ರೈಲು ಹತ್ತುವ ಯತ್ನದಲ್ಲಿ ಸಾವು: ಮಹಿಳೆ ಕುಟುಂಬಕ್ಕೆ ಹೈಕೋರ್ಟ್ ಪರಿಹಾರ

Update: 2024-05-14 10:53 GMT

ಬೆಂಗಳೂರು, ಮೇ 14 - ರೈಲು ಹತ್ತಲು ಯತ್ನಿಸಿ ದುರಂತ ಸಾವು ಕಂಡ ಮಹಿಳೆಯ ಕುಟುಂಬಕ್ಕೆ ಕರ್ನಾಟಕ ಹೈಕೋರ್ಟ್ 8 ಲಕ್ಷ ರೂ. ಪರಿಹಾರ ನೀಡಿದೆ. 

ಜಯಮ್ಮ ಮತ್ತು ಆಕೆಯ ಸಹೋದರಿ ರತ್ನಮ್ಮ ಫೆ.2014 ರಲ್ಲಿ ಅಶೋಕಪುರಂ/ಮೈಸೂರಿಗೆ ಹೋಗುವ ತಿರುಪತಿ ಪ್ಯಾಸೆಂಜರ್ ರೈಲಿನ ಬದಲು ತಪ್ಪಾಗಿ ತೂತುಕುಡಿ ಎಕ್ಸ್‌ಪ್ರೆಸ್ ಹತ್ತಿದರು. ರೈಲು ಚಲಿಸಲು ಪ್ರಾರಂಭಿಸಿದಾಗ ತಮ್ಮ ತಪ್ಪಿನ ಅರಿವಾಗಿ, ಗಾಬರಿಗೊಂಡು ಇಳಿಯಲು ಪ್ರಯತ್ನಿಸಿ ದರು. ಜಯಮ್ಮ‌ ಪ್ಲಾಟ್‌ಫಾರ್ಮ್‌ ಮೇಲೆ ಬಿದ್ದು ತೀವ್ರ ಗಾಯಗೊಂಡು ಮೃತಪಟ್ಟರು. ರೈಲ್ವೆ ಕ್ಲೈಮ್ಸ್ ನ್ಯಾಯಮಂಡಳಿಯು ಮುಂದಿನ ನಿಲ್ದಾಣದವರೆಗೆ ಪ್ರಯಾಣ ಮುಂದುವರಿಸುವುದು ಅಥವಾ ಎಚ್ಚರಿಕೆ ಸರಪಳಿಯನ್ನು ಎಳೆಯುವುದು ಮುಂತಾದ ಲಭ್ಯ ಆಯ್ಕೆಗಳನ್ನು ಬಳಸಿಕೊಳ್ಳುವಲ್ಲಿ ಜಯಮ್ಮ ವಿಫಲರಾಗಿದ್ದಾರೆ ಎಂದು ಹೇಳಿತು. ಭಾರತೀಯ ರೈಲ್ವೆ ಕಾಯಿದೆಯ ಸೆಕ್ಷನ್ 124 ಎ ಅಡಿಯಲ್ಲಿ ಜಯಮ್ಮ ಅವರ ಸಾವನ್ನು ʻಸ್ವಯಂಹಾನಿʼ ಎಂದು ಪರಿಗಣಿಸಿ, ಪರಿಹಾರವನ್ನು ನಿರಾಕರಿಸಿತು. 

ಆದರೆ, ಕರ್ನಾಟಕ ಹೈಕೋರ್ಟ್‌ನ ನ್ಯಾಯಮೂರ್ತಿ ಎಚ್‌.ಪಿ. ಸಂದೇಶ್ ಅವರು ನ್ಯಾಯಮಂಡಳಿಯ ವ್ಯಾಖ್ಯಾನವನ್ನು ಒಪ್ಪಲಿಲ್ಲ. ʻಜಯಮ್ಮ ಅವರು ನಿಜವಾದ ಪ್ರಯಾಣಿಕರು ಮತ್ತು ಅವರ ಸಾವು 'ಅಹಿತಕರ ಘಟನೆಯಿಂದ' ಸಂಭವಿಸಿದೆʼ ಎಂದು ಹೇಳಿದರು. ʻನ್ಯಾಯಾಧಿಕರಣ ಸೆಕ್ಷನ್ 124-ಎ ಮೇಲೆ ಅವಲಂಬಿತವಾಗಿದೆ. ಪ್ರಕರಣದಲ್ಲಿ ಅದನ್ನು ತಪ್ಪಾಗಿ ಅನ್ವಯಿಸಲಾಗಿದೆʼ ಎಂದು ಹೇಳಿದರು.

ನ್ಯಾಯಾಲಯ ಶೇ.7 ಬಡ್ಡಿಯೊಂದಿಗೆ ನಾಲ್ಕು ಲಕ್ಷ ರೂ. ಪರಿಹಾರ ಪಾವತಿಸಲು ರೈಲ್ವೆಗೆ ಆದೇಶ ನೀಡಿದೆ. ಅಂತಿಮ ಮೊತ್ತ ಎಂಟು ಲಕ್ಷ ರೂ.ಗಿಂತ ಕಡಿಮೆಯಿರಬಾರದು ಎಂದು ಹೇಳಿದೆ. 

Tags:    

Similar News