಲಿದ್ದು, ಸೆಪ್ಟೆಂಬರ್ 30ರಿಂದ ರಾತ್ರಿ 9.30ಕ್ಕೆ ಬಿಗ್ ಬಾಸ್ ಕಾರ್ಯಕ್ರಮ ಪ್ರಸಾರವಾಗಲಿದೆ.

Tags:    

Similar News