ಪ್ರಧಾನಿ ಹೆದರಿದ್ದಾರೆ, ವೇದಿಕೆಯಲ್ಲೇ ಕಣ್ಣೀರು ಹಾಕಬಹುದು: ರಾಹುಲ್ ಗಾಂಧಿ

Update: 2024-04-26 12:12 GMT

ವಿಜಯಪುರ (ಕರ್ನಾಟಕ), ಏ. 26 - ʻಕಾಂಗ್ರೆಸ್‌ ದಾಳಿಯಿಂದ ಪ್ರಧಾನಿ ಹೆದರಿದ್ದಾರೆ ಮತ್ತು ವೇದಿಕೆ ಮೇಲೆ ಕಣ್ಣೀರು ಹಾಕಬಹುದುʼ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಶುಕ್ರವಾರ ವಾಗ್ದಾಳಿ ನಡೆಸಿದರು. 

ಜಿಲ್ಲಾ ಕೇಂದ್ರದಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿ,ʻನೀವು ಪ್ರಧಾನಿಯವರ ಭಾಷಣಗಳನ್ನು ಕೇಳಿದ್ದೀರಿ. ಅವರು ಹೆದರಿದ್ದಾ ರೆ. ಅವರು ವೇದಿಕೆ ಮೇಲೆ ಕಣ್ಣೀರು ಹಾಕುವ ಸಾಧ್ಯತೆಯಿದೆ,ʼ ಎಂದು ಹೇಳಿದರು. ʻಮಂಗಲಸೂತ್ರʼ, ʻಸಂಪತ್ತಿನ ಮರುಹಂಚಿಕೆʼ ಮತ್ತು ʻಪಿತ್ರಾರ್ಜಿತ ಆಸ್ತಿ ತೆರಿಗೆʼ ಮತ್ತಿತರ ವಿಷಯಗಳಲ್ಲಿ ಕಾಂಗ್ರೆಸ್‌ ನ್ನು ಗುರಿಯಾಗಿಸಿಕೊಂಡು ಪ್ರಧಾನಿ ದಾಳಿ ನಡೆಸುತ್ತಿದ್ದಾರೆ. 

ʻಮೋದಿ ಅವರು ವಿವಿಧ ವಿಧಾನಗಳ ಮೂಲಕ ಸಾರ್ವಜನಿಕರ ಗಮನವನ್ನು ಬೇರೆಡೆ ಸೆಳೆಯಲು ಪ್ರಯತ್ನಿಸುತ್ತಾರೆ. ಕೆಲವೊಮ್ಮೆ ಚೀನಾ ಮತ್ತು ಪಾಕಿಸ್ತಾನದ ಬಗ್ಗೆ ಮಾತನಾಡುತ್ತಾರೆ. ಮತ್ತು ಕೆಲವೊಮ್ಮೆ ಅವರು ನಿಮಗೆ ತಟ್ಟೆಗಳನ್ನು ಬಡಿಯುವಂತೆ ಹೇಳುತ್ತಾರೆ ಇಲ್ಲವೇ ಮೊಬೈಲ್ ಫೋನ್‌ಗಳ ಟಾರ್ಚ್ ಲೈಟ್ ಅನ್ನು ಬೆಳಗಲು ಕೇಳುತ್ತಾರೆ ʼ ಎಂದು ಗಾಂಧಿ ಹೇಳಿದರು. 

