GST | ತಂಪು ಪಾನೀಯ, ಸಿಗರೇಟ್​ ಮೇಲಿನ ಜಿಎಸ್​ಟಿ ಶೇಕಡಾ 35ಕ್ಕೆ ಏರಿಕೆ

ಬಿಹಾರ ಉಪಮುಖ್ಯಮಂತ್ರಿ ಸಾಮ್ರಾಟ್ ಚೌಧರಿ ನೇತೃತ್ವದ ಸಚಿವರ ತಂಡ (GOM) ಉಡುಪುಗಳ ಮೇಲಿನ ತೆರಿಗೆ ದರಗಳನ್ನೂ ಬದಲಾಯಿಸಿ ಜಿಎಸ್​ಟಿ ಕೌನ್ಸಿಲ್​ಗೆ ಪ್ರಸ್ತಾಪ ಸಲ್ಲಿಸಲು ನಿರ್ಧರಿಸಿದೆ.;

Update: 2024-12-03 06:50 GMT
GST on cigarettes, tobacco, fizzy drinks may go up to 35%

ಕಾರ್ಬೋನೇಟೆಡ್​ ತಂಪು ಪಾನೀಯಗಳು, ಸಿಗರೇಟುಗಳು, ತಂಬಾಕು ಮತ್ತು ಸಂಬಂಧಿತ ಉತ್ಪನ್ನಗಳಂತಹ ಸರಕುಗಳ ಮೇಲಿನ ಸರಕು ಮತ್ತು ಸೇವಾ ತೆರಿಗೆ (ಜಿಎಸ್​​ಟಿ) ಪ್ರಸ್ತುತ ಇರುವ ಶೇ.28ರಿಂದ ಶೇ.35ಕ್ಕೆ ಹೆಚ್ಚಿಸಲು ಜಿಎಸ್​​ಟಿ ದರ ನಿರ್ಧರಿಸುವ ಸಚಿವರ ಸಮಿತಿ (GOM) ಸೋಮವಾರ ತೀರ್ಮಾನಿಸಿದೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. ಹೀಗಾಗಿ ಇನ್ನು ಮುಂದೆ ಜಿಎಸ್​ಟಿಯ ಸ್ಲ್ಯಾಬ್​ ಒಟ್ಟು 5ಕ್ಕೆ ಏರಲಿದೆ. ಇದುವರೆಗೆ 5, 12, 18 ಮತ್ತು 28 ಶೇಕಡಾದ ಸ್ಲ್ಯಾಬ್​ಗಳಿದ್ದವು.

ಬಿಹಾರ ಉಪಮುಖ್ಯಮಂತ್ರಿ ಸಾಮ್ರಾಟ್ ಚೌಧರಿ ನೇತೃತ್ವದ ದರ ನಿರ್ಧಾರ ಮಾಡುವ ಸಚಿವರ ಗುಂಪು (GOM) ಉಡುಪುಗಳ ಮೇಲಿನ ತೆರಿಗೆ ದರಗಳನ್ನೂ ಬದಲಾಯಿಸಲು ನಿರ್ಧರಿಸಿದೆ.

1,500 ರೂ.ವರೆಗಿನ ಸಿದ್ಧ ಉಡುಪುಗಳಿಗೆ (ರೆಡಿಮೇಡ್​) ಶೇ.5, 1,500 ರೂ.ನಿಂದ 10,000 ರೂ.ವರೆಗಿನ ಸಿದ್ಧ ಉಡುಪುಗಳಿಗೆ ಶೇ.18ರಷ್ಟು ಜಿಎಸ್ಟಿ ವಿಧಿಸಲಾಗುವುದು. 10,000 ರೂ.ಗಿಂತ ಹೆಚ್ಚಿನ ಬೆಲೆಯ ಉಡುಪುಗಳಿಗೆ ಶೇಕಡಾ 28 ರಷ್ಟು ತೆರಿಗೆ ವಿಧಿಸಲು ನಿರ್ಧರಿಸಿದೆ.

ಜಿಒಎಂ 148 ವಸ್ತುಗಳ ಮೇಲಿನ ತೆರಿಗೆ ದರ ಬದಲಾವಣೆಗಳನ್ನು ಜಿಎಸ್ಟಿ ಮಂಡಳಿಗೆ ಪ್ರಸ್ತಾಪಿಸಲಿದೆ. ವರದಿಯನ್ನು ಡಿಸೆಂಬರ್ 21ರಂದು ಕೇಂದ್ರ ಹಣಕಾಸು ಸಚಿವರ ಅಧ್ಯಕ್ಷತೆಯಲ್ಲಿ ನಡೆಯುವ ಜಿಎಸ್ಟಿ ಮಂಡಳಿ ಸಭೆಯ ಮುಂದೆ ಬರಲಿದೆ. ಜಿಎಸ್ಟಿ ದರ ಬದಲಾವಣೆಗಳ ಬಗ್ಗೆ ಕೌನ್ಸಿಲ್ ಅಂತಿಮ ನಿರ್ಧಾರ ತೆಗೆದುಕೊಳ್ಳುತ್ತದೆ.

