ಚುನಾವಣೆ 4ನೇ ಹಂತ: ಬಂಗಾಳದಲ್ಲಿ ಘರ್ಷಣೆ; 11 ಗಂಟೆವರೆಗೆ ಶೇ.24.8 ಮತದಾನ
ಜೊತೆಗೆ, ಆಂಧ್ರಪ್ರದೇಶದ 175 ಮತ್ತು ಒಡಿಶಾದ 28 ವಿಧಾನಸಭೆ ಸ್ಥಾನಗಳಿಗೂ ಮತ ಚಲಾವಣೆ ನಡೆಯುತ್ತಿದೆ.;
ಲೋಕಸಭೆ ಚುನಾವಣೆಯ ನಾಲ್ಕನೇ ಹಂತದ ಮತದಾನ ಸೋಮವಾರ (ಮೇ 13) ಬೆಳಗ್ಗೆ 7 ಗಂಟೆಗೆ ಆರಂಭವಾಗಿದೆ. 10 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ 96 ಕ್ಷೇತ್ರಗಳಲ್ಲಿ ಮತದಾನ ನಡೆಯುತ್ತಿದೆ.
ಚುನಾವಣೆ ಏಳು ಹಂತಗಳಲ್ಲಿ ನಡೆಯುತ್ತಿದ್ದು, ಮೊದಲ ಮೂರು ಹಂತದಲ್ಲಿ 283 ಕ್ಷೇತ್ರಗಳಲ್ಲಿ ಮತದಾನ ಮುಕ್ತಾಯವಾಗಿದೆ.
4 ನೇ ಹಂತದಲ್ಲಿ 8.73 ಕೋಟಿ ಮಹಿಳೆಯರು ಸೇರಿದಂತೆ 17.70 ಕೋಟಿಗೂ ಹೆಚ್ಚು ಅರ್ಹ ಮತದಾರರು 1.92 ಲಕ್ಷ ಮತಗಟ್ಟೆಗಳಲ್ಲಿ ಮತ ಚಲಾವಣೆ ಮಾಡಲಿದ್ದಾರೆ. 19 ಲಕ್ಷಕ್ಕೂ ಅಧಿಕ ಮತಗಟ್ಟೆ ಅಧಿಕಾರಿಗಳನ್ನು ನಿಯೋಜಿಸಲಾಗಿದೆ. 1,717 ಅಭ್ಯರ್ಥಿಗಳು ಕಣದಲ್ಲಿದ್ದಾರೆ.
ತೆಲಂಗಾಣದ ಎಲ್ಲ 17 ಲೋಕಸಭೆ ಸ್ಥಾನಗಳು, ಆಂಧ್ರಪ್ರದೇಶದ ಎಲ್ಲ 25 ಸ್ಥಾನಗಳು, ಉತ್ತರ ಪ್ರದೇಶದ 13, ಬಿಹಾರದ 5, ಜಾರ್ಖಂಡ್ 4, ಮಧ್ಯಪ್ರದೇಶ 8, ಮಹಾರಾಷ್ಟ್ರ 11, ಒಡಿಶಾ 4, ಪಶ್ಚಿಮ ಬಂಗಾಳ 8 ಮತ್ತು ಜಮ್ಮು-ಕಾಶ್ಮೀರದ ಒಂದು ಸ್ಥಾನಕ್ಕೆ ಮತ ಚಲಾವಣೆ ನಡೆ ಯುತ್ತಿದೆ.
ಜೊತೆಗೆ, ಆಂಧ್ರಪ್ರದೇಶದ 175 ಮತ್ತು ಒಡಿಶಾದ 28 ವಿಧಾನಸಭೆ ಸ್ಥಾನಗಳಿಗೂ ಮತ ಚಲಾವಣೆ ನಡೆಯುತ್ತಿದೆ.