123456 ಅತ್ಯಂತ ಕೆಟ್ಟ ಪಾಸ್ ವರ್ಡ್
ನವದೆಹಲಿ(ಪಿಟಿಐ): 123456 ಅತ್ಯಂತ ಕೆಟ್ಟ ಪಾಸ್ ವರ್ಡ್ ಆಗಿದ್ದು, ನಂತರದ ಸ್ಥಾನ ಅಡ್ಮಿನ್ ಮತ್ತು 12345678 ಎಂದು ಸಾಫ್ಟ್ವೇರ್ ಕಂಪನಿಯೊಂದು ನಡೆಸಿದ ಅಧ್ಯಯನ ಹೇಳಿದೆ.
ಸಾಫ್ಟ್‌ವೇರ್ ಕಂಪನಿ ನರ‍್ಡ್ಪಾಸ್ (Nordpass) ನಡೆಸಿದ ಅಧ್ಯಯನದಲ್ಲಿ ʻ123456ʼ ಎಂಬ ಪಾಸ್‌ವರ್ಡ್ ಅನ್ನು 45 ಲಕ್ಷ ಖಾತೆಗಳು ಹೊಂದಿದ್ದವು . ಬಳಕೆದಾರರು ವೆಬ್‌ಸೈಟ್‌ಗಳು ಅಥವಾ ಸೇವೆಗಳಾದ್ಯಂತ ಒಂದೇ ಪಾಸ್‌ವರ್ಡ್ ಬಳಕೆ ಮಾಡುವುದನ್ನು ತಡೆಯಬೇಕೆಂದು ಸಂಸ್ಥೆ ಹೇಳಿದೆ. ಇದರಿಂದ ಇತರ ಎಲ್ಲಾ ಖಾತೆಗಳ ಸುರಕ್ಷತೆಗೆ ಅಪಾಯ ಉಂಟುಮಾಡುತ್ತದೆ.
ಒಬ್ಬ ಹ್ಯಾಕರ್ ʻ123456ʼ ನ್ನು ಭೇದಿಸಲು ಒಂದು ಸೆಕೆಂಡ್‌ಗಿಂತ ಕಡಿಮೆ ಸಮಯ ತೆಗೆದುಕೊಳ್ಳುತ್ತಾನೆ ಎಂದು ಪನಾಮ ಮೂಲದ ನರ‍್ಡ್ಪಾಸ್ ನಡೆಸಿದ ಅಧ್ಯಯನ ಹೇಳಿದೆ. 123456 ಪಾಸ್‌ವರ್ಡ್ ನ್ನು ಸುಮಾರು 45 ಲಕ್ಷ ಖಾತೆಗಳು ಹೊಂದಿದ್ದವು. ಕಂಪನಿಯ ವೆಬ್‌ಸೈಟ್ ಪ್ರಕಾರ, ಸೈಬರ್ ಸುರಕ್ಷತೆ ಘಟನೆಗಳನ್ನು ಸಂಶೋಧಿ ಸುವಲ್ಲಿ ಪರಿಣತಿ ಹೊಂದಿರುವ ಸ್ವತಂತ್ರ ತಜ್ಞರ ಸಹಭಾಗಿತ್ವದಲ್ಲಿ ಅಧ್ಯಯನವನ್ನು ನಡೆಸಲಾಗಿದೆ. ಎರಡನೇ ಮತ್ತು ಮೂರನೇ ಅತ್ಯಂತ ಜನಪ್ರಿಯ ಪಾಸ್‌ವರ್ಡ್‌ಗಳಾದ ʻಅಡ್ಮಿನ್ʼ ಮತ್ತು ʻ12345678ʼನ್ನು ಕ್ರಮವಾಗಿ ಸುಮಾರು 40 ಲಕ್ಷ ಮತ್ತು 13.7 ಲಕ್ಷ ಖಾತೆಗಳಲ್ಲಿ ಬಳಸಲಾಗಿದೆ ಎಂದು ತಿಳಿದುಬಂದಿದೆ.
ಇಂಡಿಯದಲ್ಲಿ ಅತ್ಯಂತ ಸಾಮಾನ್ಯವಾದ ಪಾಸ್‌ವರ್ಡ್ ʻ123456ʼ. ಸುಮಾರು 3.6 ಲಕ್ಷ ಖಾತೆಗಳಲ್ಲಿ ಬಳಸಲಾಗಿದೆ. ನಂತರದ ಸ್ಥಾನ ʻಅಡ್ಮಿನ್ʼ ಸುಮಾರು 1.2 ಲಕ್ಷ ಖಾತೆಗಳಲ್ಲಿ ಬಳಸಲಾಗಿದೆ ಎಂದು ವೆಬ್‌ಸೈಟ್ ತಿಳಿಸಿದೆ.
ಸಂಶೋಧನಾ ತಂಡವು 6.6 ಟೆರಾಬೈಟ್ ದತ್ತಾಂಶ ಮೂಲದಿಂದ ಪಾಸ್‌ವರ್ಡ್‌ಗಳನ್ನು ವಿಶ್ಲೇಷಿಸಿದೆ. 35 ದೇಶಗಳ ದತ್ತಾಂಶವನ್ನು ತಂಡ ಪರಿಶೀಲಿಸಿದೆ. ಅಧ್ಯಯನ ನಡೆಸಲು ನರ್ಡ್‌ಪಾಸ್ ಯಾವುದೇ ವೈಯಕ್ತಿಕ ಡೇಟಾವನ್ನು ಸ್ವಾಧೀನಪಡಿಸಿಕೊಂಡಿಲ್ಲ ಅಥವಾ ಖರೀದಿಸಿಲ್ಲ ಎಂದು ವೆಬ್‌ಸೈಟ್ ಹೇಳಿದೆ.