ಯೂಸರ್ ಮ್ಯಾನುವಲ್ ನೀಡದ ಒನ್ಪ್ಲಸ್ ಕಂಪನಿಗೆ ಗ್ರಾಹಕರಿಗೆ 5,000 ರೂ. ದಂಡ ಪರಿಹಾರ ನೀಡುವಂತೆ ಆದೇಶಿಸಿದ ಕೋರ್ಟ್
ಕಂಪನಿಯ ಆರಂಭಿಕ ನಿರ್ಲಕ್ಷ್ಯದಿಂದ ಬೇಸತ್ತು ಜೂನ್ 3ರಂದು ಬೆಂಗಳೂರು ಒಂದನೇ ಹೆಚ್ಚುವರಿ ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗಕ್ಕೆ ದೂರು ನೀಡಿದ್ದರು.;
ಹೊಸ ಮೊಬೈಲ್ ಫೋನ್ ಖರೀದಿಸುವಾಗ ಬಳಕೆದಾರ ಕೈಪಿಡಿಯನ್ನು (ಯೂಸರ್ ಮ್ಯಾನುವಲ್) ನೀಡದ ತಪ್ಪಿಗೆ ಆ ಗ್ರಾಹಕನಿಗೆ 5,000 ರೂ.ಗಳನ್ನು ಪಾವತಿಸುವಂತೆ ಬೆಂಗಳೂರು ಗ್ರಾಹಕ ನ್ಯಾಯಾಲಯವು ಒನ್ಪ್ಲಸ್ ಇಂಡಿಯಾ ಟೆಕ್ನಾಲಜಿ ಪ್ರೈವೇಟ್ ಲಿಮಿಟೆಡ್ ಕಂಪನಿಗೆ ಆದೇಶಿಸಿದೆ.
ಗ್ರಾಹಕ ನ್ಯಾಯಾಲಯವು ಇದನ್ನು ಕಂಪನಿಯ ಕಡೆಯಿಂದ "ಸಂಪೂರ್ಣ ನಿರ್ಲಕ್ಷ್ಯ ಮತ್ತು ಉದಾಸೀನ ಧೋರಣೆ " ಎಂದು ಅಭಿಪ್ರಾಯಪಟ್ಟಿದೆ. ಯೂಸರ್ ಮ್ಯಾನುಯಲ್ ನೀಡಲು ವಿಳಂಬ ಮಾಡಿರುವುದು ಗ್ರಾಹಕರಿಗೆ ಕೊಟ್ಟಿರುವ ಮಾನಸಿಕ ವೇದನೆ ಎಂದು ಪರಿಗಣಿಸಿದೆ ಎಮದು ಟೈಮ್ಸ್ ಆಫ್ ಇಂಡಿಯಾದ ವರದಿ ಮಾಡಿದೆ.
ವರದಿಯ ಪ್ರಕಾರ, ಬೆಂಗಳೂರಿನ ಸಂಜಯ್ ನಗರದ ನಿವಾಸಿ ಎಸ್.ಎಂ.ರಮೇಶ್ ಅವರು ಡಿಸೆಂಬರ್ 6, 2023 ರಂದು ಒನ್ಪ್ಲಸ್ ನಾರ್ಡ್ ಸಿಇ 3 ಮೊಬೈಲ್ ಫೋನ್ ಖರೀದಿ ಮಾಡಿದ್ದಾರೆ. ಅದಕ್ಕೆ 24,598 ರೂಪಾಯಿ ಪಾವತಿ ಮಾಡಿದ್ದರು. ಆದಾಗ್ಯೂ, ಫೋನ್ನ ವಿವಿಧ ಸೆಟ್ಟಿಂಗ್ಗಳ ಕುರಿತು ವಿವರವಾದ ಮಾಹಿತಿ ನೀಡುವ ಬಳಕೆದಾರ ಕೈಪಿಡಿ ಪುಸ್ತಕವನ್ನು ಅವರಿಗೆ ಕೊಟ್ಟಿರಲಿಲ್ಲ. ಈ ನಿರ್ಣಾಯಕ ಮಾಹಿತಿಯ ಅನುಪಸ್ಥಿತಿಯು ವಾರಂಟಿ ಮಾಹಿತಿ ಮತ್ತು ಕಂಪನಿಯ ವಿಳಾಸದ ಕುರಿತು ಗ್ರಾಹಕರನ್ನು ಗೊಂದಲಕ್ಕೆ ಸಿಲುಕಿಸಿತ್ತು ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ.
ಗ್ರಾಹಕರ ಹಲವಾರು ಪ್ರಯತ್ನಗಳ ನಂತರ, ಒನ್ಪ್ಲಸ್ ಇಂಡಿಯಾ 2024ರ ಏಪ್ರಿಲ್ನಲ್ಲಿ ಅವರಿಗೆ ಬಳಕೆದಾರ ಕೈಪಿಡಿ ತಲುಪಿಸಿತ್ತು. ಆದರೆ, ಕಂಪನಿಯ ಆರಂಭಿಕ ನಿರ್ಲಕ್ಷ್ಯದಿಂದ ಬೇಸತ್ತು ಜೂನ್ 3ರಂದು ಬೆಂಗಳೂರು ಒಂದನೇ ಹೆಚ್ಚುವರಿ ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗಕ್ಕೆ ದೂರು ನೀಡಿದ್ದರು. ನೋಟಿಸ್ ನೀಡಿದರೂ ಕಂಪನಿಯು ವಿಚಾರಣೆಗೆ ಹಾಜರಾಗಲಿಲ್ಲ. ಹೀಗಾಗಿ ಗ್ರಾಹಕರ ನ್ಯಾಯಾಲಯವು ಈ ವಿಷಯವನ್ನು ನಿರ್ಲಕ್ಷ್ಯ ಎಂದು ಗ್ರಾಹಕರ ನ್ಯಾಯಾಲಯ ಅಭಿಪ್ರಾಯಪಟ್ಟಿದೆ.
ಆಯೋಗವು ಎಲ್ಲಾ ದಾಖಲೆಗಳನ್ನು ಪರಿಶೀಲಿಸಿದ ನಂತರ ಗ್ರಾಹಕರಿಗೆ ಬಳಕೆದಾರ ಕೈಪಿಡಿಯನ್ನು ಒದಗಿಸುವುದು ಕಂಪನಿಯ ಕರ್ತವ್ಯ. ಯೂಸರ್ ಮ್ಯಾನುಯಲ್ ನೀಡದ ಕಾರಣ ಅವರು ಮಾನಸಿಕವಾಗಿ ತೊಂದರೆ ಎದುರಿಸಿದ್ದಾರೆ ಎಂದು ಅಭಿಪ್ರಾಯಪಟ್ಟಿತು
ವೆಂಬರ್ 29 ರಂದು ಆಯೋಗವು ಕಂಪನಿಗೆ 5,000 ರೂ.ಗಳನ್ನು ಗ್ರಾಹಕರಿಗೆ ಪರಿಹಾರವಾಗಿ ಮತ್ತು 1,000 ರೂ.ಗಳನ್ನು ವ್ಯಾಜ್ಯ ವೆಚ್ಚ ಪಾವತಿಸುವಂತೆ ಆದೇಶಿಸಿದೆ.