ವಿಮಾನ ಇಂಧನ ಬೆಲೆ ಇಳಿಕೆ, ವಾಣಿಜ್ಯ ಸಿಲಿಂಡರ್ ಬೆಲೆ ಹೆಚ್ಚಳ
ರ್ಕಾರಿ ಸ್ವಾಮ್ಯದ ಇಂಧನ ಚಿಲ್ಲರೆ ವ್ಯಾಪಾರಿಗಳ ಬೆಲೆ ಅಧಿಸೂಚನೆ ಪ್ರಕಾರ, ವಿಮಾನಯಾನ ಟರ್ಬೈನ್ ಇಂಧನ(ಎಟಿಎಫ್) ಬೆಲೆಯನ್ನು ದಿಲ್ಲಿಯಲ್ಲಿ ಪ್ರತಿ ಕಿಲೋಲೀಟರ್ಗೆ 1,11,344.92 ರೂ. ನಿಂದ 1,06,155.67 ರೂ.ಗೆ ಇಳಿಸಲಾಗಿದೆ.ಆದರೆ, ವಾಣಿಜ್ಯ ಬಳಕೆ ಸಿಲಿಂಡರ್ ಬೆಲೆ 21 ರೂ.ಹೆಚ್ಚಳಗೊಂಡಿದೆ.
ಕಳೆದ ಒಂದು ತಿಂಗಳಲ್ಲಿ ಜೆಟ್ ಇಂಧನ ಬೆಲೆ ಎರಡನೇ ಬಾರಿ ಕಡಿಮೆಯಾಗಿದೆ. ಆದರೆ, ವಾಣಿಜ್ಯ ಅಡುಗೆ ಅನಿಲದ 19 ಕೆಜಿ ಸಿಲಿಂಡರ್ ದರ 21 ರೂ.ಹೆಚ್ಚಿದೆ. ಗೃಹಬಳಕೆಯ ಎಲ್ಪಿಜಿ 14.2 ಕೆಜಿ ಸಿಲಿಂಡರ್ ದರದಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ವಾಣಿಜ್ಯ ಎಲ್ಪಿಜಿ 19 ಕೆಜಿ ಸಿಲಿಂಡರ್ ಬೆಲೆಯನ್ನು 1,775.50 ರೂ.ನಿಂದ 1,796.50 ರೂ.ಗೆ ಹೆಚ್ಚಿಸಲಾಗಿದೆ.