ಬೋಯಿಂಗ್ 737 ಜೆಟ್‌ಲೈನರ್‌ ಮುಖ್ಯಸ್ಥ ಹೊರಕ್ಕೆ

ಬೋಯಿಂಗ್ 737 ಮ್ಯಾಕ್ಸ್ ಕಾರ್ಯಕ್ರಮದ ಮುಖ್ಯಸ್ಥ ಕಂಪನಿಯನ್ನು ತೊರೆಯುತ್ತಿದ್ದಾರೆ ಹಾಗೂ ಈ ವಿಭಾಗಕ್ಕೆ ಹೊಸ ಮುಖ್ಯಸ್ಥರನ್ನು ನೇಮಿಸಲಾಗುವುದು ಎಂದು ಬೋಯಿಂಗ್ ಹೇಳಿದೆ.;

Update: 2024-02-22 11:19 GMT
ಅಲಾಸ್ಕಾ ಏರ್‌ಲೈನ್‌ ಬೋಯಿಂಗ್ 737-9 ಮ್ಯಾಕ್ಸ್ ಆಗಸಕ್ಕೆ ಜಿಗಿದ ಕೆಲವೇ ನಿಮಿಷಗಳಲ್ಲಿ ಅದರ ಬಾಗಿಲು ಹಾರಿಹೋಗಿತ್ತು.
Click the Play button to listen to article

ಸಿಯಾಟಲ್: ಬೋಯಿಂಗ್ 737 ಮ್ಯಾಕ್ಸ್ ಕಾರ್ಯಕ್ರಮದ ಮುಖ್ಯಸ್ಥ ಕಂಪನಿಯನ್ನು ತೊರೆಯುತ್ತಿದ್ದಾರೆ ಹಾಗೂ ಈ ವಿಭಾಗಕ್ಕೆ ಹೊಸ ಮುಖ್ಯಸ್ಥರನ್ನು ನೇಮಿಸಲಾಗುವುದು ಎಂದು ಬೋಯಿಂಗ್ ಹೇಳಿದೆ.

ಇಡಿ ಕ್ಲಾರ್ಕ್ 18 ವರ್ಷಗಳಿಂದ ಬೋಯಿಂಗ್‌ ಎಂದು ಕಂಪನಿ ತಿಳಿಸಿದೆ. ಕೇಟೀ ರಿಂಗ್‌ಗೋಲ್ಡ್‌ ಅವರು 737 ಮ್ಯಾಕ್ಸ್ ನ ಉಪಾಧ್ಯಕ್ಷ ಮತ್ತು ಜನರಲ್ ಮ್ಯಾನೇಜರ್ ಆಗಿದ್ದರು.

ಹೆಚ್ಚಿನ ಸಂಖ್ಯೆಯ ವಿಮಾನಗಳನ್ನು ಉತ್ಪಾದಿಸಬೇಕೆಂಬ ಒತ್ತಡದಿಂದ ಬೋಯಿಂಗ್  ಸುರಕ್ಷತೆಗೆ ಸಾಕಷ್ಟು ಗಮನ ನೀಡುತ್ತಿಲ್ಲ ಎಂದು ಫೆಡರಲ್ ಏವಿಯೇಷನ್ ಅಡ್ಮಿನಿಸ್ಟ್ರೇಷನ್ ಮುಖ್ಯಸ್ಥರು ವಾರಗಳ ಹಿಂದೆ ಹೇಳಿದ್ದರು.

ಜನವರಿಯಲ್ಲಿ ಅಲಾಸ್ಕಾ ಏರ್‌ಲೈನ್‌ ಬೋಯಿಂಗ್ 737-9 ಮ್ಯಾಕ್ಸ್ ಗಗನಕ್ಕೆ ಜಿಗಿದ ಕೆಲವೇ ನಿಮಿಷಗಳಲ್ಲಿ ಅದರ ಒಂದು ಬಾಗಿಲು ಗಾಳಿಯಲ್ಲಿ ಹಾರಿಹೋಗಿತ್ತು.

ಎಲಿಜಬೆತ್ ಲುಂಡ್ ಅವರನ್ನು ಹಿರಿಯ ಉಪಾಧ್ಯಕ್ಷರ ಸ್ಥಾನಕ್ಕೆ ನೇಮಿಸಿದೆ. ಅವರು ಗುಣಮಟ್ಟದ ನಿಯಂತ್ರಣ ಮತ್ತು ಕಾಯ್ದುಕೊಳ್ಳುವಿಕೆ ಪ್ರಯತ್ನಗಳನ್ನು ಮುನ್ನಡೆಸುತ್ತಾರೆ.

Tags:    

Similar News