ಸಂಕಷ್ಟದಲ್ಲಿರುವ ಮಹಿಳೆಯರಿಗೆ ʼಗ್ಯಾರಂಟಿʼ ಆಸರೆ: ಸೋನಿಯಾ ಗಾಂಧಿ
ಕಾಂಗ್ರೆಸ್‌ನ ʻಖಾತರಿʼಗಳು ಈಗಾಗಲೇ ಕರ್ನಾಟಕ ಮತ್ತು ತೆಲಂಗಾಣದಲ್ಲಿ ಕೋಟ್ಯಂತರ ಕುಟುಂಬಗಳನ್ನು ಬದಲಿಸಿದೆ. ನರೇಗಾ, ಮಾಹಿತಿ ಹಕ್ಕು, ಶಿಕ್ಷಣದ ಹಕ್ಕು ಅಥವಾ ಆಹಾರ ಭದ್ರತೆಯಂತಹ ಯೋಜನೆಗಳ ಮೂಲಕ ಕಾಂಗ್ರೆಸ್ ಲಕ್ಷಾಂತರ ಭಾರತೀಯರನ್ನು ಸಬಲೀಕರಣಗೊಳಿಸಿದೆ. ʻಮಹಾ ಲಕ್ಷ್ಮಿ' ನಮ್ಮ ಕೆಲಸವನ್ನು ಮುಂದಕ್ಕೆ ಕೊಂಡೊಯ್ಯುವ ಇತ್ತೀಚಿನ ಭರವಸೆʼ ಎಂದು ಸೋನಿಯಾ ಗಾಂಧಿ ಎಕ್ಸ್ ನಲ್ಲಿ ಹೇಳಿದ್ದಾರೆ.;
ಪಕ್ಷದ ಚುನಾವಣೆ ಪ್ರಣಾಳಿಕೆಯಲ್ಲಿರುವ ʻಖಾತರಿಗಳುʼ ಈ ಸವಾಲಿನ ಕಾಲದ ಪರಿಸ್ಥಿತಿಯಲ್ಲಿ ಸಕಾರಾತ್ಮಕ ಪರಿಣಾಮ ಬೀರುತ್ತವೆ ಎಂದು ಕಾಂಗ್ರೆಸ್ ಸಂಸದೀಯ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಸೋಮವಾರ ಭರವಸೆ ನೀಡಿದರು.
ಸಾಮಾಜಿಕ ಮಾಧ್ಯಮದಲ್ಲಿ ಕಾಂಗ್ರೆಸ್ ಹಂಚಿಕೊಂಡಿರುವ ವೀಡಿಯೊ ಸಂದೇಶದಲ್ಲಿ, ʻದೇಶದ ಮಹಿಳೆಯರು ಸಂಕಷ್ಟದ ಸಮಯದಲ್ಲಿ ಕಠಿಣ ಸವಾಲು ಎದುರಿಸುತ್ತಿದ್ದಾರೆ. ಪಕ್ಷದ 'ಮಹಾಲಕ್ಷ್ಮಿ ಯೋಜನೆ' ಅವರ ಜೀವನವನ್ನು ಬದಲಿಸಲು ಸಹಾಯ ಮಾಡುತ್ತದೆʼ ಎಂದು ಹೇಳಿದರು.
ʻಪ್ರೀತಿಯ ಸಹೋದರಿಯರೇ, ಸ್ವಾತಂತ್ರ್ಯ ಹೋರಾಟದಿಂದ ಆರಂಭಿಸಿ ಆಧುನಿಕ ಭಾರತ ನಿರ್ಮಾಣದವರೆಗೆ ಮಹಿಳೆಯರು ಅಪಾರ ಕೊಡು ಗೆ ನೀಡಿದ್ದಾರೆ. ಆದರೆ, ಈಗ ಮಹಿಳೆಯರು ತೀವ್ರ ಹಣದುಬ್ಬರದಿಂದ ಬಿಕ್ಕಟ್ಟು ಎದುರಿಸುತ್ತಿದ್ದಾರೆ. ಕಾಂಗ್ರೆಸ್ ಅವರ ಶ್ರಮ ಮತ್ತು ತಪಸ್ಸಿಗೆ ನ್ಯಾಯ ಸಲ್ಲಿಸಲಿದೆʼ ಎಂದು ಹೇಳಿದರು.
