ಲೋಕಸಭೆ ಚುನಾವಣೆಯ ಮೊದಲ ಹಂತದಲ್ಲಿ ಶೇ.63.89ರಷ್ಟು ಮತದಾನವಾಗಿದೆ ಎಂದು ಚುನಾವಣಾ ಆಯೋಗ (ಇಸಿ) ತಿಳಿಸಿದೆ.
ಸಂಜೆ 6 ಗಂಟೆಗೆ ಮತದಾನ ಮುಗಿದಾಗ ಸರದಿಯಲ್ಲಿದ್ದ ಜನರಿಗೆ ತಮ್ಮ ಹಕ್ಕು ಚಲಾಯಿಸಲು ಅವಕಾಶ ನೀಡಲಾಗಿದೆ ಎಂದು ಆಯೋಗ ಹೇಳಿದೆ.
ʻಹಲವು ಕ್ಷೇತ್ರಗಳಲ್ಲಿ ಸಂಜೆ 6 ಗಂಟೆವರೆಗೆ ಮತದಾನ ನಡೆಯಲಿದ್ದು, ಎಲ್ಲ ಮತಗಟ್ಟೆಗಳ ವರದಿಗಳನ್ನು ಪಡೆದ ಬಳಿಕ ಮತದಾನದ ಶೇಕಡಾವಾರು ಏರಿಕೆಯಾಗುವ ಸಾಧ್ಯತೆಯಿದೆ. ಶನಿವಾರದಂದು ನಮೂನೆ 17ಎ ಪರಿಶೀಲನೆಯ ನಂತರ ಅಂತಿಮ ಅಂಕಿಅಂಶ ತಿಳಿಯಲಿದೆʼ ಎಂದು ಇಸಿ ತಿಳಿಸಿದೆ.
ಏಳು ಹಂತಗಳ ಚುನಾವಣೆಯಲ್ಲಿ 21 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ 102 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ನಡೆದಿದೆ. ಮತ ಚಲಾವಣೆ ಪ್ರಮಾಣ ಅಧಿಕ ಎಂದು ಆಯೋಗ ಹೇಳಿದೆ. ಮತದಾನ ಬಹುತೇಕ ʻಶಾಂತಿಯುತʼವಾಗಿತ್ತು.
2019ರ ಲೋಕಸಭೆ ಚುನಾವಣೆಯ ಮೊದಲ ಹಂತದಲ್ಲಿ ಶೇ.69.43ರಷ್ಟು ಮತದಾನವಾಗಿತ್ತು ಮತ್ತು ಚುನಾವಣೆ ನಡೆದ ಸ್ಥಾನಗಳ ಸಂಖ್ಯೆ 91 ಆಗಿತ್ತು.ಉತ್ತರಾಖಂಡ, ಅರುಣಾಚಲ ಪ್ರದೇಶ, ಸಿಕ್ಕಿಂ, ಮೇಘಾಲಯ, ನಾಗಾಲ್ಯಾಂಡ್, ಮಿಜೋರಾಂ, ತಮಿಳುನಾಡು, ಕೇಂದ್ರಾಡಳಿತ ಪ್ರದೇಶಗಳಾದ ಪುದುಚೇರಿ, ಅಂಡಮಾನ್- ನಿಕೋಬಾರ್ ದ್ವೀಪಗಳು ಮತ್ತು ಲಕ್ಷದ್ವೀಪ ಸೇರಿದಂತೆ ಒಂದೇ ಹಂತದಲ್ಲಿ ಮತ ಚಲಾವಣೆ ಪ್ರಕ್ರಿಯೆಯನ್ನು ಪೂರ್ಣಗೊಳಿಸಿವೆ.
ದೇಶದ ಹೆಚ್ಚಿನ ಭಾಗಗಳಲ್ಲಿ ತೀವ್ರ ಬಿಸಿಲು ಹಾಗೂ ಇತರೆಡೆ ಸುರಿಯುವ ಮಳೆಯಲ್ಲಿ ತಾಳ್ಮೆಯಿಂದ ಕಾಯ್ದು ಮತ ಚಲಾವಣೆ ಮಾಡಿದರು.
ರಾಜ್ಯವಾರು ಅಂಕಿಅಂಶ(ಶೇ):
ಅಂಡಮಾನ್ ಮತ್ತು ನಿಕೋಬಾರ್ ದ್ವೀಪ: 56.87
ಅರುಣಾಚಲ ಪ್ರದೇಶ: 67.7
ಅಸ್ಸಾಂ: 72.12
ಬಿಹಾರ: 48.88
ಛತ್ತೀಸ್‌ಗಢ: 63.41
ಜಮ್ಮು ಮತ್ತು ಕಾಶ್ಮೀರ: 68.27
ಲಕ್ಷದ್ವೀಪ: 83.88
ಮಧ್ಯಪ್ರದೇಶ: 67.08
ಮಹಾರಾಷ್ಟ್ರ: 61.87
ಮಣಿಪುರ: 69.13
ಮೇಘಾಲಯ: 74.51
ಮಿಜೋರಾಂ: 54.18
ನಾಗಾಲ್ಯಾಂಡ್: 56.91
ಪುದುಚೇರಿ: 78.8
ರಾಜಸ್ಥಾನ: 57.26
ಸಿಕ್ಕಿಂ: 80.03
ತಮಿಳುನಾಡು: 69.46
ತ್ರಿಪುರ: 81.62
ಉತ್ತರ ಪ್ರದೇಶ: 60.25
ಉತ್ತರಾಖಂಡ: 55.89
ಪಶ್ಚಿಮ ಬಂಗಾಳ: 80.55
(ಅಂತಿಮ ಅಂಕಿಅಂಶ ಬದಲಾಗಬಹುದು)