"ತಂಬಾಕು ಮತ್ತು ಸಂಬಂಧಿತ ಉತ್ಪನ್ನಗಳು ಮತ್ತು ತಂಪು ಪಾನೀಯಗಳ ಮೇಲೆ ಶೇಕಡಾ 35 ರಷ್ಟು ವಿಶೇಷ ದರವನ್ನು ಪ್ರಸ್ತಾಪಿಸಲು ಜಿಒಎಂ ಒಪ್ಪಿಕೊಂಡಿದೆ. 5, 12, 18 ಮತ್ತು 28 ಪ್ರತಿಶತ ಎಂಬ ನಾಲ್ಕು ಹಂತದ ತೆರಿಗೆ ಸ್ಲ್ಯಾಬ್ ಮುಂದುವರಿಯುತ್ತದೆ. ಶೇಕಡಾ 35 ರಷ್ಟು ಹೊಸ ದರವನ್ನು ಜಿಒಎಂ ಪ್ರಸ್ತಾಪಿಸಿದೆ ಎಂದು ಅಧಿಕಾರಿ ತಿಳಿಸಿದ್ದಾರೆ. ಪ್ರಸ್ತುತ, ಜಿಎಸ್ಟಿ ನಾಲ್ಕು ಹಂತದ ತೆರಿಗೆ ರಚನೆಯಾಗಿದ್ದು, ಶೇಕಡಾ 5, 12, 18 ಮತ್ತು 28 ರ ಸ್ಲ್ಯಾಬ್​ಗಳನ್ನು ಹೊಂದಿದೆ.

ಅಗತ್ಯ ವಸ್ತುಗಳಿಗೆ ಇಳಿಕೆ

ಜಿಎಸ್​ಟಿ ಅಡಿಯಲ್ಲಿ ಅಗತ್ಯ ವಸ್ತುಗಳಿಗೆ ವಿನಾಯಿತಿ ನೀಡಲಾಗುತ್ತದೆ. ಅವುಗಳು ಕಡಿಮೆ ಸ್ಲ್ಯಾಬ್​ಗಳಿಗೆ ಹೋಗುತ್ತವೆ. ಐಷಾರಾಮಿ ವಸ್ತುಗಳು ಹೆಚ್ಚಿನ ಸ್ಲ್ಯಾಬ್​ಗೆ ಏರಲಿದೆ. ಐಷಾರಾಮಿ ವಸ್ತುಗಳಾದ ಕಾರು, ವಾಷಿಂಗ್ ಮಷಿನ್ ಮತ್ತು ಸಂಗ್ರಹದ ನೀರು ಮತ್ತು ತಂಬಾಕು ಉತ್ಪನ್ನಗಳುಗ ಶೇಕಡಾ 28 ರ ಸ್ಲ್ಯಾಬ್ ಮೇಲೆ ಸೆಸ್ ಮೇಲೆ ಏರುತ್ತದೆ.

ಜಿಎಂಒ ಸೋಮವಾರ ತನ್ನ ವರದಿಯನ್ನು ಕೌನ್ಸಿಲ್ ಮುಂದೆ ಪ್ರಸ್ತುತಪಡಿಸಲು ಅಂತಿಮಗೊಳಿಸಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.

ಅಕ್ಟೋಬರ್​ 19ರಂದು ನಡೆದ ಹಿಂದಿನ ಸಭೆಯಲ್ಲಿ, 20 ಲೀಟರ್ ಮತ್ತು ಅದಕ್ಕಿಂತ ಹೆಚ್ಚಿನ ಪ್ಯಾಕೇಜ್ಡ್ ಕುಡಿಯುವ ನೀರಿನ ಮೇಲಿನ ಜಿಎಸ್ಟಿಯನ್ನು ಶೇಕಡಾ 18 ರಿಂದ 5 ಕ್ಕೆ ಇಳಿಸಲು ಜಿಒಎಂ ಪ್ರಸ್ತಾಪಿಸಿತ್ತು. 10,000 ರೂ.ಗಿಂತ ಕಡಿಮೆ ಬೆಲೆಯ ಬೈಸಿಕಲ್ ಗಳ ಮೇಲಿನ ಜಿಎಸ್ ಟಿಯನ್ನು ಶೇ.12ರಿಂದ ಶೇ.5ಕ್ಕೆ ಇಳಿಸಲು ಪ್ರಸ್ತಾಪ ಸಲ್ಲಿಸಿತ್ತು.

ನೋಟ್​ಬುಕ್​ಗಳ ಮೇಲಿನ ಜಿಎಸ್ಟಿಯನ್ನು ಶೇಕಡಾ 12 ರಿಂದ 5 ಕ್ಕೆ ಇಳಿಸಲಾಗುವುದು. 15,000 ರೂ.ಗಿಂತ ಹೆಚ್ಚಿನ ಶೂಗಳ ಮೇಲಿನ ಜಿಎಸ್ಟಿಯನ್ನು ಶೇಕಡಾ 18 ರಿಂದ 28 ಕ್ಕೆ ಹೆಚ್ಚಿಸಲು ಜಿಒಎಂ ಪ್ರಸ್ತಾಪಿಸಿದೆ. ಹಿಂದಿನ ಸಭೆಯಲ್ಲಿ 25,000 ರೂ.ಗಿಂತ ಹೆಚ್ಚಿನ ಕೈಗಡಿಯಾರಗಳ ಮೇಲಿನ ಜಿಎಸ್ಟಿಯನ್ನು ಶೇಕಡಾ 18 ರಿಂದ 28 ಕ್ಕೆ ಹೆಚ್ಚಿಸಲು ಪ್ರಸ್ತಾಪಿಸಲಾಗಿತ್ತು. 

Tags:    

Similar News