ʻಮಹಾಲಕ್ಷ್ಮಿ ಯೋಜನೆಯಡಿ ಬಡ ಕುಟುಂಬದ ಮಹಿಳೆಗೆ ನಾವು ಪ್ರತಿ ವರ್ಷ 1 ಲಕ್ಷ ರೂ. ನೀಡುತ್ತೇವೆ. ಕಾಂಗ್ರೆಸ್‌ನ ʻಖಾತರಿʼಗಳು ಈಗಾಗಲೇ ಕರ್ನಾಟಕ ಮತ್ತು ತೆಲಂಗಾಣದಲ್ಲಿ ಕೋಟ್ಯಂತರ ಕುಟುಂಬಗಳನ್ನು ಬದಲಿಸಿದೆ. ನರೇಗಾ, ಮಾಹಿತಿ ಹಕ್ಕು, ಶಿಕ್ಷಣದ ಹಕ್ಕು ಅಥವಾ ಆಹಾರ ಭದ್ರತೆಯಂತಹ ಯೋಜನೆಗಳ ಮೂಲಕ ಕಾಂಗ್ರೆಸ್ ಲಕ್ಷಾಂತರ ಭಾರತೀಯರನ್ನು ಸಬಲೀಕರಣಗೊಳಿಸಿದೆ. ʻಮಹಾ ಲಕ್ಷ್ಮಿ' ನಮ್ಮ ಕೆಲಸವನ್ನು ಮುಂದಕ್ಕೆ ಕೊಂಡೊಯ್ಯುವ ಇತ್ತೀಚಿನ ಭರವಸೆʼ ಎಂದು ಸೋನಿಯಾ ಗಾಂಧಿ ಎಕ್ಸ್ ನಲ್ಲಿ ಹೇಳಿದ್ದಾರೆ.
ಪೋಸ್ಟ್ ಹಂಚಿಕೊಂಡ ಖರ್ಗೆ, ರಾಹುಲ್ : ಸೋನಿಯಾ ಅವರ ಮನವಿಯನ್ನು ಕಾಂಗ್ರೆಸ್ ಮುಖ್ಯಸ್ಥ ಮಲ್ಲಿಕಾರ್ಜುನ ಖರ್ಗೆ, ಪಕ್ಷದ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಮತ್ತು ಪಕ್ಷದ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ತಮ್ಮ ಎಕ್ಸ್ ಹ್ಯಾಂಡಲ್‌ಗಳಲ್ಲಿ ಹಂಚಿಕೊಂಡಿದ್ದಾರೆ.
ರಾಹುಲ್ ಗಾಂಧಿ ಅವರು ಸಂದೇಶವನ್ನು ಹಂಚಿಕೊಂಡು,ʻ ಮಹಿಳೆಯರೇ, ನಿಮ್ಮ ಒಂದು ಮತ ಹಣದುಬ್ಬರ ಮತ್ತು ನಿರುದ್ಯೋಗದಿಂದ ಹೋರಾಡುತ್ತಿರುವವರ ಜೀವರಕ್ಷಕವಾಗಲಿದೆ. ಪ್ರತಿ ತಿಂಗಳು 8,500 ರೂ. ನೇರವಾಗಿ ಬ್ಯಾಂಕ್ ಖಾತೆಗಳಿಗೆ ಜಮಾ ಮಾಡಲಾಗುತ್ತದೆ.ಇದರಿಂದ, ಆರ್ಥಿಕ ಸ್ವಾವಲಂಬನೆ ಮತ್ತು ಕುಟುಂಬದ ನಿರ್ವಹಣೆಗೆ ನೆರವಾಗುತ್ತದೆ,ʼ ಎಂದು ಬರೆದಿದ್ದಾರೆ.