Share Market : ನಾಲ್ಕು ದಿನಗಳ ಕುಸಿತದ ಬಳಿಕ ಷೇರು ಮಾರುಕಟ್ಟೆ ಚೇತರಿಕೆ

Share Market : ಏಷ್ಯಾದ ಮಾರುಕಟ್ಟೆಗಳಲ್ಲಿ, ಸಿಯೋಲ್, ಶಾಂಘೈ ಮತ್ತು ಹಾಂಗ್ ಕಾಂಗ್ ಧನಾತ್ಮಕ ವಹಿವಾಟು ನಡೆಸುತ್ತಿದ್ದರೆ, ಟೋಕಿಯೊ ಷೇರುಪೇಟೆಯಲ್ಲಿ ಕುಸಿತ ಕಂಡಿತು.;

Update: 2025-01-14 05:59 GMT
ಪ್ರಾತಿನಿಧಿಕ ಚಿತ್ರ.

ಷೇರು ಮಾರುಕಟ್ಟೆ ಸತತ 4 ದಿನಗಳ ಕುಸಿತ ಕಂಡಿತ್ತು. ಇದೀಗ ಮುಂಬೈ ಷೇರುಪೇಟೆಯು ಮಂಗಳವಾರದ ಆರಂಭಿಕ ವಹಿವಾಟಿನಲ್ಲಿ ಏರಿಕೆ ದಾಖಲಿಸಿದೆ. ಷೇರು ಸೂಚ್ಯಂಕಗಳಾದ 30 ಷೇರುಗಳ ಬಿಎಸ್‌ಇ ಸೆನ್ಸೆಕ್ಸ್ 449.48 ಪಾಯಿಂಟ್‌ಗಳಷ್ಟು ಏರಿಕೆ ಕಂಡು, 76,779ರಲ್ಲಿ ವಹಿವಾಟು ಆರಂಭಿಸಿದರೆ, ಎನ್‌ಎಸ್‌ಇ ನಿಫ್ಟಿ 141.25 ಅಂಕಗಳಷ್ಟು ಏರಿಕೆ ಕಂಡು 23,227 ರಲ್ಲಿ ವಹಿವಾಟು ಆರಂಭಿಸಿತು.

ಕಳೆದ ನಾಲ್ಕು ದಿನಗಳಲ್ಲಿ ಬಿಎಸ್‌ಇ ಸೆನ್ಸೆಕ್ಸ್ 1,869.1 ಅಂಶಗಳಷ್ಟು ಅಥವಾ ಶೇಕಡ 2.39ರಷ್ಟು ಕುಸಿದಿತ್ತು. 30 ಷೇರುಗಳ ಬ್ಲೂಚಿಪ್ ಎನ್‌ಟಿಪಿಸಿ, ಜೊಮಾಟೊ, ಇಂಡಸ್‌ಇಂಡ್ ಬ್ಯಾಂಕ್, ಟಾಟಾ ಮೋಟಾರ್ಸ್, ಅದಾನಿ ಪೋರ್ಟ್ಸ್ ಮತ್ತು ಬಜಾಜ್ ಫೈನಾನ್ಸ್ ಲಾಭದಲ್ಲಿದೆ. ಎಚ್‌ಸಿಎಲ್ ಟೆಕ್ನಾಲಜೀಸ್ ಶೇಕಡ 9ರಷ್ಟು ಇಳಿಕೆಯಾಗಿದೆ.

30 ಷೇರುಗಳ ಬಿಎಸ್‌ಇ ಸೆನ್ಸೆಕ್ಸ್ ಪೈಕಿ ಟೆಕ್ ಮಹೀಂದ್ರ, ಇನ್ಫೋಸಿಸ್, ಹಿಂದೂಸ್ತಾನ್ ಯೂನಿಲಿವರ್, ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ ಮತ್ತು ನೆಸ್ಲೆ ನಷ್ಟದಲ್ಲಿತ್ತು

ಏಷ್ಯಾದ ಮಾರುಕಟ್ಟೆಗಳಲ್ಲಿ, ಸಿಯೋಲ್, ಶಾಂಘೈ ಮತ್ತು ಹಾಂಗ್ ಕಾಂಗ್ ಧನಾತ್ಮಕ ವಹಿವಾಟು ನಡೆಸುತ್ತಿದ್ದರೆ, ಟೋಕಿಯೊ ಷೇರುಪೇಟೆಯಲ್ಲಿ ಕುಸಿತ ಕಂಡಿತು.

ವಿದೇಶಿ ಸಾಂಸ್ಥಿಕ ಹೂಡಿಕೆದಾರರು (ಎಫ್‌ಐಐ) ಸೋಮವಾರ ₹4,892 ಕೋಟಿ ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದ್ದಾರೆ ಎಂದು ವಿನಿಮಯ ಕೇಂದ್ರದ ಮಾಹಿತಿ ತಿಳಿಸಿದೆ.

Tags:    

Similar News