ಐಟಿ ವಲಯದಲ್ಲಿ ಹೊಸಬರ ನೇಮಕ ಸ್ಥಗಿತ ಸಾಧ್ಯತೆ

Update: 2024-02-05 06:30 GMT

ಐಟಿ ವಲಯದಲ್ಲಿ ಹೊಸಬರ ನೇಮಕ ಸ್ಥಗಿತ ಸಾಧ್ಯತೆ

ರಿಯಲ್ ಎಸ್ಟೇಟ್, ಬ್ಯಾಂಕಿಂಗ್, ತೈಲ ಮತ್ತು ಅನಿಲ ಮತ್ತು ಫರ‍್ಮಾಸ್ಯುಟಿಕಲ್ಸ್‌ನಂತಹ ಉದ್ಯಮ ವಲಯದ ಕಚೇರಿ ಕೆಲಸಗಳಿಗೆ ನೇಮಕಾತಿಯಲ್ಲಿ ಹೆಚ್ಚಳ ಕಂಡಿವೆ.

--

ಮುಂಬೈ, ಡಿ ೧೯ (ಪಿಟಿಐ) ಪ್ರಮುಖ ಐಟಿ ಕಂಪನಿಗಳು ಹೊಸಬರ ನೇಮಕಾತಿಯನ್ನು ಸ್ಥಗಿತಗೊಳಿಸುತ್ತಿದ್ದು, ಪ್ರಸಕ್ತ ಹಣಕಾಸು ರ‍್ಷದಲ್ಲಿ ಹೊಸಬರ ನೇಮಕಾತಿ ಕಡಿಮೆಯಾಗುವ ಸಾಧ್ಯತೆಯಿದೆ ಎಂದು ವರದಿಯೊಂದು ತಿಳಿಸಿದೆ.

ಸರಿಸುಮಾರು ೧.೫ ಮಿಲಿಯನ್ ಐಟಿ/ಟೆಕ್ ಇಂಜಿನಿಯರಿಂಗ್ ಪದವೀಧರರು ಕೆಲಸದ ಹುಡುಕಾಟದಲ್ಲಿದ್ದಾರೆ. ಹಿಂದಿನ ಹಣಕಾಸು ರ‍್ಷದಲ್ಲಿ ೨.೩ ಲಕ್ಷ ಹೊಸಬರಿಗೆ ಹೋಲಿಸಿದರೆ ಈ ಹಣಕಾಸು ರ‍್ಷದಲ್ಲಿ ೧.೫೫ ಲಕ್ಷ ಹೊಸಬರನ್ನು ಐಟಿ/ಟೆಕ್ ವಲಯದಲ್ಲಿ ನೇಮಕ ಮಾಡಿಕೊಳ್ಳುವ ಸಾಧ್ಯತೆಯಿದೆ ಎಂದು ʼಟೀಮ್‌ಲೀಸ್ ಡಿಜಿಟಲ್ʼ ವರದಿ ಹೇಳಿದೆ.

ಜಾಗತಿಕ ಸಾಮರ‍್ಥ್ಯ ಕೇಂದ್ರಗಳು (ಜಿಸಿಸಿ) , ಬ್ಯಾಂಕಿಂಗ್, ಹಣಕಾಸು ಸೇವೆಗಳು ಮತ್ತು ವಿಮೆ (ಬಿಎಫ್‌ಎಸ್‌ಐ), ಸಂವಹನ, ಮಾಧ್ಯಮ ಮತ್ತು ತಂತ್ರಜ್ಞಾನ, ಚಿಲ್ಲರೆ ಮತ್ತು ಗ್ರಾಹಕ ವ್ಯವಹಾರ, ಜೀವ ವಿಜ್ಞಾನ ಮತ್ತು ಆರೋಗ್ಯ ಮತ್ತಿತರ ತಾಂತ್ರಿಕೇತರ ವಲಯಗಳು ಸೇರಿದಂತೆ ಇತರ ವಿಭಾಗಗಳು ಹೊಸಬರ ನೇಮಕಾತಿಯನ್ನು ವಿಸ್ತರಿಸಿವೆ.

ತಂತ್ರಜ್ಞಾನ ಪ್ರಪಂಚವು ವೇಗವಾಗಿ ಅಭಿವೃದ್ಧಿ ಹೊಂದುತ್ತಿದ್ದು, ಇದರಲ್ಲಿ ನಾವು ಮುಂದುವರಿಯಬೇಕಾಗಿದೆ. ಇದು ಕಂಪನಿಗಳು ತಮ್ಮ ನೇಮಕಾತಿ ಪರಿಧಿಯನ್ನು ವಿಸ್ತರಿಸುವುದರ ಬಗ್ಗೆ ಮಾತ್ರವಲ್ಲ, ನಮ್ಮ ದೇಶದ ಪ್ರತಿಭೆಗಳು ಅದಕ್ಕೆ ಸಿದ್ಧವಾಗಿದೆ ಎಂಬುವುದನ್ನು ತಿಳಿದುಕೊಳ್ಳಬೇಕು. ಉದ್ಯಮ, ಶೈಕ್ಷಣಿಕ ಮತ್ತು ರ‍್ಕಾರದ ಸಹಯೋಗದ ಪ್ರಯತ್ನಗಳು ಸಂಬಂಧಿತ ಕಾರ‍್ಯಕ್ರಮಗಳು ಪಠ್ಯಕ್ರಮಗಳನ್ನು ವಿನ್ಯಾಸಗೊಳಿಸಲು ಕಾರಣವಾಗುತ್ತವೆ ಎಂದು ಟೀಮ್‌ ಲೀಸ್  ಡಿಜಿಟಲ್ ಬಿಸಿನೆಸ್ ‌ಮುಖ್ಯಸ್ಥ ಕೃಷ್ಣ ವಿಜ್ ಹೇಳಿದ್ದಾರೆ.

Similar News