ʻಬಡತನ, ನಿರುದ್ಯೋಗ ಮತ್ತು ಬೆಲೆ ಏರಿಕೆ ಸೇರಿದಂತೆ ದೇಶದಲ್ಲಿ ಮೂರ್ನಾಲ್ಕು ಪ್ರಮುಖ ಸಮಸ್ಯೆಗಳಿವೆ. ಕಾಂಗ್ರೆಸ್ಸಿಗೆ ಮಾತ್ರ ನಿರುದ್ಯೋಗ ವನ್ನು ತೊಡೆದುಹಾಕಲು, ಬೆಲೆ ಏರಿಕೆ ನಿಯಂತ್ರಿಸಲು ಮತ್ತು ಜನರಿಗೆ ಅವರ ಪಾಲು ನೀಡಲು ಸಾಧ್ಯʼ ಎಂದು ಗಾಂಧಿ ಹೇಳಿದರು. ʻಮೋದಿ ಬಡವರ ಹಣವನ್ನು ಕಿತ್ತುಕೊಂಡಿದ್ದಾರೆ. ಕೆಲವು ಕೋಟ್ಯಧಿಪತಿಗಳನ್ನುಉದ್ಧರಿಸಿದ್ದಾರೆ. ದೇಶದ 70 ಕೋಟಿ ಜನರ ಸಂಪತ್ತಿಗೆ ಸಮ ನಾದ ಸಂಪತ್ತನ್ನು 22 ಮಂದಿ ಹೊಂದಿದ್ದಾರೆ. ಕೇವಲ ಶೇ. 1ರಷ್ಟು ಜನರು ರಾಷ್ಟ್ರದ ಶೇ. 40 ರಷ್ಟು ಸಂಪತ್ತನ್ನು ನಿಯಂತ್ರಿಸುತ್ತಿದ್ದಾರೆ. ಪ್ರಸ್ತುತ ಪರಿಸ್ಥಿತಿಯಲ್ಲಿ ದಲಿತರು, ಒಬಿಸಿಗಳು, ಬುಡಕಟ್ಟುಗಳು, ಅಲ್ಪಸಂಖ್ಯಾತರು ಮತ್ತು ಬಡ ಸಾಮಾನ್ಯ ವರ್ಗದ ಜನರಿಗೆ ಯಾವುದೇ ಮಾನ್ಯತೆ ಇಲ್ಲʼ ಎಂದು ಹೇಳಿದರು. 

ʻನಾನು ಒಂದು ಸಾಲಿನಲ್ಲಿ ಹೇಳುತ್ತೇನೆ- ಮೋದಿಯವರು ಕೋಟ್ಯಧಿಪತಿಗಳಿಗೆ ನೀಡಿದ ಸಂಪತ್ತನ್ನು ನಾವು ದೇಶದ ಬಡ ಜನರಿಗೆ ನೀಡಲಿ ದ್ದೇವೆ. ಪಕ್ಷ ಅಧಿಕಾರಕ್ಕೆ ಬಂದರೆ 'ಅಗ್ನಿಪಥ್‌ ಯೋಜನೆಯನ್ನು ರದ್ದುಗೊಳಿಸಲಾಗುತ್ತದೆ. ಈ ಯೋಜನೆ ಸೇನೆ ಮತ್ತು ಸೈನಿಕರಿಗೆ ಮಾಡಿದ ಅವಮಾನʼ ಎಂದು ಬಣ್ಣಿಸಿದರು.

ʻಐದು ವಿಭಿನ್ನ ರೀತಿಯ ತೆರಿಗೆಗಳಿರುವ ದೋಷಪೂರಿತ ಜಿಎಸ್ಟಿಯನ್ನು ಪರಿಚಯಿಸಿದರು. ಕಾಂಗ್ರೆಸ್ ಜಿಎಸ್‌ಟಿಯನ್ನು ಬದಲಿಸಿ, ರಾಜ್ಯದ ಜನತೆಗೆ ಆಗಿರುವ ಅನ್ಯಾಯವನ್ನು ಸರಿಪಡಿಸಲಿದೆʼ ಎಂದರು. ʻಇದು ಹಿಂದೆ ನಡೆಯುತ್ತಿದ್ದ ಚುನಾವಣೆಯಲ್ಲ. ಏಕೆಂದರೆ, ದೇಶದ ಇತಿಹಾಸದಲ್ಲಿ ಮೊದಲ ಬಾರಿಗೆ ಒಂದು ಪಕ್ಷ ಮತ್ತು ವ್ಯಕ್ತಿ ಸಂವಿಧಾನ ಹಾಗೂ ಪ್ರಜಾಪ್ರಭುತ್ವವನ್ನು ನಾಶಮಾಡಲು ಬಯಸಿದ್ದಾರೆ,ʼ ಎಂದು ಹೇಳಿದರು. 

Tags:    

Similar News